Film News

ಸಿನಿರಂಗದಲ್ಲಿನ ಕರಾಳ ಸತ್ಯಗಳನ್ನು ಹೊರಹಾಕಿದ ಅದಾ ಶರ್ಮಾ, ಅಂತವರ ಜೊತೆ ಕೆಲಸ ಮಾಡೊಲ್ಲ ಎಂದ ನಟಿ…..!

ಸಿನಿರಂಗದಲ್ಲಿ ಮಿಟೂ ಉದ್ಯಮ ಆರಂಭವಾದ ಬಳಿಕ ಅನೇಕ ನಟಿಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಒಪೆನ್ ಆಗಿದ್ದಾರೆ. ಸಿನಿರಂಗದಲ್ಲಿ ಅವಕಾಶಗಳಿಗಾಗಿ ತಮಗೆ ಸಹಕರಿಸಬೇಕೆಂದು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅನೇಕರು ಕಿರುಕುಳ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಇದೀಗ ನಟಿ ಅದಾ ಶರ್ಮಾ ಸಹ ತಮ್ಮ ಕೆರಿಯರ್‍ ನಲ್ಲಾದ ಕೆಟ್ಟ ಅನುಭವಗಳನ್ನು ಹೊರಹಾಕಿದ್ದಾರೆ. ನನಗೆ ಅಂತಹವರ ಜೊತೆಗೆ ನಟಿಸುವುದು ಕೊಂಚವೂ ಇಷ್ಟವಿಲ್ಲ ಎಂದು ಅದಾ ಶರ್ಮಾ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಅದಾ ಶರ್ಮಾ ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅನೇಕ ಪ್ರತಿಭಾವಂತ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಆದರೆ ಆಕೆಗೆ ಆದಂತಹ ಕೆಟ್ಟ ಅನುಭವಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಸಿನೆಮಾ ತೆರೆಗೆ ಬಂದಿದ್ದು, ಸುಮಾರು ಇನ್ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಈ ಸಿನೆಮಾದಿಂದ ಆಕೆಯ ಕೆರಿಯರ್‍ ಮತಷ್ಟು ಮೆರುಗು ಗೊಂಡಿದೆ. ಈ ಸಿನೆಮಾದ ಬಳಿಕ ಅದಾ ಶರ್ಮಾಗೆ ಸಾಲು ಸಾಲು ಅವಕಾಶಗಳೂ ಸಹ ಬರುತ್ತಿವೆ ಎನ್ನಲಾಗುತ್ತಿದೆ. ಇನ್ನೂ ಅದಾ ಶರ್ಮಾ ಇದೀಗ ಸಿನಿರಂಗದಲ್ಲಿನ ತಾರತಮ್ಯದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟ ಹಾಗೂ ನಟಿಯರ ಮಧ್ಯೆ ಭೇದಭಾವ ತೋರುವಂತಹ ನಿರ್ದೇಶಕರ ಜೊತೆಗೆ ನನಗೆ ಕೆಲಸ ಮಾಡಲು ಕೊಂಚವೂ ಇಷ್ಟವಿಲ್ಲ ಎಂದಿದ್ದಾರೆ.

ನಟಿ ಅದಾ ಶರ್ಮಾ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಸೌತ್ ಅಂಡ್ ನಾರ್ತ್ ಎರಡೂ ಸಿನಿರಂಗದಲ್ಲೂ ಕೆಲವು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೇನೆ. ಅವರ ಪೈಕಿ ಒಳ್ಳೆಯವರು ಕೆಟ್ಟವರೂ ಸಹ ಇದ್ದಾರೆ. ಇದು ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಿರ್ಧಾರವಾಗಿರುತ್ತದೆ ಎಂದು ತಿಳಿಯಿತು. ಇನ್ನೂ ಭಾಷೆ ಯಾವುದೇ ಇರಲಿ, ನಿರ್ದೇಶಕ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರೇ ಎಲ್ಲ ಸರಿಯಿರುತ್ತದೆ ಇಲ್ಲ ಅಂದರೇ ಎಲ್ಲಾ ಸರಿಯಿರಲ್ಲ. ನಾನು ಕೆಟ್ಟ ಹಾಗೂ ಅತೀ ಕೆಟ್ಟ ಜನರನ್ನು ನೋಡಿದ್ದೇನೆ. ಮೊದಲು ಸೆಟ್ ಗೆ ನಟಿಯನ್ನು ಕರೆದು ಕಾಯಲು ಹೇಳುತ್ತಾರೆ. ಬಳಿಕ ನಟನ ಮ್ಯಾನೇಜರ್‍ ರನ್ನು ಕರೆದು ಹುಡುಗಿ ಕಾಯುತ್ತಿದ್ದಾಳೆ ಎಂದು ಹಿರೋಗೆ ಹೇಳಿ ಕಳಿಹಿಸುತ್ತಾರೆ. ಈ ರೀತಿ ನಟ-ನಟಿ ಎಂಬ ಲಿಂಗ ತಾರತಮ್ಯ ಮಾಡುತ್ತಾರೆ. ಅಂತಹವರ ಜೊತೆ ಕೆಲಸ ಮಾಡಲು ನನಗೆ ಇಷ್ಟವೇ ಇಲ್ಲ. ಸಿನಿರಂಗದಲ್ಲಿನ ಲಿಂಗ ತಾರತಮ್ಯ ತೊಲಗಬೇಕು ಎಂದು ಅದಾ ಶರ್ಮಾ ಹೇಳಿದ್ದಾರೆ.

ಇನ್ನೂ ಕಳೆದ 2008 ರಿಂದ ಸಿನಿಮಾಗಳಲ್ಲಿ ನಟಿಸುತ್ತಿರುವ ಅದಾ ಶರ್ಮಾ ದಿ ಕೇರಳ ಸ್ಟೋರಿ ಸಿನೆಮಾದ ಮೂಲಕ ಕೆರಿಯರ್‍ ನಲ್ಲಿ ಒಳ್ಳೆಯ ಹಿಟ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ದಿ ಗೇಮ್ ಆಫ್ ಗಿರ್ಗಿಟ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಆಕೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿತ್ತು.

Most Popular

To Top