ಸಲಾರ್ ಸಿನೆಮಾಗೆ A ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಮಂಡಳಿ, ಓನ್ಲಿ ಫಾರ್ ಅಡಲ್ಟ್ ಮೂವಿಯಂತೆ ಸಲಾರ್…..!

ದೇಶದ ಸಿನಿರಂಗದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಸಲಾರ್‍ ಸಿನೆಮಾ ಸಹ ಒಂದಾಗಿದೆ. ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿದ ಈ ಸಿನೆಮಾ ಆರಂಭದಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿತ್ತು.…

ದೇಶದ ಸಿನಿರಂಗದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಸಲಾರ್‍ ಸಿನೆಮಾ ಸಹ ಒಂದಾಗಿದೆ. ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿದ ಈ ಸಿನೆಮಾ ಆರಂಭದಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಅದರಲ್ಲೂ ಕೆಲವು ದಿನಗಳ ಹಿಂದೆಯಷ್ಟೆ ಸಲಾರ್‍ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೀಗ ಈ ಸಿನೆಮಾಗೆ ಸೆನ್ಸಾರ್‍ ಬೋರ್ಡ್ A ಸರ್ಟಿಫಿಕೇಟ್ ನೀಡಿದ್ದು, ಈ ಸಿನೆಮಾ ಓನ್ಲಿ ಫಾರ್‍ ಅಡಲ್ಟ್ಸ್ ಎಂದು ಹೇಳಲಾಗಿದೆ.

ಸ್ಟಾರ್‍ ನಟ ಪ್ರಭಾಸ್ ರವರು ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಬಾಹುಬಲಿ-2 ಸಿನೆಮಾದ ಬಳಿಕ ಪ್ರಭಾಸ್ ಗೆ ಒಳ್ಳೆಯ ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದು. ಬಾಹುಬಲಿ-2 ಸಿನೆಮಾದ ಬಳಿಕ ತೆರೆಕಂಡ ಸಾಹೋ, ರಾಧೇಶ್ಯಾಮ್, ಆದಿಪುರುಷ್ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ಅಭಿಮಾನಿಗಳು ಪ್ರಭಾಸ್ ರವರ ಸಲಾರ್‍ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಸಿನೆಮಾ ಮಾಸ್ ಕಮರ್ಷಿಯಲ್ ಹಿಟ್ ಹೊಡೆಯಬೇಕು ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಸಲಾರ್‍ ಸಿನೆಮಾದ ಟ್ರೈಲರ್‍ ನೋಡಿದ ಬಳಿಕ ಅಭಿಮಾನಿಗಳ ಆಸೆ ದುಪ್ಪಟ್ಟಾಗಿದೆ ಎನ್ನಬಹುದಾಗಿದೆ. ಈ ಸಿನೆಮಾ ಸೆ.28 ರಂದೇ ತೆರೆಕಾಣಬೇಕಾಗಿತ್ತು. ಕೆಲವೊಂದು ಕಾರಣಗಳಿಂದ ಈ ಸಿನೆಮಾ ಪೋಸ್ಟ್ ಪೋನ್ ಆಗಿದ್ದು, ಡಿ.22 ರಂದು ತೆರೆಕಾಣಲಿದೆ.

ಇನ್ನೂ ಸಲಾರ್‍ ಸಿನೆಮಾ ಡಿ.22 ರಂದು ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಸಿನೆಮಾ ಬಿಡುಗಡೆಗೆ ಸಮಯ ಹತ್ತಿರವಿದ್ದು, ಸಿನೆಮಾ ಸೆನ್ಸಾರ್‍ ಕೆಲಸಗಳು ಪೂರ್ಣಗೊಂಡಿದೆ. ಅನೂಹ್ಯವಾಗಿ ಸೆನ್ಸಾರ್‍ ಮಂಡಳಿ ಈ ಸಿನೆಮಾಗೆ A ಸರ್ಟಿಫಿಕೇಟ್ ನೀಡಿದ್ದು, ಓನ್ಲಿ ಫಾರ್‍ ಅಡಲ್ಟ್ ಮೂವಿ ಎಂದು ಹೇಳಿದ್ದಾರೆ. ಸಲಾರ್‍ ಸಿನೆಮಾದಲ್ಲಿ ವೈಲೆನ್ಸ್ ತುಂಬಾನೆ ಕ್ರೂಯಲ್ ಆಗಿದೆಯಂತೆ. ಆದ್ದರಿಂದ ಈ ಸಿನೆಮಾ ಸಣ್ಣ ಮಕ್ಕಳು ನೋಡಬಾರದು ಎಂದು ಹೇಳಲಾಗಿದೆ. ಈ ಸಿನೆಮಾ 2 ಗಂಟೆ 55 ನಿಮಿಷಗಳ ಕಾಲ ಇರಲಿದೆ ಎನ್ನಲಾಗಿದೆ. ಇನ್ನೂ ಟ್ರೈಲರ್‍ ಗೂ ಸಹ ಮಿಶ್ರಪ್ರತಿಕ್ರಿಯೆ ಬಂದಿದೆ. ಆದರೆ ವೀಕ್ಷಣೆಯಲ್ಲಿ ಮಾತ್ರ ರೆಕಾರ್ಡ್ ಮಾಡಿದೆ. ಇನ್ನೂ ಈ ಸಿನೆಮಾ ಕನ್ನಡ ಉಗ್ರಂ ಸಿನೆಮಾದ ರಿಮೇಕ್ ಎಂದೂ ಸಹ ಕಥನಗಳು ಕೇಳಿಬರುತ್ತಿವೆ.