Film News

ಗರ್ಭಿಣಿಯಾದ ಸಮಯದಲ್ಲಿ ಆ ರೀತಿಯಾಗಿದ್ದೆ ಎಂದು ಬಾಪುಗಾರಿ ಬೊಮ್ಮ ಪ್ರಣಿತಾ ಸುಭಾಷ್ ಇಂಟ್ರಸ್ಟಿಂಗ್ ಕಾಮೆಂಟ್ಸ್…!

ಸ್ಯಾಂಡಲ್ ವುಡ್ ನ ಗ್ಲಾಮರಸ್ ನಟಿಯರಲ್ಲಿ ಪ್ರಣಿತಾ ಸುಭಾಷ್ ಸಹ ಒಬ್ಬರಾಗಿದ್ದಾರೆ. ಕೇವಲ ಕನ್ನಡ ರಂಗಕ್ಕೆ ಸೀಮಿತವಾಗದೇ ಸೌತ್ ನ ವಿವಿಧ ಭಾಷೆಗಳಲ್ಲಿ ನಟಿಸಿ ಫೇಂ ಸಂಪಾದಿಸಿಕೊಂಡಿದ್ದಾರೆ. ಇನ್ನೂ ಕಳೆದ ವರ್ಷ ಆಕೆ ಮದುವೆಯಾಗಿದ್ದು, ಜೂನ್ ಮಾಹೆಯಲ್ಲಿ ಮಗುವಿಗೂ ಸಹ ಜನ್ಮ ಕೊಟ್ಟರು. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರಣಿತಾ ಆಗಾಗ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸೆಷನ್ ನಡೆಸುತ್ತಿರುತ್ತಾರೆ. ಇದೀಗ ಲೈವ್ ಸೆಷನ್ ನಲ್ಲಿ ಆಕೆ ಅಭಿಮಾನಿಗಳು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಟಿ ಪ್ರಣಿತಾ ಸುಭಾಷ್ ಸೌತ್ ನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಆಕೆ ಕನ್ನಡದಲ್ಲಿ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅತ್ತ ತೆಲುಗಿನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದು, ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಜೊತೆಗೆ ಅತ್ತಾರಿಂಟಿಕಿ ದಾರೆದಿ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾದ ಮೂಲಕ ಆಕೆ ತುಂಬಾನೆ ಫೇಮಸ್ ಸಹ ಆದರು. ಈ ಸಿನೆಮಾದ ಬಳಿಕ ಆಕೆ ಬಾಪುಗಾರಿ ಬೊಮ್ಮ ಎಂಬ ಖ್ಯಾತಿಗೂ ಸಹ ಪಾತ್ರರಾದರು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ತನ್ನ ಪ್ರಿಯಕರ ನಿತಿನ್ ರಾಜು ಜೊತೆಗೆ 2021 ರಲ್ಲಿ ಮದುವೆಯಾದರು. ತುಂಬಾ ಸಿಕ್ರೇಟ್ ಆಗಿಯೇ ಈ ಮದುವೆ ನಡೆದಿತ್ತು. ಮದುವೆಯಾದ ಕೆಲವು ದಿನಗಳು ಕಳೆದ ಮೇಲೆ ಮದುವೆ ಪೊಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಮದುವೆ, ಗರ್ಭಿಣಿ, ಮಗು ಕಾರಣಗಳಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದರು.

ಇನ್ನೂ ನಟಿ ಪ್ರಣಿತಾ ಸಿನೆಮಾಗಳಿಂದ ದೂರವಾದರು ಸಹ ಅಭಿಮಾನಿಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಟಚ್ ನಲ್ಲೇ ಇದ್ದರು. ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ತಮ್ಮ ಬಗೆಗಿನ ವೈಯುಕ್ತಿಕ ವಿಚಾರಗಳ ಜೊತೆಗೆ ತನ್ನ ಪತಿ, ಮಗಳೊಂದಿಗೆ ಕೆಲವೊಂದು ಪೊಟೋಗಳನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದಾರೆ. ಇನ್ನೂ ಪ್ರಣಿತಾ ಆಗಾಗ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಮಾತುಕಥೆ ನಡೆಸಿದ್ದಾರೆ. ಈ ಸೆಷನ್ ನಲ್ಲಿ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ಸಹ ನೀಡಿದ್ದಾರೆ. ಒಬ್ಬ ಅಭಿಮಾನಿ ಪ್ರಶ್ನೆ ಮಾಡುತ್ತಾ ನೀವು ಗರ್ಭಿಣಿಯಾದಾಗ ತುಂಬಾ ದಪ್ಪ ಆಗಿದ್ರಿ ಎಂದು ಕೇಳಿದ್ದು, ಅದಕ್ಕೆ ಉತ್ತರಿಸುತ್ತಾ ನಾನು ಡೆಲಿವರಿ ಸಮಯದಲ್ಲಿ 75 ಕೆಜಿ ಆಗಿದ್ದೆ. ನಮ್ಮ ರಿಲೇಟಿವ್ಸ್ ಕ್ಯೂಟ್ ಆಗಿದ್ದೀಯಾ ಎಂದು ಹೇಳುತ್ತಿದ್ದರು. ಆದರೆ ನನಗೆ ಮಾತ್ರ ಏನೋ ಒಂದು ತರಹ ಇರುತ್ತಿತ್ತು. ಡೆಲಿವರಿ ಬಳಿಕ ನನಗೆ ಇಷ್ಟವಾದ ಆಹಾರ ಸಹ ಬಿಟ್ಟು ತೂಕ ಇಳಿಸುವತ್ತ ಮುಂದಾದೆ. ಇದಕ್ಕಾಗಿ ಪ್ರತಿನಿತ್ಯ ವ್ಯಾಯಾಮ, ಸ್ವಿಮ್ಮಿಂಗ್ ಮಾಡುತ್ತಾ ಮತ್ತೆ ಮೊದಲಿನಂತಾದೆ ಎಂದಿದ್ದಾರೆ.

ಇನ್ನೂ ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಪ್ರಣಿತಾ ಉತ್ತರ ನೀಡಿದ್ದಾರೆ. ಸದ್ಯ ಪ್ರಣಿತಾ ಮಲಯಾಳಂ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ನಿರ್ದೇಶಕ ದಿಲೀಪ್ ಕುಮಾರ್‍ ರವರ 148ನೇ ಸಿನೆಮಾದಲ್ಲಿ ನಟಿಸುತ್ತಿದ್ದು, ಮಲಯಾಳಂನಲ್ಲಿ ಪ್ರಣಿತಾ ನಟಿಸುತ್ತಿರುವ ಮೊದಲ ಸಿನೆಮಾ ಇದಾಗಿದೆ. ಇನ್ನೂ ಪ್ರಣಿತಾ ರಾವಣಾಸುರ ಎಂಬ ಕನ್ನಡ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

Most Popular

To Top