ಮೊದಲ ಬಾರಿಗೆ ತನ್ನ ಮಗಳ ಮುಖ ತೋರಿಸಿದ ಧ್ರುವ ಸರ್ಜಾ, ವೈರಲ್ ಆದ ಪೊಟೋ….!

ಕನ್ನಡ ಸಿನಿರಂಗದ ನಟ ಧ್ರುವಾ ಸರ್ಜಾ ಕಳೆದ ವರ್ಷ ಅ.2 ರಂದು ಹೆಣ್ಣು ಮಗುವಿಗೆ ತಂದೆಯಾದರು. ಧ್ರುವಾ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಮುದ್ದಾದ ಹೆಣ್ಣು ಮಗಳ ಜನನವಾಯಿತು. ಇನ್ನೂ ಮಗಳು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಪೊಟೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರಲಿಲ್ಲ. ಈ ಹಿಂದೆ ಮಗಳ ಪೊಟೋ ಒಂದನ್ನು ಹಂಚಿಕೊಂಡಿದ್ದರೂ ಸಹ ಮುಖ ಮಾತತ್ರ ತೋರಿಸಿಲ್ಲ. ಇದೀಗ ಏಳು ತಿಂಗಳ ಬಳಿಕ ಮಗಳ ಪೊಟೋವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಸಿನಿರಂಗದ ನಟ ಧ್ರುವ ಸರ್ಜಾ ಹಾಗೂ ಪ್ರೇರಣ ರವರಿಗೆ ಮುದ್ದಾದ ಹೆಣ್ಣು ಮಗಳ ಜನನವಾಗಿದೆ. ಇನ್ನೂ ಮಗಳು ಹುಟ್ಟಿದಾಗಿನಿಂದ ಪೊಟೋ ಹಂಚಿಕೊಂಡಿರಲಿಲ್ಲ. ಮಗು ಹುಟ್ಟಿ ಏಳು ತಿಂಗಳ ಬಳಿಕ ಧ್ರುವ ಸರ್ಜಾ ಮಗಳ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ಈಗಿನ ಪೊಟೋಗಳಲ್ಲ. ಬದಲಿಗೆ ಧ್ರುವ ಸರ್ಜಾ ಪುತ್ರಿಗೆ ಒಂದು ತಿಂಗಳ ಸಮಯದಲ್ಲಿ ತೆಗೆದಂತಹ ಪೊಟೋಗಳಾಗಿವೆ. ಇದಿಗ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೊಟೋಗಳ ಜೊತೆಗೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ.  ಹಲೋ ಸ್ನೇಹಿತರೆ ಹಾಗೂ ಕುಟುಂಬದವರೇ ನಿಮ್ಮೆಲ್ಲರಿಗೂ ನನ್ನ ಪ್ರೀತಿ, ನನಗೆ ಇನ್ನೂ ಹೆಸರನ್ನು ಇಟ್ಟಿಲ್ಲ. ನನಗೆ ಇದೀಗ ಏಳು ತಿಂಗಳು, ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಪಡುತ್ತೇನೆ. ನನಗೆ ಒಂದು ತಿಂಗಳು ವಯಸ್ಸಿರುವಾಗ ಕ್ಲಿಕ್ ಮಾಡಿದ ಪೊಟೊಗಳು ಇವು. ಇವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

ನಟ ಧ್ರುವಾ ಸರ್ಜಾ ಕುಟುಂಬದಲ್ಲಿ ಮಗಳು ಬಂದ ಮೇಲೆ ಖುಷಿ ಹೆಚ್ಚಾಗಿದೆ ಎನ್ನಲಾಗಿದೆ. ಧ್ರುವಾ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂತಲೂ ಕರೆಯಲಾಗುತ್ತದೆ. ಅದರಲ್ಲೂ ಮಗಳು ಹುಟ್ಟಿದ ಬಳಿಕ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕಳೆದ 2019 ರ ನವೆಂಬರ್‍ 24 ರಂಉದ ಧ್ರುವ ಸರ್ಜ ಹಾಗೂ ಪ್ರೇರಣ ಸಪ್ತಪದಿ ತುಳಿದರು.  ಮದುವೆಯಾದ ಮೂರು ವರ್ಷಗಳ ಬಳಿಕ ಅಂದರೇ ಸೆಪ್ಟೆಂಬರ್‍ 3 ರಂದು ಪ್ರೇರಣ ಮುದ್ದಾದ ಹೆಣ್ಣು ಮಗಳಿಗೆ ಜನ್ಮ ಕೊಟ್ಟರು. ಈ ಸಂತಸದ ಸುದ್ದಿಯನ್ನು ಧ್ರುವ ಸರ್ಜಾ ತನ್ನ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಮಗಳ ಮುಖವನ್ನು ಮೊದಲ ಬಾರಿಗೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದುಕೊಂಡಿರುವ ಧ್ರುವಾ ಸರ್ಜಾ ಬಹುನಿರೀಕ್ಷಿತ ಮಾರ್ಟಿನ್ ಎಂಬ ಸಿನೆಮಾದ ಮೂಲಕ ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡ ಕನ್ನಡದ ಟೀಸರ್‍ ಪಟ್ಟಿಯಲ್ಲಿ ಮಾರ್ಟಿನ್ ಎರಡನೇ ಸ್ಥಾನ ಪಡೆದುಕೊಂಡಿದೆ. ಯೂಟ್ಯೂಬ್ ನಲ್ಲಿ ಈ ಟೀಸರ್‍ 77 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸದ್ಯ ಈ ಸಿನೆಮಾಗಾಗಿ ಧ್ರುವಾ ಸರ್ಜಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.