ವಿಶೇಷವಾಗಿ ಹೊಸ ವರ್ಷ ಆಚರಿಸಿದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ಹೊಸ ವರ್ಷವನ್ನು ಟ್ರೆಡಿಷನಲ್ ಆಗಿ ಆಚರಿಸಿದ ಬ್ಯೂಟಿ….!

Follow Us :

ಸಿನಿರಂಗದಲ್ಲಿ ಗ್ಲಾಮರ್‍ ಶೋ ಮಾಡದೇ ಸ್ಟಾರ್‍ ನಟಿಯಾದವರಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಸಿನೆಮಾಗಳಲ್ಲಿ ಗ್ಲಾಮರ್‍ ಶೋಗೆ ಯಾವುದೇ ರೀತಿಯ ಆಸ್ಪದ ನೀಡಿದೇ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆಕೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಸಕ್ಸಸ್ ಕಂಡಿದೆ. ಇದೀಗ ಆಕೆ ಹೊಸ ವರ್ಷವನ್ನೂ ಸಹ ಟ್ರೆಡಿಷನಲ್ ಆಗಿ ಆಚರಿಸಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಲೇಡಿ ಪವರ್‍ ಸ್ಟಾರ್‍ ಎಂದೇ ಕರೆಯಲಾಗುವ ನಟಿ ಸಾಯಿ ಪಲ್ಲವಿ ಆಗಾಗ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುತ್ತಿರುತ್ತಾರೆ. ವಿಶೇಷ ದಿನಗಳಂದು ಆಕೆ ವಿಶೇಷವಾಗಿ ತನ್ನದೇ ಆದ ಶೈಲಿಯಲ್ಲಿ ಆಚರಿಸಿಕೊಳ್ಳುತ್ತಾರೆ. ಇದೀಗ ಆಕೆ ಹೊಸ ವರ್ಷವನ್ನೂ ಸಹ ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಆಕೆಯ ಈ ಹೊಸ ವರ್ಷದ ಆಚರಣೆಗೆ ಅನೇಕರು ಪ್ರಶಂಸೆ ಮಾಡುತ್ತಿದ್ದಾರೆ. ಸುಮಾರು ಮಂದಿ ಸೆಲೆಬ್ರೆಟಿಗಳು ವಿದೇಶಗಳು, ಪಾರ್ಟಿಗಳು, ರೆಸಾರ್ಟ್‌ಗಳು, ಬೀಚ್ ಗಳಲ್ಲಿ ಎಂಜಾಯ್ ಮಾಡುತ್ತಾ ಹೊಸ ವರ್ಷ ಆಚರಿಸಿದ್ದಾರೆ. ಆದರೆ ಸಾಯಿಪಲ್ಲವಿ ಮಾತ್ರ ಪುಟ್ಟಪರ್ತಿ ಸಾಯಿಬಾಬ ಮಂದಿರದಲ್ಲಿ ಕುಟುಂಬದೊಂದಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಾಬ ನಾಮಸ್ಮರಣೆ ಮಾಡುತ್ತಾ ಆಧ್ಯಾತ್ಮಿಕತೆ ಸಾರಿದ್ದಾರೆ. ಸಂಪ್ರದಾಯಬದ್ದವಾಗಿ ಸೀರೆಯನ್ನು ಧರಿಸಿಕೊಂಡು ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳನ್ನು ಕಂಡ ಸಾಯಿ ಪಲ್ಲವಿ ಫ್ಯಾನ್ಸ್ ಹಾಗೂ ನೆಟ್ಟಿಗರು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ನಟಿ ಸಾಯಿಪಲ್ಲವಿ ಸುಮಾರು ದಿನಗಳ ಬಳಿಕ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ತಂಡೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಕರ್ನಾಟಕದ ಗೋಕರ್ಣದಲ್ಲೂ ಮಾಡಲಾಗಿತ್ತು. ನಟನೆಯ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ಈಕೆ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಖಾತೆಗೆ ಹಾಕಿಕೊಂಡಿದ್ದಾರೆ. ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಾ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಕಳೆದ ವರ್ಷ ಆಕೆ ವಿರಾಟಪರ್ವಂ ಹಾಗೂ ಗಾರ್ಗಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾಗಳ ಬಳಿಕ ಆಕೆ ಯಾವುದೇ ಸಿನೆಮಾಗಳನ್ನು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಆಕೆ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ರೂಮರ್‍ ಗಳೂ ಸಹ ಹುಟ್ಟಿಕೊಂಡಿದ್ದವು. ಆದರೆ ತಮಿಳು ಹಿರೋ ಶಿವ ಕಾರ್ತಿಕೇಯನ್ ಜೊತೆ ಸಿನೆಮಾ ಘೋಷಣೆ ಮಾಡಿ ಎಲ್ಲ ರೂಮರ್‍ ಗಳಿಗೆ ಬ್ರೇಕ್ ಹಾಕಿದರು.