ಮೇಕಪ್ ಲೆಸ್ ಆಗಿ ಟೆಂಪ್ಟಿಂಗ್ ಲುಕ್ಸ್ ಕೊಟ್ಟ ನಿವೇತಾ ಪೇತುರಾಜ್, ವೈರಲ್ ಆದ ಪೊಟೋಸ್….!

ತೆಲುಗಿನ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ತಮಿಳಿನ ಒರು ನಾ ಕೂತ್ತು…

ತೆಲುಗಿನ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ತಮಿಳಿನ ಒರು ನಾ ಕೂತ್ತು ಎಂಬ ಸಿನೆಮಾ ಮೂಲಕ ಸಿನಿಲೋಕಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮೇಕಪ್ ಲೆಸ್ ಆಗಿಯೂ ಆಕೆ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ.

ನಟಿ ನಿವೇತಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಹೆಚ್ಚಿಸಿದ್ದಾರೆ. ಸದಾ ಹಾಟ್ ಪೊಟೋಗಳ ಮೂಲಕ ಮತ್ತೇರಿಸುವ ಕೆಲಸ ಮಾಡುತ್ತಿದ್ದಾರೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಇತ್ತೀಚಿಗಷ್ಟೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಟೈಟ್ ಟಿ ಶರ್ಟ್ ನಲ್ಲಿ ಕ್ಲೋಜಡ್ ಆಂಗಲ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು ಸಖತ್ ಹಾಟ್ ಆಗಿದ್ದಾರೆ. ಜೊತೆಗೆ ತನ್ನ ಕ್ಯೂಟ್ ಸ್ಮೈಲ್ ನೊಂದಿಗೆ ಒಂದು ರೀತಿ ಪೋಸ್ ಕೊಟ್ಟಿದ್ದರೇ, ಮತ್ತೊಂದು ಪೊಟೋ ದಲ್ಲಿ ನಾಚಿಕೆ ಪಡುತ್ತಾ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳಿಗೆ ಆಕೆ ಲವ್ ಎಮೋಜಿಗಳನ್ನು ಸಹ ಹಾಕಿ ಶೇರ್‍ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ವಿಭಿನ್ನ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಈ ಪೊಟೋಗಳಲ್ಲಿ ಆಕೆ ಧರಿಸಿದ ಟಿ ಶರ್ಟ್ ಮೇಲಿನ ಕೊಟೇಷನ್ ಹೈಲೈಟ್ ಆಗಿದೆ. ಆಕೆಯ ಟಿ ಶರ್ಟ್ ಮೇಲೆ ಪುಸ್ತಕದಲ್ಲಿ ಹುಡುಗರು ತುಂಬಾ ಒಳ್ಳೆಯವರು ಎಂದು ಸಂದೇಶವಿದೆ. ಇದೀಗ ಇದೆ ಇಂಟರ್‍ ನೆಟ್ ನಲ್ಲಿ ಚರ್ಚನೀಯವಾದ ಅಂಶವಾಗಿದೆ. ಒಂದು ಕಡೆ ಟೈಟ್ ಟಿ ಶರ್ಟ್‌ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡುತ್ತಾ, ಇನ್ನೊಂದು ಕಡೆ ಇಂತಹ ಇಂಟ್ರಸ್ಟಿಂಗ್ ಕಾಮೆಂಟ್ ಇದರಿಂದ ಈ ಪೊಟೊಗಳು ಮತಷ್ಟು ವೈರಲ್ ಆಗುತ್ತಿವೆ. ಎರಡು ರೂಪದಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ. ಇನ್ನೂ ಇಂಟರ್‍ ನೆಟ್ ನಲ್ಲಂತೂ ಆಕೆಯ ಟಿ ಶರ್ಟ್ ಮೇಲಿನ ಸಂದೇಶಕ್ಕೆ ಸಂಬಂಧಿಸಿದಂತೆ ಅವರದ್ದೇ ಆದ ರೀತಿಯಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಅದೇನೇ ಇರಲಿ ಸದ್ಯ ನಿವೇತಾ ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಸದ್ಯ ನಿವೇದಿತಾಗೆ ತೆಲುಗು ಹಾಗೂ ತಮಿಳಿನಲ್ಲೂ ಸಹ ಅವಕಾಶಗಳು ಬರುತ್ತಿವೆ. ಆದರೂ ಸಹ ಆಕೆಗೆ ಸರಿಯಾದ ಹಿಟ್ ನೀಡುವಂತಹ ಸಿನೆಮಾ ಇನ್ನೂ ಬಂದಿಲ್ಲ. ಆಕೆಗೆ ಬಿಗ್ ಬ್ರೇಕ್ ನೀಡುವ ಸಿನೆಮಾ ಬಂದರೇ ಪಕ್ಕಾ ಸ್ಟಾರ್‍ ನಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ನಿವೇತಾ ಮಲ್ಟಿ ಟ್ಯಾಲೆಂಟೆಡ್ ನಟಿಯಾಗಿದ್ದು, ರೇಸಿಂಗ್ ನಲ್ಲೂ ಸಹ ಆಕೆ ಪ್ರಾವಿಣ್ಯತೆ ಹೊಂದಿದ್ದಾರೆ. ರೇಸಿಂಗ್ ಪೊಟೋಗಳನ್ನು ಸಹ ಆಕೆ ಆಗಾಗ ಶೇರ್‍ ಮಾಡುತ್ತಿರುತ್ತಾರೆ.