Film News

40 ಪ್ಲಸ್ ನಲ್ಲೂ ಯಂಗ್ ಬ್ಯೂಟಿಯಂತೆ ಹಾಟ್ ಪೋಸ್ ಕೊಟ್ಟ ನಟಿ ಭೂಮಿಕಾ ಚಾವ್ಲಾ, ನಾಚಿಕೆ ಪಡುತ್ತಾ ಪೋಸ್ ಕೊಟ್ಟ ನಟಿ…!

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಪರಿಚಯವಾಗಿದ್ದರೂ, ಅವರಲ್ಲಿ ಕೆಲ ನಟಿಯರು ಮಾತ್ರ ಸ್ಟಾರ್‍ ನಟಿಯಾಗುತ್ತಾರೆ. ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಸಾಲಿನಲ್ಲಿ ಕ್ಯೂಟ್ ನಟಿ ಭೂಮಿಕಾ ಚಾವ್ಲಾ ಸಹ ಒಬ್ಬರಾಗಿದ್ದಾರೆ. ತೆಲುಗು ಸಿನಿರಂಗದಲ್ಲಿ ಸಾಮಾನ್ಯವಾಗಿ ಎಂಟ್ರಿಕೊಟ್ಟ ಈಕೆ, ಕಡಿಮೆ ಸಮಯದಲ್ಲೇ ಹಿಟ್ ಸಿನೆಮಾಗಳನ್ನು ಖಾತೆಗೆ ಸೇರಿಸಿಕೊಂಡರು. ಇದೀಗ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

ಮಾಡೆಲಿಂಗ್ ಮೂಲಕ ಎಂಟ್ರಿ ಕೊಟ್ಟ ಭೂಮಿಕಾ ಅತೀ ಕಡಿಮೆ ಸಮಯದಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಟ ಸುಮಂತ್ ಅಭಿನಯದ ಯುವಕುಡು ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ನಟ ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಖುಷಿ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ಅನೇಕ ಅವಾರ್ಡ್‌ಗಳನ್ನು ದಕ್ಕಿಸಿಕೊಂಡರು. ಜೊತೆಗೆ ಸಿನೆಮಾಗಳ ಆಫರ್‍ ಗಳು ಹಾಗೂ ಫ್ಯಾನ್ ಫಾಲೋಯಿಂಗ್ ಸಹ ಹೆಚ್ಚಾಯಿತು. ಪವನ್ ಕಲ್ಯಾಣ್, ಮಹೇಶ್ ಬಾಬು ಹಾಗೂ ಎನ್.ಟಿ.ಆರ್‍ ರವರಿಗೆ ಭೂಮಿಕಾ ಲಕ್ಕಿ ಹಿರೋಯಿನ್ ಆಗಿದ್ದರು. ಅವರ ಜೊತೆಗೆ ನಟಿಸಿದ ಎಲ್ಲಾ ಸಿನೆಮಾಗಳು ಸೂಪರ್‍ ಹಿಟ್ ಆಗಿದೆ. ಆಕೆಯ ಕೆರಿಯರ್‍ ನಲ್ಲಿ ಒಕ್ಕಡು, ಸಿಂಹಾದ್ರಿ ಸಿನೆಮಾಗಳು ದೊಡ್ಡ ಕ್ರೇಜ್ ತಂದುಕೊಟ್ಟಿತ್ತು. ಇದೀಗ ಭೂಮಿಕಾ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಸಾಲು ಸಾಲು ಸಿನೆಮಾಗಳ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಸದ್ಯ ಭೂಮಿಕಾಗೆ 44 ವರ್ಷ ವಯಸ್ಸು.  ಆದರೂ ಸಹ ಆಕೆ ಹದಿಹರೆಯದ ಯುವತಿಯಂತೆ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಭೂಮಿಕಾ ಸದಾ ಗ್ಲಾಮರ್‍ ಪೊಟೋಸ್ ಮೂಲಕ ಅಭಿಮಾನಿಗಳನ್ನು ಆಕರ್ಷಣೆ ಮಾಡುತ್ತಿರುತ್ತಾರೆ. ಇದೀಗ ಆಕೆ ನಾಚಿಕೆ ಪಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಟೈಟ್ ಫಿಟ್ ಡ್ರೆಸ್ ನಲ್ಲಿ ಸ್ಟೈಲಿಷ್ ಆಗಿ ಹಾಟ್ ಆಗಿ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಭೂಮಿಕಾ ಹಂಚಿಕೊಂಡ ಪೊಟೋಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಆಕೆಯ ಪೊಟೋಗಳನ್ನು ನೋಡಿದ ಅನೇಕರು ತಮಗೆ ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನೆಮಾದ ಅಮ್ಮಾಯೇ ಸನ್ನಗಾ ಎಂಬ ಹಾಡು ನೆನಪಿಸುತ್ತಿವೆ ಎಂದು ಕಾಮೆಂಡ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳು ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳ ಸುರಿಮಳೆ ಗೈದಿದ್ದಾರೆ.

ಇನ್ನೂ ವಯಸ್ಸಾಗುತ್ತಿದ್ದಂತೆ ನಟಿಯರಿಗೆ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಭೂಮಿಕಾ ಮಾತ್ರ ಸಾಲು ಸಾಲು ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಆಕೆ ಕ್ಯಾರೆಕ್ಟರ್‍ ರೋಲ್ ಗಳಲ್ಲಿ ನಟಿಸುತ್ತಾ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಸೀತಾರಾಮಂ, ಸೀಟಿಮಾರ್‍ ಮೊದಲಾದ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

Most Popular

To Top