ಪಬ್ಲಿಕ್ ನಲ್ಲಿ ಅಸಭ್ಯಕರವಾದ ಮಾತುಗಳನ್ನಾಡಿದ ರೌಡಿ ಹಿರೋ, ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್….!

Follow Us :

ತೆಲುಗು ಸಿನಿರಂಗದಲ್ಲಿ ರೌಡಿ ಹಿರೋ ಎಂದೇ ಖ್ಯಾತ ಪಡೆದುಕೊಂಡ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಭಾರಿ ಫೇಮಸ್ ಆದರು. ಈ ಸಿನೆಮಾದಲ್ಲಿ ಆತನ ಪಾತ್ರ ತುಂಬಾನೆ ವಿವಾದ ಸಹ ಸೃಷ್ಟಿ ಮಾಡಿತ್ತು. ಲಿಪ್ ಲಾಕ್ ದೃಶ್ಯಗಳು, ಪ್ರೇಯಸಿಯನ್ನು ಹೊಡೆಯುವುದ ಕೆಲವೊಂದು ದೃಶ್ಯಗಳ ವಿರುದ್ದ ಅನೇಕರು ವಿಮರ್ಶೆ ಮಾಡಿದ್ದರು. ರಿಯಲ್ ಲೈಫ್ ನಲ್ಲೂ ಸಹ ವಿಜಯ್ ದೇವರಕೊಂಡ ಅದೇ ಮಾದರಿಯ ಆಟಿಟ್ಯೂಡ್ ಪ್ರದರ್ಶನ ಮಾಡುತ್ತಿರುತ್ತಾರೆ. ಇದೀಗ ಅವರು ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯಕರವಾದ ಮಾತುಗಳನ್ನು ಆಡಿರುವ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಅವರ ಹೇಳಿಕೆಗಳನ್ನು ಅನೇಕರು ವಿರೋಧ ಮಾಡುತ್ತಿದ್ದಾರೆ.

ಸದ್ಯ ನಟ ವಿಜಯ್ ದೇವರಕೊಂಡ  ಫ್ಯಾಮಿಲಿ ಸ್ಟಾರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿದೆ. ಪ್ರೀ ರಿಲೀಸ್ ಈವೆಂಟ್ ಗೆ ವಿಜಯ್ ದೇವರಕೊಂಡ ವಿಭಿನ್ನವಾಗಿ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಮಿಡಲ್ ಕ್ಲಾಸ್ ಫ್ಯಾಮಿಲಿಯ ಯುವಕನ ಪಾತ್ರ ಪೋಷಣೆ ಮಾಡಿದ್ದರು. ಅದನ್ನು ರೆಪ್ರೆಸೆಂಟ್ ಮಾಡುವಂತೆ ಬೈಕ್ ಮೇಲೆ ಕುಳಿತು ಪ್ರೀ ರಿಲೀಸ್ ಈವೆಂಟ್ ಗೆ ಬಂದರು. ಬೈಕ್ ಹಿಂದೆ ನಟಿ ಮೃಣಾಲ್ ಠಾಕೂರ್‍ ಕುಳಿತಿದ್ದರು. ಈ ಸಮಯದಲ್ಲಿ ವಿಜಯ್ ಬೈಕ್ ಅನ್ನು ಅಭಿಮಾನಿಗಳು ಸುತ್ತುವರೆಯುವ ಪ್ರಯತ್ನ ಮಾಡಿದರು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಅಡ್ಡಗಟ್ಟುವ ಪ್ರಯತ್ನಗಳನ್ನು ಮಾಡಿದರು.

ಈ ವೇಳೆ ಬೈಕ್ ಗೆ ಅಡ್ಡ ಬರುತ್ತಿದ್ದ ಅಭಿಮಾನಿಗಳನ್ನು ವಿಜಯ್ ದೇವರಕೊಂಡ ಪಕ್ಕಕ್ಕೆ ಸರಿರೀ ನನ್ನ ಮಕ್ಕಳಾ ಎಂದು ತೆಲುಗಿನಲ್ಲಿ ಕೋಪದಿಂದ ಕಿರುಚಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಭಿಮಾನಗಳನ್ನು ಪಬ್ಲಿಕ್ ನಲ್ಲಿ ಈ ರೀತಿಯಾಗಿ ಬೈದಿರುವುದು ಅನೇಕರ ಆಕ್ರೋಷಕ್ಕೆ ಕಾರಣವಾಗಿದೆ. ಅನೇಕರು ಅವರ ನಡವಳಿಕೆಯ ವಿರುದ್ದ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಇನ್ನೂ ಈ ಕಾರ್ಯಕ್ರಮಗಳಲ್ಲಿ ವಿಜಯ್ ದೇವರಕೊಂಡ ಅನೇಕ ಕಾಮೆಂಟ್ ಗಳನ್ನು ಮಾಡಿದ್ದರು. ಈ ಸಿನೆಮಾ 200 ಕೋಟಿ ಕಲೆಕ್ಷನ್ ಮಾಡುತ್ತೆ ಎಂಬ ವಿಶ್ವಾಸ ಸಹ ವ್ಯಕ್ತಪಡಿಸಿದ್ದರು. ಈ ಸಿನೆಮಾ ಯಾವ ರೀತಿಯ ಸಕ್ಸಸ್ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.