ಆಂಕರ್ ರಶ್ಮಿ ಮೇಲೆ ಆಟೋ ರಾಮ್ ಪ್ರಸಾದ್ ಅಸಭ್ಯಕರವಾದ ಕಾಮೆಂಟ್, ಫೈರ್ ಆದ ನೆಟ್ಟಿಗರು…..!

Follow Us :

ತೆಲುಗು ಸಿನಿರಂಗದಲ್ಲಿ ತುಂಬಾನೇ ಫೇಂ ಹೊಂದಿರುವ ಕಾಮಿಡಿ ಶೋಗಳಲ್ಲಿ ಜಬರ್ದಸ್ತ್ ಶೋ ಮೊದಲ ಸ್ಥಾನದಲ್ಲಿರುತ್ತದೆ. ಈ ಶೋ ನಲ್ಲಿ ಕಾಣಿಸಿಕೊಂಡ ಅನೇಕರು ಸಿನೆಮಾಗಳಲ್ಲಿ ಒಳ್ಳೆಯ ಅವಕಾಶಗಳನ್ನೂ ಸಹ ಗಿಟ್ಟಿಸಿಕೊಂಡು ಸಕ್ಸಸ್ ಕಾಣುತ್ತಿದ್ದಾರೆ. ಈ ಶೋ ಮೂಲಕ ಹಾಟ್ ಆಂಕರ್‍ ರಶ್ಮಿಗೂ ಸಹ ಭಾರಿ ಕ್ರೇಜ್ ದೊರೆತಿದೆ. ರಶ್ಮಿ ಜಬರ್ದಸ್ತ್ ಶೋ ಜೊತೆಗೆ ಶ್ರೀದೇವಿ ಡ್ರಾಮಾ ಕಂಪನಿ ಎಂಬ ಶೋ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ಜಬರ್ದಸ್ತ್ ಶೋ ನಲ್ಲಿ ಆಟೋ ರಾಮಪ್ರಸಾದ್ ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆತ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಆಟೋ ರಾಮಪ್ರಸಾದ್ ಪಂಚ್ ಡೈಲಾಗ್ ಗಳೊಂದಿಗೆ ಸದ್ದು ಮಾಡುತ್ತಿರುತ್ತಾರೆ. ಈ ಶೋ ನಲ್ಲಿ ಕೆಲವೊಂದು ಅಸಭ್ಯಕರವಾದ ಡೈಲಾಗ್ ಗಳು, ಡಬಲ್ ಮೀನಿಂಗ್ ಡೈಲಾಗ್ ಗಳು ಹೆಚ್ಚಾಗುತ್ತಿವೆ ಎಂಬ ವಿಮರ್ಶೆಗಳೂ ಸಹ ಕೇಳಿಬರುತ್ತಿವೆ. ಸುಧೀರ್‍ ಹಾಗೂ ಹೈಪರ್‍ ಆದಿ ಈ ಹಿಂದೆ ಕೆಲವೊಂದು ವಿಮರ್ಶೆಗಳನ್ನು ಎದುರಿಸಿದ್ದರು. ಇದೀಗ ಆಟೋ ರಾಮಪ್ರಸಾದ್ ಸಹ ಅಂತಹುದೇ ವಿವಾದಕ್ಕೆ ಗುರಿಯಾಗಿದ್ದಾರೆ. ಕಾಮಿಡಿ, ಪ್ಯಾಪುಲಾರಿಟಿ ಬೆಳೆಸಿಕೊಳ್ಳಬೇಕೆಂಬ ಆತುರದಲ್ಲಿ ಸ್ಕಿಟ್ ಗಳಲ್ಲಿ ಗಡಿ ದಾಟಿ ಡೈಲಾಗ್ ಗಳು ಕೇಳಿಬರುತ್ತಿವೆ. ಕುಟುಂಬ ಸಮೇತ ನೋಡುವಂತಹ ಅಂತಹ ಕಾರ್ಯಕ್ರಮಗಳಲ್ಲಿ ಈ ರೀತಿಯಲ್ಲಿ ಡೈಲಾಗ್ ಗಳಿದ್ದರೇ ಹೇಗೆ ಎಂಬ ವಿಮರ್ಶೆಗಳು ಜೋರಾಗಿ ಕೇಳಿಬರುತ್ತಿವೆ.

ಇನ್ನೂ ಇತ್ತೀಚಿಗೆ ನಡೆದ ಶ್ರೀದೇವಿ ಡ್ರಾಮಾ ಕಂಪನಿ ಶೋ ನಲ್ಲಿ ಆಂಕರ್‍ ರಶ್ಮಿ ಬಗ್ಗೆ ಆಟೋ ರಾಮಪ್ರಸಾಧ್ ವಲ್ಗರ್‍ ಕಾಮೆಂಟ್ ಮಾಡಿದ್ದಾರೆ. ಇದೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಶೋನ ಎಪಿಸೋಡ್ ನಲ್ಲಿ ರಾಮಪ್ರಸಾದ್ ರಾತ್ರಿಗೆ ಬರುತ್ತೀಯಾ ಎಂದು ರಶ್ಮಿಗೆ ಕೇಳುತ್ತಾನೆ. ಅದಕ್ಕೆ ನಾನ್ಯೇಕೆ ರಾತ್ರಿಗೆ ಬರಬೇಕು ಎಂದು ರಶ್ಮಿ ಕೇಳುತ್ತಾರೆ. ಅದಕ್ಕಿ ರಾಮಪ್ರಸಾದ್ ಅಸಭ್ಯಕರವಾಗಿ ರಾತ್ರಿಗೆ ಕರೆಯೋದು ಏಕೆ ತಿಳಿಯದೇ ಎಂದು ಹೇಳುತ್ತಾರೆ. ಬಳಿಕ ಜಡ್ಜ್ ಇಂಡ್ರಜಾ ಜೋರಾಗಿ ಕಿರುಚುತ್ತಾರೆ. ಬಳಿಕ ಅದೇ ನಮ್ಮ ಊರಲ್ಲಿ ಜಾತ್ರೆ ಇದೆ ಅದಕ್ಕೆ ಕರೆಯುತ್ತಿದ್ದೇನೆ ಎಂದು ರಾಮ ಪ್ರಸಾದ್ ತೇಪೆ ಹಾಕುತ್ತಾರೆ. ಈ ಕಾಮೆಂಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.

ಇನ್ನೂ ಈ ಕಾರಣದಿಂದ ರಾಮಪ್ರಸಾದ್ ಭಾರಿ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಈ ಹಿಂದೆ ರಾಮಪ್ರಸಾದ್ ವಿಷ್ಣುಪ್ರಿಯಾ ದೇಹ ಹಾಗೂ ಮೂಗಿನ ಮೇಲೂ ಸಹ ಡಬಲ್ ಮೀನಿಂಗ್ ಡೈಲಾಗ್ ಹಾಕಿದ್ದರು. ಆಗ ಸಹ ಇದು ವಿವಾದವಾಗಿತ್ತು. ಇದೀಗ ಮತ್ತೊಮ್ಮೆ ಆತ ವಿವಾದಕ್ಕೆ ಗುರಿಯಾಗಿದ್ದಾನೆ. ಈ ಬಗ್ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಆತನ ವಿರುದ್ದ ಫೈರ್‍ ಆಗುತ್ತಿದ್ದಾರೆ.