ಬ್ಲಾಕ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟ ನೋರಾ ಫತೇಹಿ, ವೈರಲ್ ಆದ ಪೊಟೋಸ್….!

Follow Us :

ಬಾಲಿವುಡ್ ಹಾಟ್ ಬ್ಯೂಟಿ ನೋರಾ ಫತೇಹಿ ಬಾಲಿವುಡ್ ನ ಅನೇಕ ಸಿನೆಮಾ ಗಳಲ್ಲಿ ಹಾಟ್ ಹಾಡುಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಟಿ. ಅತೀ ಕಡಿಮೆ ಸಮಯದಲ್ಲೆ ದೊಡ್ಡ ಖ್ಯಾತಿ ಗಳಿಸಿಕೊಂಡ ಈಕೆ ಬಾಹುಬಲಿ ಸಿನೆಮಾದಲ್ಲಿ ಮನೋಹರಿ ಎಂಬ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದರು. ಜೊತೆಗೆ ಟೆಂಪರ್‍, ಕಿಕ್ 2, ಊಪಿರಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಸಖತ್ ಸದ್ದು ಮಾಡಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ನೋರಾ ಬೋಲ್ಡ್ ಆಗಿ ಪೋಸ್ ಕೊಡುತ್ತಾ ಇಂಟರ್‍ ನೆಟ್ ಶೇಕ್ ಮಾಡುತ್ತಿರುತ್ತಾರೆ.

ನಟಿ ನೋರಾ ಫತೇಹಿ ಬಾಲಿವುಡ್ ನಲ್ಲಿ ನಡೆಯುವಂತಹ ಈವೆಂಟ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ವಿವಿಧ ಈವೆಂಟ್ ಗಳಲ್ಲಿ ವಿವಿಧ ರೀತಿಯ ಡ್ರೆಸ್ ಗಳನ್ನು ಧರಿಸಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಎಲ್ಲರನ್ನೂ ಸೆಳೆಯುವ ನಿಟ್ಟಿನಲ್ಲಿ ಕೆಲವೊಮ್ಮೆ ವಿಚಿತ್ರವಾದ ಡ್ರೆಸ್ ಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಕಾರಣದಿಂದ ಅವರು ಇರುಸು ಮುರುಸು ಸಹ ಅನುಭವಿಸುತ್ತಿರುತ್ತಾರೆ. ಇದೀಗ ಅದೇ ರೀತಿಯ ಅನುಭವವನ್ನು ನಟಿ ನೋರಾ ಫತೇಹಿ ಎದುರಿಸಿದ್ದಾರೆ. ಆಕೆ ಧರಿಸಿದ ಸೀರೆಯ ಕಾರಣದಿಂದ ಕೊಂಚ ಯಾಮಾರಿದರೂ ಜಾರಿ ಕೆಳಗೆ ಬೀಳುತ್ತಿದ್ದರು.

ಖ್ಯಾತ ಬಾಲಿವುಡ್ ಫ್ಯಾಷನ್ ಡಿಜೈನರ್‍ ಮನಿಷ್ ಮೆಲ್ಹೋತ್ರಾ ಇತ್ತೀಚಿಗಷ್ಟೆ ಮುಂಬೈನಲ್ಲಿ ಬ್ರೈಡಲ್ ಕಲ್ಚರ್‍ ಶೋ ಕಾರ್ಯಕ್ರಮ ನಿರ್ವಹಿಸಿದ್ದರು. ಈ ಕಾರ್ಯಕ್ರಮಕ್ಕೆ  ಬಾಲಿವುಡ್ ನ ಅನೇಕ ಸೆಲೆಬ್ರೆಟಿಗಳು ಹಾಜರಾಗಿದ್ದರು. ಇದೇ ಈವೆಂಟ್ ನಲ್ಲಿ ನೋರಾ ಫತೇಹಿ ಸಹ ಮಿಂಚಿದ್ದಳು. ಈ ವೇಳೆ ನೋರಾ ಬ್ಲಾಕ್ ಕಲರ್‍ ಡಿಸೈನರ್‍ ಸೀರೆಯಲ್ಲಿ ಮಿಂಚಿದ್ದಾರೆ. ಈ ಸೀರೆಯಲ್ಲಿ ಆಕೆ ಕೊಂಚ ವಿಚಿತ್ರವಾಗಿಯೇ ಇದ್ದಾರೆ ಎಂದು ಹೇಳಬಹುದಾಗಿದೆ. ಸೆರಗು ಇದ್ದು ಇಲ್ಲದಂತೆ ತಂತಿಯಂತೆ ಮೇಲೆ ಹಾಕಿಕೊಂಡಿದ್ದಾರೆ. ಜೊತೆಗೆ ಬ್ರಾ ನಂತಿರುವ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಹೊರಹಾಕಿದ್ದಾರೆ. ಸೊಂಟ, ನಾವೆಲ್ ಶೋ ಮಾಡುತ್ತಾ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಮುಂದೆ ಮುಚ್ಚಿಕೊಳ್ಳಲು ಏನು ಇಲ್ಲ ಆದರೆ ಹಿಂದೆ ಮಾತ್ರ ನೆಲ ಹೊರೆಸುತ್ತಿರುವ ಸೀರೆಯಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ.

ಇನ್ನೂ ಆಕೆಯ ಈ ಡ್ರೆಸ್ ನೋಡಿ ಅನೇಕರು ಶಾಕ್ ಆಗಿದ್ದಾರೆ. ಜೊತೆಗೆ ಆಕೆಯನ್ನು ತಮ್ಮ ಕ್ಯಾಮೆರಾಗಳಲ್ಲಿ ಬಂಧಿಸಲು ಪೊಟೋಗ್ರಾಫರ್‍ ಗಳು ಹಿಂದೆ ಬಿದ್ದಿದ್ದಾರೆ. ಸೀರೆ ಉದ್ದವಾಗಿರುವ ಹಿನ್ನೆಲೆಯಲ್ಲಿ ಯಾಮಾರಿದರೇ ಕೆಳಗೆ ಬೀಳುತ್ತಿದ್ದರು. ಸದ್ಯ ಈ ವಿಡಿಯೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.