ಆ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಬ್ಯೂಟಿ ಅರಿಯಾನಾ, ಇಲ್ಲೊಂದು ಟ್ವಿಸ್ಟ್ ಇದೆ ಏನು ಗೊತ್ತಾ?

ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಅನೇಕರು ಭಾರಿ ಸುದ್ದಿಯಾಗುತ್ತಾರೆ. ಈ ಸಾಲಿಗೆ ಯೂಟ್ಯೂಬ್ ಆಂಕರ್‍ ಆಗಿ ಕೆರಿಯರ್‍ ಆರಂಭಿಸಿದ ಆರಿಯಾನಾ ಗ್ಲೋರಿ ಸಹ ಬಿಗ್ ಬಾಸ್ ಶೋ ಮೂಲಕ ಭಾರಿ ಫೇಮಸ್ ಆದರು. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಆ ಸಮಸ್ಯೆಯಿಂದ ಸೂಸೈಡ್ ಮಾಡಿಕೊಳ್ಳುವುದಾಗಿ ಬರೆದು ಆತ್ಮಹತ್ಯೆಗೆ ಯತ್ನಿಸಿದ ವಿಡಿಯೋ ಒಂದನ್ನು ಆಕೆಯೇ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಆದರೆ ಆಕೆಯ ಈ ಆತ್ಮಹತ್ಯೆ ಪ್ರಯತ್ನದ ಹಿಂದೆ ಟ್ವಿಸ್ಟ್ ಒಂದಿದೆ. ಆ ಟ್ವಿಸ್ಟ್ ಏನು ಎಂಬುದನ್ನು ತಿಳಿಯಲು ಮುಂದೆ ಓದಿ…..

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಆರಿಯಾನಾ ಗ್ಲೋರಿ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಬಿಗ್ ಬಾಸ್ ಬ್ಯೂಟಿ ಆರಿಯಾನ ತೆಲುಗಿನ ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿ ಫೈನಲ್ ವರೆಗೂ ತಲುಪಿದ್ದರು. ನಾಲ್ಕನೇ ಸ್ಥಾನದಲ್ಲಿ ನಿಂತರು. ಆದರೆ ಬಿಗ್ ಬಾಸ್ ಮೂಲಕ ಆಕೆ ತುಂಬಾನೆ ಅಭಿಮಾನಿಗಳನ್ನು ಸ್ವಂತ ಮಾಡಿಕೊಂಡರು. ಆಕೆ ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವ ಹೊಂದಿದ್ದು, ತಪ್ಪುಗಳನ್ನು ನೇರವಾಗಿಯೇ ಪ್ರಶ್ನೆ ಮಾಡುತ್ತಿದ್ದರು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆಗೆ ಬೋಲ್ಡ್ ಇಂಟರ್‍ ವ್ಯೂ ನಲ್ಲಿ ಭಾಗಿಯಾದ ಬಳಿಕ ಆಕೆ ಮತಷ್ಟು ಫೇಂ ಪಡೆದುಕೊಂಡರು. ಈ ಬೋಲ್ಡ್ ಇಂಟರ್‍ ವ್ಯೂ ಮೂಲಕವೇ ಅರಿಯಾನ ಬೆಳಕಿಗೆ ಬಂದರು ಎಂದರೇ ತಪ್ಪಾಗಲಾರದು. ಬಳಿಕ ಆಕೆ ಅವಕಾಶಗಳೂ ಸಹ ಹರಿದುಬಂದವು. ಅನೇಕ ಶೋಗಳು, ಸಿನೆಮಾಗಳಲ್ಲಿ ನಟಿಸಿದ್ದರು.

ಇನ್ನೂ ಸೋಷಿಯಲ್ ಮಿಡಿಯಾ ಮೂಲಕ ಫೇಂ ಪಡೆದುಕೊಂಡ ಆರಿಯಾನಾ ಗ್ಲೋರಿ ತನ್ನ ಫಾಲೋವರ್ಸ್‌ಗಾಗಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಾಗೂ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಶಾಕ್ ಆಗಿದ್ದಾರೆ. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಕ್ರಿಯೇಟ್ ಮಾಡಿದ ಒಂದು ರೀಲ್ ಹಂಚಿಕೊಂಡಿದ್ದು, ಇದು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ತನ್ನ ರೂಂ ನಲ್ಲಿರುವ ಫ್ಯಾನ್ ಗೆ ಬಟ್ಟೆಯನ್ನು ಕಟ್ಟಿ ನೇಣು ಹಾಕಿಕೊಳ್ಳಲು ಯತ್ನಿಸುವಂತೆ ಕಾಣಿಸಿಕೊಂಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಆರಿಯಾನಾ ನೇಣು ಹಾಕಿಕೊಳ್ಳುವಾಗ ಆಕೆಯ ಸ್ನೇಹಿತೆ ಬರುತ್ತಾಳೆ. ಬಂದಾಕೆಯ ಹ್ಯಾಂಡ್ ಬ್ಯಾಗ್ ನಲ್ಲಿರುವ ನೈಲ್ ಪಾಲಿಷ್ ತೆಗೆದು ತೋರಿಸುತ್ತಾಳೆ. ಅದನ್ನು ನೋಡಿದ ಆರಿಯಾನಾ ಕೆಳಗೆ ಬಮದು ನೈಲ್ ಪಾಲಿಷ್ ಹಾಕಿಕೊಳ್ಳುತ್ತಾಳೆ. ನಮ್ಮ ಪ್ರಾಬ್ಲಂ ನಿಮಗೇನು ಗೊತ್ತು ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಇನ್ನೂ ಆಕೆ ಹಂಚಿಕೊಂಡ ವಿಡಿಯೋ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಈ ಕುರಿತು ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ. ಕೆಲವರಂತೂ ಆಕೆ ಮಾಡಿದ ಕೆಲಸಕ್ಕೆ ಆಕ್ರೋಷದಿಂದ ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ವಿಡಿಯೋಗಳು ಏಕೆ ಮಾಡುತ್ತೀಯಾ ಎಂದು ಕಾಮೆಂಟ್ ಹರಿಬಿಡುತ್ತಿದ್ದಾರೆ. ಇದೀಗ ಆಕೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.