Film News

ಶ್ರದ್ದಾಕಪೂರ್ ಗೆ ಏರ್ ಪೋರ್ಟ್ ನಲ್ಲಿ ಪ್ರಪೋಸ್ ಮಾಡಿದ ಅಭಿಮಾನಿ, ವೈರಲ್ ಆದ ವಿಡಿಯೋ…!

ಸಿನೆಮಾ ತಾರೆಯರಿಗೆ ಪ್ರಾಣ ಕೊಡುವಂತಹ ಅನೇಕ ಅಭಿಮಾನಿಗಳಿರುತ್ತಾರೆ. ಕೆಲವೊಮ್ಮೆ ಅಭಿಮಾನಿಗಳು ಮಾಡುವ ಕೆಲಸಗಳಿಂದ ಅವರು ಇರಸು ಮುರುಸು ಅನುಭವಿಸುವಂತಾಗುತ್ತದೆ. ಇದೀಗ ಬಾಲಿವುಡ್ ಸ್ಟಾರ್‍ ನಟಿ ಶ್ರದ್ದಾ ಕಪೂರ್‍ ಗೂ ಸಹ ಅಂತಹ ಅನುಭವವೊಂದು ಆಗಿದೆ. ಸಾರ್ವಜನಿಕವಾಗಿಯೇ ಆಕೆಯ ಡೈ ಹಾರ್ಡ್ ಫ್ಯಾನ್ ಹೂಗುಚ್ಚ ಹಿಡಿದು ಪ್ರಪೋಸ್ ಮಾಡಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆತ ಮಾಡಿದ ಕೆಲಸಕ್ಕೆ ಶ್ರದ್ದಾ ಕಪೂರ್‍ ಗೆ  ಏನು ಮಾಡಬೇಕೆಂಬುದು ಅರ್ಥವಾಗಿಲ್ಲವಂತೆ.

ನಟಿ ಶ್ರದ್ದಾಕಪೂರ್‍ ಬಾಲಿವುಡ್ ಮಾತ್ರವಲ್ಲದೇ ತೆಲುಗು ಪ್ರೇಕ್ಷಕರಿಗೂ ಸಹ ಪರಿಚತಳಾಗಿದ್ದಾಳೆ. ಜೊತೆಗೆ ಇಡೀ ದೇಶದಾದ್ಯಂತ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮೂವಿ ಸಾಹೋ ಸಿನೆಮಾದಲ್ಲಿ ಪ್ರಭಾಸ್ ಜೊತೆಗೆ ಶ್ರದ್ದಾ ನಟಿಸಿದ್ದರು. ಗ್ಲಾಮರಸ್ ಪಾತ್ರಗಳ ಜೊತೆಗೆ ಆಕೆ ನಟನಾ ಪರವಾಗಿ ಸಹ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ನಟನೆಗೆ ಪ್ರಾಧಾನ್ಯತೆಯಿರುವಂತಹ ಪಾತ್ರಗಳಲ್ಲಿ ನಟಿಸುತ್ತಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬೇರೆ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಭಾರಿ ಫಾಲೋಯಿಂಗ್ ಸಹ ಪಡೆದುಕೊಂಡಿದ್ದಾರೆ. ಆದರೆ ಇತ್ತಿಚಿಗೆ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎಂದೇ ಹೇಳಬಹುದಾಗಿದೆ.

ಇನ್ನೂ ಶ್ರದ್ದಾಕಪೂರ್‍ ಗೆ ಇತ್ತೀಚಿಗೆ ಒಂದು ವಿಚಿತ್ರವಾದ ಅನುಭವ ಎದುರಾಗಿದೆ.  ಮುಂಬೈ ವಿಮಾನ ನಿಲ್ದಾಣದಲ್ಲಿ ಶ್ರದ್ದಾ ಕಪೂರ್‍ ರನ್ನು ನೋಡಿದ ಅಭಿಮಾನಿ ಭಾರಿ ಸಂತೋಷಪಟ್ಟಿದ್ದಾನೆ. ಅವನ ಸಂತೋಷಕ್ಕೆ ಪಾರವೇ ಇಲ್ಲ ಎಂಬಂತಾಗಿದೆ. ತನ್ನ ಪ್ರಾಣದಂತೆ ಅಭಿಮಾನಿಸುವ ನಟಿ ಕಣ್ಣುಗಳ ಮುಂದೆ ಕಾಣಿಸಿದ ಕೂಡಲೇ ಆತನಿಗೆ ಏನು ಮಾಡಬೇಕೆಂಬುದು ಸಹ ಅರ್ಥವಾಗಲಿಲ್ಲವಂತೆ. ಜೊತೆಗೆ ತನ್ನ ಅಭಿಮಾನವನ್ನು ಹೇಗೆ ತೋರ್ಪಡಿಸಬೇಕೆಂಬುದು ಸಹ ಆತನಿಗೆ ತಿಳಿಯಲಿಲ್ಲ. ಕೂಡಲೇ ಆಕೆಯ ಬಳಿಗೆ ತೆರಳಿದ ಆ ಅಭಿಮಾನಿ ಮೊಣಕಾಲಿನ ಮೇಲೆ ಕುಳಿತು ಹೂಗುಚ್ಚ ನೀಡಿ ಪ್ರಪೋಸ್ ಮಾಡಿದ್ದಾನೆ. ಇನ್ನೂ ಕೂಡಲೇ ಶ್ರದ್ದಾ ಸಹ ಒಂದು ಸೆಕೆಂಡ್ ಶಾಕ್ ಆಗಿದ್ದಾರೆ. ಆತ ತೋರಿಸಿದ ಅಭಿಮಾನಕ್ಕೆ ಫಿದಾ ಆಗಿದ್ದಾಳೆ. ಇನ್ನೂ ಆ ಅಭಿಮಾನಿ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತೊಷ ಪಟ್ಟಿದ್ದಾನೆ. ಇನ್ನೂ ಈ ದೃಶ್ಯ ಅಲ್ಲಿದ್ದ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಈ ಸಂಬಂಧ ವಿಡಿಯೋ ಒಂದು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಆಶ್ಚರ್ಯಕರವಾದ ದೃಶ್ಯಗಳನ್ನು ಅಲ್ಲಿದ್ದ ಪಾಪರಾಜಿಗಳು ತಮ್ಮ ಕ್ಯಾಮೆರಾಗಳಲ್ಲಿ ಬಂಧಿಸಿದ್ದಾರೆ. ಜೊತೆಗೆ ಆ ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಡಿಯೋ ಟ್ರೆಂಡಿಂಗ್ ನಲ್ಲೂ ಸಹ ಇದೆ. ಸದ್ಯ ಶ್ರದ್ದಾ ಕಪೂರ್‍ ಸ್ಟ್ರೀ 2 ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top