ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ ಹಾಟ್ ಬ್ಯೂಟಿ ಶ್ರದ್ದಾ, ಉದ್ಯಮಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಹಾಟ್ ಬ್ಯೂಟಿ…..!

Follow Us :

ಹಾಟ್ ಬ್ಯೂಟಿ ಶ್ರದ್ದಾದಾಸ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಆಕೆ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಂದುಕೊಂಡ ಸಕ್ಸಸ್ ದೊರೆಯಲಿಲ್ಲ. ಇದೀಗ ಆಕೆ ಸಿನೆಮಾಗಳಿಗಿಂತ ವೆಬ್ ಸಿರೀಸ್ ಹಾಗೂ ಕಿರುತೆರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬ್ಯುಸಿನೆಸ್ ಮ್ಯಾನ್ ಜೊತೆಗೆ ಡೇಟಿಂಗ್ ನಲ್ಲಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಬೋಲ್ಡ್ ಬ್ಯೂಟಿ ಶ್ರದ್ದಾದಾಸ್‌ ಈ ಹಿಂದೆ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಆದರೆ ಇದೀಗ ಕಿರುತೆರೆಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ದೇಹದ ಮೈಮಾಟದೊಂದಿಗೆ ಕಿರುತೆರೆ ಪ್ರೇಕ್ಷರನ್ನು ಇದೀಗ ರಂಜಿಸುತ್ತಿದ್ದಾರೆ. ತೆಲುಗಿನ ಖ್ಯಾತ ಡ್ಯಾನ್ಸ್ ಡಿ ಶೋಗೆ ಜಡ್ಜ್ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ. ಡಿ ಶೋ ವೇದಿಕೆಯಲ್ಲೂ ಸಹ ಆಗಾ ಮೈಂಡ್ ಬ್ಯಾಕ್ ಆಗುವಂತಹ ಡ್ಯಾನ್ಸ್ ಮಾಡುತ್ತಾ ಮತಷ್ಟು ಅಭಿಮಾನಿಗಳನ್ನು ಸೆಳೆದುಕೊಳ್ಳುತ್ತಿದ್ದಾರೆ. ಸೌಂದರ್ಯ ಹಾಗೂ ಅಭಿನಯ ಎರಡೂ ಇದ್ದರೂ ಸಿನೆಮಾಗಳಲ್ಲಿ ಆಕೆಗೆ ಅವಕಾಶಗಳು ಬರದೇ ಇರುವುದರ ಬಗ್ಗೆ ಆಕೆಯ ಅಭಿಮಾನಿಗಳು ಅಸಂತೃಪ್ತಿಯನ್ನು ಹೊರಹಾಕುತ್ತಿರುತ್ತಾರೆ.

ಇದೀಗ ಈ ಬೋಲ್ಡ್ ಬ್ಯೂಟಿಯ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಶೀಘ್ರದಲ್ಲೇ ಶ್ರದ್ದಾ ದಾಸ್ ಮದುವೆಯಾಗಲಿದ್ದಾರೆ. ಬ್ಯುಸಿನೆಸ್ ಮ್ಯಾನ್ ಒಬ್ಬರನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ 32 ವರ್ಷ ವಯಸ್ಸಿನ ಶ್ರದ್ದಾದಾಸ್ ಓರ್ವ ಉದ್ಯಮಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಸುದ್ದಿ ಜೋರಾಗಿಯೇ ಹರಿದಾಡಿತ್ತು. ಆದರೆ ಈ ಕುರಿತು ಶ್ರದ್ದಾದಾಸ್ ರಿಯಾಕ್ಟ್ ಆಗಿದ್ದಾರೆ. ಡೇಟಿಂಗ್ ಮದುವೆ ಬಗ್ಗೆ ಹರಿದಾಡುತ್ತಿರುವ ರೂಮರ್‍ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ನಾನು ಯಾರೊಂದಿಗೂ ಡೇಟ್ ಮಾಡ್ತಾ ಇಲ್ಲ. ನನಗೆ ಯಾವ ಬ್ಯುಸಿನೆಸ್ ಮ್ಯಾನ್ ಗೊತ್ತಿಲ್ಲ. ಎಲ್ಲಾ ಕೇವಲ ರೂಮರ್‍ ಗಳು ಮಾತ್ರ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಈ ಹಿಂದೆ ಮದುವೆ, ಡೇಟಿಂಗ್ ಬಗ್ಗೆ ನಟಿಯರ ಬಗ್ಗೆ ಸುದ್ದಿ ಕೇಳಿಬಂದಾಗಲೂ ಅವರೂ ಸಹ ಇದೇ ರೀತಿ ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿದ್ದರು. ಆದರೆ ಬಳಿಕ ರೂಮರ್‍ ಗಳೆಂದ ಅನೇಕ ನಟಿಯರು ಇದೀಗ ರೂಮರ್‍ ಬಂದವರ ಜೊತೆಗೆ ಪ್ರೀತಿಯಲ್ಲಿರುವುದಾಗಿ ಒಪ್ಪಿಕೊಂಡ ಸನ್ನಿವೇಶಗಳೂ ಸಹ ಇದೆ. ಈ ಹಿನ್ನೆಲೆಯಲ್ಲಿ ಶ್ರದ್ದಾ ದಾಸ್ ಮದುವೆ ರೂಮರ್‍ ನಿಜವಾಗಿಯೂ ಸುಳ್ಳೇ ಎಂಬುದನ್ನು ಕಾದು ನೋಡಬೇಕಿದೆ.