ಸೆಲ್ಫಿಗಾಗಿ ಬಂದ ಬಾಲಕನ ತಲೆಗೆ ಹೊಡೆದ ನಾನಾ ಪಾಟೇಕರ್, ನೆಟ್ಟಿಗರ ಆಕ್ರೋಷಕ್ಕೆ ಗುರಿಯಾದ ನಟ….!

Follow Us :

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಿಗೆ ಅತೀ ಹೆಚ್ಚು ಅಭಿಮಾನಿಗಳಿರುತ್ತಾರೆ. ಅವರನ್ನು ನೋಡಿದಾಗ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಇದೇ ಸಮಯದಲ್ಲಿ ಸೆಲೆಬ್ರೆಟಿಗಳು ಸಹ ಕಿರಿಕಿರಿಯನ್ನು ಅನುಭವಿಸುತ್ತಿರುತ್ತಾರೆ. ಸೆಲ್ಫಿಗಾಗಿ ಹೋದ ಅನೇಕ ಅಭಿಮಾನಿಗಳು ಅವರಿಂದ ಹೊಡೆಸಿಕೊಂಡ ಘಟನೆಗಳೂ ಸಹ ನಡೆದಿದೆ. ಇದೀಗ ನಾನಾ ಪಾಟೇಕರ್‍ ಸಹ ಸೆಲ್ಫಿ ತೆಗೆದುಕೊಳ್ಳಲು ಹೋದ ಬಾಲಕನ ತಲೆಗೆ ಹೊಡೆದು ಆತನನ್ನು ದೂರ ತಳ್ಳಿದ್ದಾರೆ. ಈ ಕೃತ್ಯಕ್ಕೆ ನೆಟ್ಟಿಗರಿಂದ ಆಕ್ರೋಷ ವ್ಯಕ್ತವಾಗುತ್ತಿದೆ.

ಬಾಲಿವುಡ್ ನಟ ನಾನಾ ಪಾಟೇಕರ್‍ ಅನೇಕ ಸಿನೆಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ದೊಡ್ಟ ಮಟ್ಟದ ಖ್ಯಾತಿ ಪಡೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ಸೆಲ್ಫಿ ತೆಗೆಸಿಕೊಳ್ಳಲು ಹೋದಂತಹ ಬಾಲಕನ ತಲೆಗೆ ಹೊಡೆದು ಆತನನ್ನು ಓಡಿಸಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರು ಸಹ ಆಕ್ರೋಷ ಹೊರಹಾಕುತ್ತಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೆಂಪು ಬಣ್ಣದ ಟವೆಲ್ ಹಾಕಿಕೊಂಡು ಕಪ್ಪು ಟೀ ಶರ್ಟ್ ಧರಿಸಿದ ಹುಡುಗನೊಬ್ಬ ಓಡಿಬಂದು ನಾನಾ ಪಾಟೇಕರ್‍ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಕೋಪಗೊಂಡ ಪಾಟೇಕರ್‍ ಅವನ ತಲೆಗೆ ಹೊಡೆದು, ಹಿಂಭಾಗಕ್ಕೆ ಹೊಡೆದು ದೂರ ತಳ್ಳಿದ್ದಾರೆ. ಇದೇ ವೇಳೆ ಮತ್ತೋರ್ವ ವ್ಯಕ್ತಿ ಆ ಬಾಲಕನನ್ನು ದೂರ ಕಳುಹಿಸಿದ್ದಾನೆ.

ಇನ್ನೂ ಈ ಘಟನೆ ವಾರಣಾಸಿಯಲ್ಲಿ ನಡೆಯುತ್ತಿದ್ದ ಸಿನೆಮಾ ಶೂಟಿಂಗ್ ವೇಳೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆತನ ಕೃತ್ಯದ ವಿರುದ್ದ ವಿವಿಧ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನೀವು ಓರ್ವ ಸಿನೆಮಾ ಹಿರೋ ಆಗಿದ್ದು ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ. ಸಿನೆಮಾ ಸೆಲೆಬ್ರೆಟಿಗಳ ಬಳಿ ಸೆಲ್ಫಿ ತೆಗೆಸಿಕೊಳ್ಳು ಏಕೆ ಅಷ್ಟೊಂದು ಕ್ರೇಜ್. ಅವರ ಬಳಿ ಒದೆ ತಿನ್ನುವುದು ಬೇಕಾಗಿತ್ತಾ ಎಂದರೇ ಮತ್ತೆ ಕೆಲವರು ಸಿನೆಮಾಗಳಿಗೂ ಥಿಯೇಟರ್‍ ಗಳಲ್ಲಿ ಅದೇ ಮಾದರಿಯಲ್ಲಿ ಪೆಟ್ಟು ಬಿದ್ದಾಗ ಅಭಿಮಾನಿಗಳ ಬೆಲೆ ಏನು ಎಂಬುದು ತಿಳಿಯು‌ತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ನಾನಾ ಪಾಟೇಕರ್‍ ವಿರುದ್ದ ಈ ಹಿಂದೆ ಅತ್ಯಾಚಾರದ ಆರೋಪ ಸಹ ಕೇಳಿಬಂದಿತ್ತು. ನಟಿ ತನು ಶ್ರೀ ದತ್ತ ಆತನ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಈ ಬಗ್ಗೆ ಎಫ್.ಐ.ಆರ್‍ ಸಹ ದಾಖಲಾಗಿತ್ತು.