ಲೇಡಿ ನಿರ್ದೇಶಕಿಯೊಂದಿಗೆ ಸಿನೆಮಾ ಫಿಕ್ಸ್, ಡಿಸೆಂಬರ್ ನಿಂದ YASH19 ಸಿನೆಮಾ ಶುರು?

Follow Us :

ದೇಶದ ಸಿನಿರಂಗದ ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನು ಕೆಜಿಎಫ್ ಬ್ರೇಕ್ ಮಾಡಿತ್ತು. ಇನ್ನೂ ಈ ಸಿನೆಮಾದ ಮೂಲಕ ನಟ ಯಶ್ ಸಹ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಇದೀಗ ಅವರ ಮುಂದಿನ ಸಿನೆಮಾಗಳ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಕೆಜಿಎಫ್-2 ಸಿನೆಮಾ ಬಿಡುಗಡೆಯಾಗಿ ವರ್ಷಗಳೇ ಕಳೆದರೂ ಇನ್ನೂ ಅವರ ಮುಂದಿನ ಸಿನೆಮಾ ಘೋಷಣೆಯಾಗಿಲ್ಲ. ಸುಮಾರು ದಿನಗಳಿಂದ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಡಿಸೆಂಬರ್‍ ಮಾಹೆಯಿಂದ ಲೇಡಿ ನಿರ್ದೇಶನದಲ್ಲಿ ಶೂಟಿಂಗ್ ಶುರುವಾಗಲಿದೆ ಎಂಬ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಸ್ಯಾಂಡಲ್ ವುಡ್ ಸ್ಟಾರ್‍ ನಟ ರಾಕಿಂಗ್ ಸ್ಟಾರ್‍ ಯಶ್ ಕೆಜಿಎಫ್ ಸಿರೀಸ್ ಮೂಲಕ ಭಾರಿ ಫೇಮ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಸಹ ಇಲ್ಲ. ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಅಭಿಮಾನಿಗಳೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಿರ್ದೇಶಕ ನರ್ತನ್ ರವರ ನಿರ್ದೇಶನದಲ್ಲಿ YASH19 ಸಿನೆಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಸಹ ಯಾವುದೇ ಅಪ್ಡೇಟ್ ಇಲ್ಲ. ಇದರಿಂದ ಯಶ್ ಎಂತಹ ಸಿನೆಮಾದಲ್ಲಿ ಯಾರ ನಿರ್ದೇಶನದಲ್ಲಿ ಸಿನೆಮಾ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸುಮಾರು ದಿನಗಳಿಂದ ಯಶ್ ರವರ ಮುಂದಿನ ಸಿನೆಮಾವನ್ನು ಮಾಲಿವುಡ್ ನಿರ್ದೇಶಕಿ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು ಕೆಲವೇ ತಿಂಗಳುಗಳಲ್ಲಿ ಶೂಟಿಂಗ್ ಸಹ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

ಮಲಯಾಳಂ ನಿರ್ದೇಶಕಿ ಮೋಹನ್ ದಾಸ್ ಜೊತೆಗೆ ಯಶ್ ಸಿನೆಮಾ ಮಾಡಲಿದ್ದಾರೆ. ಈಗಾಗಲೇ YASH19 ಸಿನೆಮಾ ಬಹುತೇಕ ಫೈನಲ್ ಆಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಸದ್ಯ ಈ ಸಿನೆಮಾದ ಸ್ಕ್ರಿಪ್ಟ್ ವರ್ಕ್ ಕೊನೆಯ ಹಂತದಲ್ಲಿದೆ. ಜೊತೆಗೆ ಸಿನೆಮಾ ಶೂಟಿಂಗ್ ಸಹ ಡಿಸೆಂಬರ್‍ ಮಾಹೆಯಿಂದ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಶೀಘ್ರದಲ್ಲೇ ಲುಕ್ ಟೆಸ್ಟ್ ಸಹ ನಡೆಯಲಿದೆ. ಭಾರಿ ಬಜೆಟ್ ನಲ್ಲಿ ಈ ಸಿನೆಮಾ ಸೆಟ್ಟೇರಿಸಲು ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಭಾರಿ ನೀರಿಕ್ಷೆಯನ್ನು ಇಟ್ಟುಕೊಂಡಿರುವ ಅಭಿಮಾನಿಗಳು ಅಧಿಕೃತ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ.

ಇನ್ನೂ ಕೆಜಿಎಫ್ ಸಿನೆಮಾದ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಶೂಟಿಂಗ್ ನಿಂದ ತುಂಬಾ ಬಿಡುವು ಸಿಕ್ಕಿದ್ದು, ತನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಯಶ್ ತನ್ನ ಕುಟುಂಬದೊಂದಿಗೆ ವೇಕೇಷನ್ ಗೆ ಹೋಗಿದ್ದು, ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಈ ವೆಕೇಷನ್ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.