ಫೇಸ್ ಬುಕ್ ಗೆಳೆಯನಿಗಾಗಿ ಪಾಕಿಸ್ತಾನಕ್ಕೆ ಹಾರಿದ ಇಬ್ಬರ ಮಕ್ಕಳ ತಾಯಿ ಅಂಜು, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಮದುವೆ…..!

Follow Us :

ಸೋಷಿಯಲ್ ಮಿಡಿಯಾಗೆ ಯಾವುದೇ ಗಡಿ ಎಂಬುದು ಇಲ್ಲ. ಈ ಸೋಷಿಯಲ್ ಮಿಡಿಯಾದ ಮೂಲಕ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಕೆಲವರು ಜೀವನ ಸಹ ನಾಶ ಮಾಡಿಕೊಂಡಿದ್ದಾರೆ. ಜೊತೆಗೆ ಅನೇಕ ಲವ್ ಕಹಾನಿಗಳನ್ನು ಸಹ ನಾವು ನೋಡಿದ್ದೇವೆ. ಈ ಹಾದಿಯಲ್ಲೇ ಭಾರತದ ಉತ್ತರ ಪ್ರದೇಶದ ಅಂಜು ಎಂಬ ಯುವತಿ ಫೇಸ್ ಬುಕ್ ಮೂಲಕ ಪರಿಚಯವಾದ ಗೆಳೆಯನನ್ನು ವರಿಸಿದ್ದಾರೆ. ಆತ ಪಾಕಿಸ್ತಾನ ಮೂಲದವನಾಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಅಂಜು ಆತನನ್ನು ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದದ ಕೈಲೋರ್‍ ಎಂಬ ಗ್ರಾಮದ ಅಂಜು ರಾಜಸ್ಥಾನದ ಅಲ್ವಾರ್‍ ಎಂಬ ಜಿಲ್ಲೆಯಲ್ಲಿ ವಾಸವಿದ್ದರು. ಈಗಾಗಲೇ ಅಂಜುಗೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ಅಂಜು ಗೆ 34 ವರ್ಷ, ಆಕೆಯ ಫೇಸ್ ಬುಕ್ ಸ್ನೇಹಿತ ನಸ್ರುಲ್ಲಾ ಗೆ 29 ವರ್ಷ. ನಿಯಮಗಳಂತೆ ಪಾಕಿಸ್ತಾನಕ್ಕೆ ಭೇಟಿ ಆತನನ್ನು ಭೇಟಿಯಾಗಿ ಆತನ ಮನೆಯಲ್ಲಿಯೇ ಇದ್ದಳು. 2019 ರಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ ಅವರಿಬ್ಬರು ನಿನ್ನೆಯಷ್ಟೆ ಸ್ಥಳೀಯ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರಂತೆ. ಅಂಜು ಹಾಗೂ ನಸ್ರುಲ್ಲಾ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಹಾಗೂ ವಕೀಲರ ಸಮ್ಮುಖದಲ್ಲಿ ದಿರ್‍ ಬಾಲಾ ಎಂಬಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಈ ಮದುವೆಯನ್ನು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದು, ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಫಾತಿಮಾ ಎಂಬ ಹೆಸರನ್ನು ಬದಲಿಸಿಕೊಂಡಿದ್ದಾರೆ. ಜೊತೆಗೆ ಪೊಲೀಸರ ಭದ್ರತೆಯಲ್ಲಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಅಂಜು ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದರು. ನಾನು ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಅಂಜುಗೆ 15 ವರ್ಷದ ಮಗಳು ಹಾಗೂ 6 ವರ್ಷದ ಮಗ ಇದ್ದಾನೆ. ಸದ್ಯ ಅಂಜುಗೆ ಮೂವತ್ತು ದಿನಗಳ ವಿಸಾ ನೀಡಿದ್ದು, ವೀಸಾ ಮುಗಿದ ಬಳಿಕ ಆಕೆ ಭಾರತಕ್ಕೆ ವಾಪಸ್ಸಾಗಲಿದ್ದಾಳೆ ಎಂದು ಹೇಳಲಾಗಿದೆ.

ಇನ್ನೂ ಅಂಜು ಹಾಗೂ ಅವರ ಕುಟುಂಬ ಹಿಂದೂ ಧರ್ಮದಿಂದ  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಹಿಂದೆ ಅಂಜು ಹಾಗೂ ಅರವಿಂದ್ ರವರ ಮದುವೆ ರಾಜಸ್ಥಾನದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಸಲಾಗಿತ್ತು ಎಂದೂ ಸಹ ತಿಳಿದು ಬಂದಿದೆ. ಇದೀಗ ಅಂಜು ಫೇಸ್ ಬುಕ್ ಗೆಳೆಯ ನಸ್ರುಲ್ಲಾ ಎಂಬಾತನನ್ನು ವರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ.