Film News

ಲಕ್ಷಾಂತರ ರೂಪಾಯಿ ವೆಚ್ಚದ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ, ಟಿ ಶರ್ಟ್, ಜೀನ್ಸ್, ಶೂಗೆ ಅಷ್ಟು ಲಕ್ಷನಾ?

ಸೌತ್ ಸಿನಿರಂಗದ ಸ್ಟಾರ್‍ ಅಂಡ್ ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಪ್ರತಿನಿತ್ಯ ಸುದ್ದಿಯಾಗುತ್ತಲೇ ಇರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕೆಯ ಬಗ್ಗೆ ಒಂದಾದರೂ ಸುದ್ದಿ ಇದ್ದೇ ಇರುತ್ತದೆ. ಇದೀಗ ಆಕೆ ಧರಿಸಿದ ಬಟ್ಟೆಗಳ ಕಾರಣದಿಂದ ಸಖತ್ ಸುದ್ದಿಯಾಗಿದ್ದಾರೆ. ನಟಿ ರಶ್ಮಿಕಾ ಸಿಂಪಲ್ ಆಗಿರುವ ಟಿ ಶರ್ಟ್, ಡೆನಿಮ್ ಜೀನ್ಸ್ ಹಾಗೂ ಶೂ ಗಳ ತುಂಬಾ ದುಬಾರಿಯಾಗಿದ್ದು, ಲಕ್ಷಾಂತರ ಬೆಲೆ ಬಾಳುತ್ತವೆ ಎನ್ನಲಾಗುತ್ತಿದೆ. ಇದೀಗ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಸಿನಿರಂಗದಲ್ಲಿ ನಟರಿಗೆ ದೊರೆಯುವಷ್ಟು ರೆನ್ಯುಮರೇಷನ್ ನಟಿಯರಿಗೆ ಸಿಗುವುದಿಲ್ಲ. ಆದರೆ ತಮ್ಮ ಬಟ್ಟೆ, ಸೇರಿದಂತೆ ಇತರೆ ಅಗತ್ಯತೆಗಳಿಗಾಗಿ ಹೆಚ್ಚು ಖರ್ಚು ಮಾಡುತ್ತಿರುತ್ತಾರೆ ನಟಿಯರು. ಇನ್ನೂ ನಟಿಯರು ಹೊರಬರಬೇಕಾದರೆ ಹೊರಗೆ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲು ದುಬಾರಿ ಕಾಸ್ಟ್ಯೂಮ್ಸ್ ನಲ್ಲಿ ಬರುತ್ತಿರುತ್ತಾರೆ. ಇದೀಗ ನಟಿ ರಶ್ಮಿಕಾ ಸಹ ದುಬಾರಿ ಬೆಲೆಯ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸಿನೆಮಾದ ಮೂಲಕ ಸೌತ್ ಅಂಡ್ ನಾರ್ತ್ ನಲ್ಲಿ ಫೇಂ ಸಂಪಾದಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಹೊರ ಬಂದರೇ ಸಾಕು ಪಾಪರಾಜಿಗಳು ಆಕೆಯ ಹಿಂದೆ ಬೀಳುತ್ತಿರುತ್ತಾರೆ. ಈ ಹಿಂದೆ ರಶ್ಮಿಕಾ ಸಹ ಜಿಮ್ ಡ್ರೆಸ್ ಸೇರಿದಂತೆ ವಿವಿಧ ಡ್ರೆಸ್ ಗಳನ್ನು ತೊಟ್ಟು ಕಾಣಿಸಿಕೊಂಡಿದ್ದರು. ಇದೀಗ ರಶ್ಮಿಕಾ ಸಾಮಾನ್ಯವಾದ ಟೀ ಶರ್ಟ್ ಮಾದರಿಯ ಟಾಪ್, ಡೆನಿಮ್ ಜೀನ್ಸ್ ಹಾಗೂ ಕನ್ನಡಕ ಹಾಗೂ ಶೂ ಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಡ್ರೆಸ್ ಬೆಲೆಯ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

ನಟಿ ರಶ್ಮಿಕಾ ಧರಿಸಿದ ಡ್ರೆಸ್ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದಂತೆ ರಶ್ಮಿಕಾ ತೊಟ್ಟಿದ್ದ ಕಾಸ್ಟ್ಯೂಮ್ ಬೆಲೆ ಬರೊಬ್ಬರಿ 2 ಲಕ್ಷ ಅಂತೆ. ರಶ್ಮಿಕಾ ಧರಿಸಿದ್ದ ಟಿ ಶರ್ಟ್ ಮಾದರಿಯ ಟಾಪ್ ಕೊಂಚ ಡಿಸೈನ್ ಆಗಿದೆ ಅಷ್ಟೆ ಆದರೂ ಸಹ ಈ ಡ್ರೆಸ್ ಅಷ್ಟೊಂದು ಬೆಲೆಯೆ ಎಂದು ಅನೇಕರು ಶಾಕ್ ಆಗುತ್ತಿದ್ದಾರೆ. ಇದೀಗ ಈ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಇನ್ನೂ ಆಕೆಯ ಈ ಪೊಟೋಗಳನ್ನು ನೋಡಿದರೇ ರಶ್ಮಿಕಾ ರವರ ಮೊದಲ ಸಿನೆಮಾ ಕಿರಕ್ ಪಾರ್ಟಿಯಲ್ಲೂ ಸಹ ರಶ್ಮಿಕಾ ಅದೇ ಮಾದರಿಯ ಕನ್ನಡಕ ಧರಿಸಿದ್ದರು. ಯಾವುದೇ ಮೇಕಪ್ ಇಲ್ಲದೇ ಆಕೆ ಸುಂದರವಾಗಿ ಕಾಣಿಸಿಕೊಂಡಿದ್ದು, ಸರಳವಾಗಿರುವಂತಹ ಡ್ರೆಸ್ ಗೂ ಅಷ್ಟೊಂದು ಬೆಲೆಯೇ ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇನ್ನೂ ರಶ್ಮಿಕಾ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್ ನಲ್ಲೂ ಸಹ ಎರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲೂ ಸಹ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ತಮಿಳಿನ ವಿಜಯ್ ಜೊತೆಗೆ ವಾರಿಸು ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಮಿಶ್ರ ಸ್ಪಂದನೆ ಪಡೆದುಕೊಂಡಿದೆ.

Most Popular

To Top