Film News

ವರಾಹರೂಪಂ ಹಾಡಿನ ಕಾಪಿರೈಟ್ಸ್ ಕೇಸ್ ನಲ್ಲಿ ಕಾಂತಾರ ಸಿನೆಮಾ ತಂಡಕ್ಕೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್….!

ಸ್ಯಾಂಡಲ್ ವುಡ್ ನಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾದ ರಿಷಭ್ ಶೆಟ್ಟಿ ಅಭಿನಯದ ಕಾಂತಾರಾ ಸಿನೆಮಾ ಸೆನ್ಷೇಷನಲ್ ಹಿಟ್ ಆಗಿದ್ದು, ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಈ ಸಿನೆಮಾಗೆ ದೊಡ್ಡ ದೊಡ್ಡ ಸ್ಟಾರ್‍ ನಟರೇ ರಿಷಬ್ ಶೆಟ್ಟಿ ಕಾಂತಾರಾ ಸಿನೆಮಾಗೆ ಫಿದಾ ಆಗಿದ್ದರು. ಅನೇಕ ಸ್ಟಾರ್‍ ನಟರು ಈ ಸಿನೆಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಈ ಸಿನೆಮಾ ಬಳಿಕ ಹಲವು  ಭಾಷೆಗಳಲ್ಲೂ ಸಹ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಹಿಂದೆ ಈ ಸಿನೆಮಾದಲ್ಲಿನ ವಾರಾಹರೂಪಂ ಹಾಡಿನ ಮೇಲೆ ಕಾಪಿರೈಟ್ಸ್ ಪ್ರಕರಣವೊಂದು ದಾಖಲಾಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ಪ್ರಕಟಿಸಿದೆ.

ಕಾಂತಾರ ಸಿನೆಮಾದಲ್ಲಿನ ತುಂಬಾ ಫೇಮಸ್ ಆದ ವರಾಹರೂಪಂ ಹಾಡಿನ ಬಗ್ಗೆ ಅನೇಕ ಚರ್ಚೆಗಳು ಹುಟ್ಟಿಕೊಂಡಿದ್ದವು. ಈ ಹಾಡಿನ ಸಂಬಂಧ ಕಾಪಿರೈಟ್ಸ್ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲೂ ಸಹ ಪ್ರಕರಣಗಳು ನಡೆಯುತ್ತಿವೆ. ಇದೀಗ ಸುಪ್ರೀಂಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ನೀಡಿದೆ. ವರಾಹರೂಪಂ ಎಂಬ ಹಾಡನ್ನು ತೆಗೆಯಬೇಕು ಎಂದು ಈ ಹಿಂದೆ ಕೇರಳ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್‌ನಿಂದ ಮಧ್ಯಂತರ ಆದೇಶ ಅಥವಾ ಅಂತಿಮ ಆದೇಶ ಬರುವವರೆಗೂ ಕಾಂತಾರ ಸಿನೆಮಾದಲ್ಲಿ ವರಾಹ ರೂಪಂ ಹಾಡನ್ನು ಬಳಸಬಾರದು. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಸಹ ಇದೆ ಎಂದು ಕೇರಳ ಹೈಕೋರ್ಟಿನ ನ್ಯಾಯಮೂರ್ತಿ ಎ.ಬದ್ರುದೀನ್ ಹೇಳಿದ್ದರು. ಇದೀಗ ಸುಪ್ರೀಂ ಕೋರ್ಟ್ ಮಹತ್ತರ ಹೊಸ ತೀರ್ಪನ್ನು ನೀಡಿದೆ.

ಇನ್ನೂ ವರಾಹರೂಪಂ ಹಾಡಿನ ಕಾಪಿರೈಟ್ಸ್ ಪ್ರಕರಣದಕ್ಕೆ ಕೇರಳ ಹೈಕೊರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಸಡಲಿಕೆ ಮಾಡಿದೆ. ಕಾಂತಾರ ಸಿನೆಮಾದಲ್ಲಿ ವಾರಾಹ ರೂಪಂ ಹಾಡನ್ನು ಬಳಕೆ ಮಾಡಬಹುದು. ವಿಚಾರಣೆಗೆ ಹಾಜರಾದಾಗ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಪೊಲೀಸರು ಪ್ರಶ್ನಿಸಬಹುದು ಆದರೆ ಅವರನ್ನು ಬಂಧಿಸುವಂತಿಲ್ಲ. ಕಾಂತಾರ ತಂಡದವರು ಕೃತಿ ಚೌರ್ಯ ಮಾಡಿದ್ದಾರೆ ಎಂದು ಕೇರಳ ಹೈಕೋರ್ಟ್‌ಗೆ ಅನಿಸಿದೆ. ಹಾಗೆಂದ ಮಾತ್ರಕ್ಕೆ ಈ ರೀತಿಯ ನಿಯಮಗಳನ್ನು ಹೇರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ರವರು ಹೇಳಿದ್ದಾರೆ. ಇನ್ನೂ ಫೆ.12 ಹಾಗೂ 13 ರಂದು ಅರ್ಜಿದಾರರು ಖುದ್ದಾಗಿ ವಿಚಾರಣೆಗೆ ಸಹ ಹಾಜರಾಗಬೇಕು. ಅವರನ್ನು ಬಂಧಿಸಿದ್ದರೇ ಜಾಮೀನಿನ ಮೇಲೆ ಅವರನ್ನು ಬಿಟ್ಟು ಕಳುಹಿಸಬೇಕು ಎಂದೂ ಸಹ ಕೋರ್ಟ್ ಆದೇಶಿಸಿದೆ.

ಇನ್ನೂ ಕಾಂತಾರಾ ಸಿನೆಮಾ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿದ್ದಾರೆ. ಇದೀಗ ಬಂದಿರೋದು ಕಾಂತಾರ-2, ಮುಂದೆ ಕಾಂತಾರ-1 ಬರಲಿದೆ ಎಂದು ಹೇಳುವ ಮೂಲಕ ರಿಷಭ್ ಶೆಟ್ಟಿ ಎಲ್ಲರಲ್ಲೂ ಕೂತೂಹಲ ಮೂಡಿಸಿದ್ದಾರೆ.

Most Popular

To Top