Film News

ಫ್ಲೈಯಿಂಗ್ ಕಿಸ್ ಗಳ ಮೂಲಕ ಯುವಕರ ಹೃದಯ ಕದ್ದ ನಟಿ ಸದಾ, ಟೆಂಪ್ಟಿಂಗ್ ಪೋಸ್ ವೈರಲ್…!

ಸೌತ್ ಸಿನಿರಂಗದಲ್ಲಿ ಕೆಲವು ವರ್ಷಗಳ ಕಾಲ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದ ನಟಿಯರಲ್ಲಿ ಸದಾ ಸಹ ಒಬ್ಬರಾಗಿದ್ದಾರೆ. ಈ ಹಿಂದೆ ಆಕೆ ನಟಿಸಿದ ಬಹುತೇಕ ಸಿನೆಮಾಗಳಲ್ಲಿ ಹೋಮ್ಲಿಯಾಗಿಯೇ ಕಾಣಿಸಿಕೊಂಡಿದ್ದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಹಾಟ್ ಡೋಸ್ ಏರಿಸಿದ್ದಾರೆ. ಸದ್ಯ ಆಕೆಯ ಸಿನೆಮಾ ಅಪ್ಡೇಟ್ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಶೇರ್‍ ಮಾಡುತ್ತಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ 2002 ರಲ್ಲಿ ತೆರೆಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಮೂಲಕವೇ ಸದಾ ಹಾಗೂ ನಿತಿನ್ ಇಬ್ಬರೂ ದೊಡ್ಡ ಸ್ಟಾರ್‍ ಗಳಾದರು.  ಜಯಂ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಸದಾಗೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಬಳಿಕ ಎನ್.ಟಿ.ಆರ್‍ ಜೊತೆಗೆ ನಾಗ, ವೀರಭದ್ರ ಸಿನೆಮಾದಲ್ಲಿ ಬಾಲಕೃಷ್ಣ ರಂತಹ ಸ್ಟಾರ್‍ ಗಳ ಜೊತೆಗೆ ನಟಿಸಿದರು. ಆದರೆ ಈ ಎರಡೂ ಸಿನೆಮಾಗಳೂ ಸಹ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಬಳಿಕ ಆಕೆಗೆ ಸಿನೆಮಾಗಳಲ್ಲಿನ ಅವಕಾಶಗಳೂ ಸಹ ಕಡಿಮೆಯಾದವು. ಸ್ಟಾರ್‍ ನಟಿಯಾಗಿ ಇಂಡಸ್ಟ್ರಿಯನ್ನು ಆಳುತ್ತಾರೆ ಅಂದುಕೊಂಡರೇ, ಆಕೆಯ ರೇಂಜ್ ಗೆ ತಕ್ಕಂತೆ ಆಫರ್‍ ಗಳು ಸಿಗಲಿಲ್ಲ. ಆದರೆ ಆಕೆಗೆ ಬಿಗ್ ಬ್ರೇಕ್ ನೀಡಿದ್ದು ಮಾತ್ರ ಅಪರಿಚಿತುಡು ಸಿನೆಮಾ ಎಂದರೇ ತಪ್ಪಾಗಲಾರದು.

ಇನ್ನೂ ನಟಿ ಸದಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಹಲೋ ವರ್ಲ್ಡ್ ಎಂಬ ವೆಬ್ ಸೀರೀಸ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈ ಹಾದಿಯಲ್ಲೇ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಮತ್ತೇರಿಸುತ್ತಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಎಲ್ಲರನ್ನು ಸೆಳೆಯುತ್ತಿವೆ. ಗ್ರೀನ್ ಕಲರ್‍ ಸ್ಲೀವ್ ಲೆಸ್ ಟಾಪ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಗಳನ್ನು ನೀಡಿದ್ದಾರೆ. ಸುಂದರವಾದ ತುಟಿಗಳ ಮೂಲಕ ಪ್ಲೈಂಯಿಂಗ್ ಕಿಸ್ ನೀಡುತ್ತಾ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ವಯ್ಯಾರವಾಗಿ ಪೋಸ್ ಗಳನ್ನು ಕೊಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆಕೆಯ ಈ ಮಾದಕತೆಯ ಪೊಟೊಗಳಿಗೆ ಲೈಕ್ ಗಳು, ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಆಕೆ ಕೊನೆಯದಾಗಿ ಟಾರ್ಚ್ ಲೈಟ್ ಸಿನೆಮಾದಲ್ಲಿ ಕಾಣಿಸಿಕೊಂಡರು. ಐದು ವರ್ಷಗಳಿಂದ ಆಕೆ ಯಾವುದೇ ಸಿನೆಮಾಗಳಲ್ಲೂ ಸಹ ಸೈನ್ ಮಾಡಿಲ್ಲ. ಆದರೆ ಕಿರುತೆರೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಡೀ ಜೂನಿಯರ್ಸ್ ಶೋ ನ ಜಡ್ಜ್ ಆಗಿ ವ್ಯವಹರಿಸುತ್ತಿದ್ದಾರೆ. ಇದೀಗ ಆಕೆಯನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Most Popular

To Top