Film News

ಸಲ್ಮಾನ್ ಖಾನ್ ಮದುವೆಯಾಗಲು ಆ ನಟಿಯ ತಂದೆಯನ್ನು ಕೇಳಿದ್ರೆ ನೋ ಎಂದಿದ್ರಂತೆ, ವೈರಲ್ ಆದ ಹಳೇಯ ವಿಡಿಯೋ…!

ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಪರಿಚಯ ಅಗತ್ಯವಿಲ್ಲ. ಇಂದಿಗೂ ಸಹ ಬಾಲಿವುಡ್ ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಲರ್‍ ಎಂದೇ ಖ್ಯಾತಿ ಪಡೆದುಕೊಂಡ ಸಲ್ಮಾನ್ ಖಾನ್ ರವರ ಮದುವೆಯ ಬಗ್ಗೆ ಈಗಲೂ ಸಹ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ಇನ್ನೂ ಸಲ್ಮಾನ್ ಖಾನ್ ರವರು ಒಬ್ಬ ನಟಿಯನ್ನು ಮದುವೆಯಾಗಲು ಇಷ್ಟಪಟ್ಟು ಅವರ ತಂದೆಯ ಬಳಿ ಕೇಳಿದ್ದರಂತೆ. ಅದಕ್ಕೆ ಆ ನಟಿಯ ತಂದೆ ನೇರವಾಗಿಯೇ ನೋ ಎಂದು ಹೇಳಿದರಂತೆ. ಈ ವಿಚಾರವನ್ನು ಸಲ್ಮಾನ್ ಖಾನ್ ರವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ನ ಮೋಸ್ಟ್ ಎಲಿಜಿಬುಲ್ ಬ್ಯಾಚುಲರ್‍ ಆಗಿರುವ ಸಲ್ಮಾನ್ ಖಾನ್ ರವರ ಮದುವೆ ಬಗ್ಗೆ ಇಂದಿಗೂ ಸಹ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಸುಮಾರು ವರ್ಷಗಳಿಂದ ಅವರು ಮದುವೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಮಾಡಿದ್ದಾರೆ. ಅದರಲ್ಲೂ ಮಿಡಿಯಾದವರು ಕೇಳಿದಂತಹ ಮದುವೆಯ ಪ್ರಶ್ನೆಗಳಿಗೆ ಆಕೆ ನಗುತ್ತಾ ಸುಮ್ಮನಾಗುತ್ತಿರುತ್ತಾರೆ. ಜೋಕ್ ಮಾಡುತ್ತಾ ತಪ್ಪಿಸಿಕೊಂಡಿಬಿಡುತ್ತಿದ್ದರು. ಇನ್ನೂ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಓರ್ವ ನಟಿಯನ್ನು ತಾನು ಮದುವೆಯಾಗಲು ಇಷ್ಟಪಟ್ಟಿದ್ದರಂತೆ. ಅಷ್ಟೇಅಲ್ಲದೇ ಆ ನಟಿಯ ತಂದೆಯ ಬಳಿಗೆ ಹೋಗಿ ಮದುವೆಯಾಗುವ ಪ್ರಸ್ತಾಪವನ್ನು ಸಹ ಇಟ್ಟಿದ್ದರಂತೆ. ಈ ಸಂಬಂಧ ಹಳೇಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ,

ಇನ್ನೂ ಅಷ್ಟಕ್ಕೂ ಸಲ್ಮಾನ್ ಖಾನ್ ಮದುವೆಯಾಗಬೇಕು ಎಂದುಕೊಂಡಿದ್ದ ಆ ನಟಿ ಬೇರೆ ಯಾರೂ ಅಲ್ಲ ಜೂಹಿ ಚಾವ್ಲಾ. ಹೌದು ಸಲ್ಮಾನ್ ಖಾನ್ ಸ್ಟಾರ್‍ ನಟಿ ಜೂಹಿ ಚಾವ್ಲಾ ರವರನ್ನು ಮದುವೆಯಾಗಲು ಇಷ್ಟಪಟ್ಟು ಅವರ ತಂದೆಯ ಬಳಿ ಹೋಗಿ ಕೇಳಿದ್ದರಂತೆ. ಆದರೆ ಆಕೆಯ ತಂದೆ ಒಪ್ಪಿಕೊಂಡಿಲ್ಲವಂತೆ. ಕಳೆದ 1990 ರಲ್ಲಿ ಸಲ್ಮಾನ್ ಖಾನ್ ನೀಡಿದಂತಹ ಸಂದರ್ಶನದ ವಿಡಿಯೋ ಒಂದು ಹರಿದಾಡುತ್ತಿದೆ. ಓರ್ವ ಟ್ವಿಟರ್‍ ಯೂಸರ್‍ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಈ ವಿಡಿಯೋದಲ್ಲಿ ಜೂಗಿ ಸ್ವೀಟ್ ಗರ್ಲ್, ಸುಂಧರವಾದ ಹುಡುಗಿ, ಆಕೆಯನ್ನು ನನಗೆ ಕೊಟ್ಟು ಮದುವೆ ಮಾಡಿ ಎಂದು ಜೂಹಿ ತಂದೆಯನ್ನು ಕೇಳಿದ್ದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಬಳಿಕ ನಿರೂಪಕ ಜೂಹಿ ರವರ ತಂದೆ ಏನು ಹೇಳಿದರು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಲ್ಮಾನ್ ಖಾನ್ ನೋ ಎಂದು ಹೇಳಿದರು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಇನ್ನೂ ಬಾಲಿವುಡ್ ನಲ್ಲಿ ಜೂಹಿ ಚಾವ್ಲಾ ಹಾಗೂ ಸಲ್ಮಾನ್ ಖಾನ್ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಹೋಸ್ಟ್ ಮಾಡುವಂತಹ  ಬಿಗ್ ಬಾಸ್ ನಲ್ಲೂ ಸಹ ಆಕೆ ಅತಿಥಿಯಾಗಿ ಬಂದಿದ್ದರು. ಸದ್ಯ ಸಲ್ಮಾನ್ ಖಾನ್ ರವರ ಹಳೇಯ ಸಂದರ್ಶನದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಜೂಹಿ ಚಾವ್ಲಾ 1995 ರಲ್ಲಿ ಉದ್ಯಮಿ ಮೆಹತಾ ಎಂಬಾತನೊಂದಿಗೆ ವಿವಾಹವಾದರು.

Most Popular

To Top