Film News

ಮೇಕಪ್ ಲೆಸ್ ಆಗಿ ಕಾಣಿಸಿಕೊಂಡ ರಶ್ಮಿಕಾ, ವಿಮಾನ ನಿಲ್ದಾಣದಲ್ಲಿ ನಾವೆಲ್ ಶೋ ಮಾಡುತ್ತಾ ಸದ್ದು ಮಾಡಿದ ನಟಿ….!

ಅತೀ ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣದ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಬಹುಬೇಡಿಕೆ ಸೃಷ್ಟಿಸಿಕೊಂಡ ಈಕೆ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ಏನೆ ಮಾಡಿದರೂ ಸೋಷಿಯಲ್ ಮಿಡಿಯಾದಲ್ಲಿ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಆಕೆಯ ಗ್ಲಾಮರಸ್ ನೋಟ, ಕ್ಯೂಟ್ ಸ್ಮೈಲ್ ಆಕೆಯ ಅಭಿಮಾನಿಗಳನ್ನು ಕಟ್ಟಿಹಾಕಿಬಿಡುತ್ತದೆ ಎಂದು ಹೇಲಬಹುದಾಗಿದೆ. ಇದೀಗ ವಿಮಾನ ನಿಲ್ದಾಣದಲ್ಲಿ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಸೌತ್ ಅಂಡ್ ನಾರ್ತ್ ಸಿನೆಮಾಗಳ ಮೂಲಕ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲೇ ಇರುತ್ತಾರೆ. ಸಿನೆಮಾಗಳ ಜೊತೆ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾ ಅಪ್ಡೇಟ್ ಗಳನ್ನು ಹಾಗೂ ಪೊಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಸಿನೆಮಾಗಳಲ್ಲಿ ಎಷ್ಟರ ಮಟ್ಟಿಗೆ ಗ್ಲಾಮರ್‍ ಶೋ ಮಾಡಬೇಕೋ ಅಷ್ಟು ಸೌಂದರ್ಯ ಪ್ರದರ್ಶನ ಮಾಡುತ್ತಿರುತ್ತಾರೆ. ಇನ್ನೂ ಬಾಲಿವುಡ್ ಗೆ ಹಾರಿದ ಬಳಿಕವಂತೂ ಆಕೆ ಮತಷ್ಟು ಹಾಟ್ ಅವತಾರ ತಾಳಿದ್ದಾರೆ. ಜೊತೆಗೆ ಆಕೆ ಹಾಕುವಂತಹ ಡ್ರೆಸ್ ಗಳ ಕಾರಣದಿಂದ ಟ್ರೋಲ್ ಸಹ ಆಗುತ್ತಿರುತ್ತಾರೆ.

ಇನ್ನೂ ರಶ್ಮಿಕಾ ಇದೀಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ  ನಿಲ್ದಾಣದಲ್ಲಿ ಮೇಕಪ್ ಲೆಸ್ ಕಾಣಿಸಿಕೊಂಡಿದ್ದು, ಈ ವೇಳೆ ಪಾಪರಾಜಿಗಳಿಗೆ ಪೋಸ್ ಕೊಟ್ಟಿದ್ದಾರೆ. ಕ್ಯೂಟ್ ಆಗಿ ಪೋಸ್ ಗಳನ್ನು ಕೊಡುವುದರ ಜೊತೆಗೆ ನಾವೆಲ್ ಶೋ ಮಾಡುತ್ತಾ ಯುವಕರನ್ನು ಫಿದಾ ಮಾಡಿದ್ದಾರೆ. ಸ್ಟೈಲಿಷ್ ಅಂಡ್ ವೈರೇಟಿ ಆಗಿರುವ ಡ್ರೆಸ್ ನಲ್ಲಿ ಕ್ಯೂಟ್ ಸ್ಮೈಲ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಮತ್ತೆ ಮತ್ತೇ ನೋಡಬೇಕು ಎನ್ನಿಸುತ್ತಿದೆ ಎಂದು ಅಭಿಮಾನಿಗಳು ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಲೈಕ್ ಗಳು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಇನ್ನೂ ರಶ್ಮಿಕಾಗೆ ಪುಷ್ಪಾ ಸಿನೆಮಾ ಭಾರಿ ಫೇಂ ತಂದುಕೊಟ್ಟಿತ್ತು. ಈ ಸಿನೆಮಾದ ಬಳಿಕ ಆಕೆಗೆ ಮತಷ್ಟು ಅವಕಾಶಗಳು ತಂದುಕೊಟ್ಟಿತ್ತು. ಬಾಲಿವುಡ್ ನಲ್ಲೂ ಸಹ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದು, ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ದುಪ್ಟಟ್ಟು ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾಗಳ ಜತೆಗೆ ಆಕೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top