ನಾನು ಪ್ರೀತಿಸಿಯೇ ಮದುವೆಯಾಗುತ್ತೇನೆ ಎಂದ ರೌಡಿ ಹಿರೋ ವಿಜಯ್ ದೇವರಕೊಂಡ, ಹಿಂಟ್ ಕೊಟ್ಟಂತೆ ಎಂದ ನೆಟ್ಟಿಗರು….!

Follow Us :

ಟಾಲಿವುಡ್ ಸಿನಿರಂಗದಲ್ಲಿ ಕ್ರೇಜಿ ಹಿರೋ ಎಂದೇ ಕರೆಯಲಾಗುವ ರೌಡಿ ಹಿರೋ ವಿಜಯ್ ದೇವರಕೊಂಡ ರವರಿಗೆ ಭಾರಿ ಫ್ಯಾನ್ ಫಾಲೋಯಿಂಗ್ ಇದೆ. ಆತ ನಟಿಸಿದ್ದು ಕೆಲವೇ ಸಿನೆಮಾಗಳಾದರೂ ಸಹ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಗಳಿಸಿಕೊಂಡರು. ಅದರಲ್ಲೂ ಅರ್ಜುನ್ ರೆಡ್ಡಿ ಸಿನೆಮಾದ ಬಳಿಕವಂತೂ ವಿಜಯ್ ದೇವರಕೊಂಡ ಕ್ರೇಜ್ ನೆಕ್ಸ್ಟ್ ಲೆವೆಲ್ ಎಂಬಂತೆ ಬೆಳೆಯಿತು. ಇದೀಗ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ತನ್ನ ಮದುವೆಯ ಬಗ್ಗೆ ಹೇಳಿದ್ದು, ಆತನ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟ ವಿಜಯ್ ದೇವರಕೊಂಡ ಸಿನಿರಂಗದಲ್ಲಿ ರೌಡಿ ಹಿರೋ ಎಂದೇ ಫೇಮಸ್ ಆಗಿದ್ದಾರೆ. ಕೊನೆಯದಾಗಿ ಅವರು ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಸಹ ಕೊಂಚ ಕಲೆಕ್ಷನ್ ಪರವಾಗಿ ಒಕೆ ಎಂದು ಅನ್ನಿಸಿತ್ತು. ಈ ಸಿನೆಮಾಗಾಗಿ ಆತ ಪಡೆದ ಸಂಭಾವನೆಯನ್ನು ಸಹ ರೈತರಿಗೆ ನೀಡಿದ್ದರು. ಸದ್ಯ ವಿಜಯ್ ದೇವರಕೊಂಡ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿದೆ. ಇದೇ ಏಪ್ರಿಲ್ 5 ರಂದು ಈ ಸಿನೆಮಾ ತೆರೆಕಾಣಲಿದೆ. ಪ್ರಮೋಷನ್ ನಿಮಿತ್ತ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವರು ವೈರಲ್ ಆಗುತ್ತಿವೆ. ಇನ್ನೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ರೂಮರ್‍ ಸದಾ ಕೇಳಿಬರುತ್ತಲೇ ಇದ್ದು, ಅವರು ರಶ್ಮಿಕಾ ರವರನ್ನೇ ಲವ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಫ್ಯಾಮಿಲಿ ಸ್ಟಾರ್‍ ಸಿನೆಮಾದ ಪ್ರಮೋಷನ್ ನಿಮಿತ್ತ ವಿಜಯ್ ದೇವರಕೊಂಡ ಚೆನೈನಲ್ಲಿ ಮಿಡಿಯಾದೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ವಿಜಯ್ ದೇವರಕೊಂಡ ನನಗೂ ಕೂಡ ಮದುವೆ ಮಾಡಿಕೊಳ್ಳಬೇಕು ಅಂತಾ ಇದೆ. ಮದುವೆಯಾಗಿ ತಂದೆಯಾಗಬೇಕೆಂತಾ ಇದೆ. ಆದರೆ ಈಗಲೇ ಮದುವೆಯಾಗಲಾರೆ. ಲವ್ ಮ್ಯಾರೇಜ್ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬಕ್ಕೂ ಆ ಹುಡುಗಿ ಕಡ್ಡಾಯವಾಗಿ ನಮ್ಮ ಕುಟುಂಬಕ್ಕೂ ಇಷ್ಟವಾಗಬೇಕು ಎಂದು ಹೇಳಿದ್ದಾರೆ. ಇನ್ನೂ ಕೆಲವು ತಮಿಳು ನಿರ್ದೇಶಕರು ನನಗೆ ಕಥೆಗಳನ್ನು ಹೇಳಿದ್ದಾರೆ. ಅದರಲ್ಲಿ ಕೆಲವು ಶೀಘ್ರದಲ್ಲೇ ಸೆಟ್ಟೇರಿಸುತ್ತೇನೆ. ಫ್ಯಾಮಿಲಿಸ್ಟಾರ್‍ ಸಿನೆಮಾ ಯೂನಿವರ್ಸಲ್ ಕಟೆಂಟ್ ನಿಂದ ಕೂಡಿದ ಸಿನೆಮಾ ಆಗಿದೆ. ಈ ಸಿನೆಮಾ ಎಲ್ಲರಿಗೂ ಇಷ್ಟವಾಗುತ್ತದೆ. ಮೊದಲಿಗೆ ತೆಲುಗು, ತಮಿಳಿನಲ್ಲಿ ರಿಲೀಸ್ ಆಗುತ್ತೆ ಬಳಿಕ ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಮಾಡುತ್ತೇವೆ. ತಮಿಳುನಾಡಿನಲ್ಲಿ 250 ಸಿನಿಮಾ ಥಿಯೇಟರ್‍ ಗಳಲ್ಲಿ ಸಿನೆಮಾ ರಿಲೀಸ್ ಮಾಡುತ್ತೇವೆ ಎಂದರು.