ರಾಮಾಯಣ ಸಿನೆಮಾ ಹಿನ್ನೆಲೆಯಲ್ಲಿ ಮಾಂಸ, ಮದ್ಯ ಮುಟ್ಟಲ್ಲ, ಪಾರ್ಟಿಗಳಿಗೆ ಹೋಗಲ್ಲ ಎಂದ ರಣಬೀರ್ ಕಪೂರ್….!

Follow Us :

ಬಾಲಿವುಡ್ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ ಕಥೆಯನ್ನು ಆಧರಿಸಿ ಸಿನೆಮಾ ಒಂದನ್ನು ಮಾಡಲು ಮುಂದಾಗಿದ್ದು, ಸಿನೆಮಾಗಾಗಿ ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ ಎಂದು ಹೇಳಲಾಗಿದ್ದು, ರಾಮನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ಬಣ್ಣ ಹಚ್ಚಲಿದ್ದಾರೆ. ಆತ ಈ ಪಾತ್ರಕ್ಕಾಗಿ ಎಲ್ಲಾ ತಯಾರಿ ಸಹ ಮಾಡಿಕೊಳ್ಳುತ್ತಿದ್ದು, ಇದೀಗ ತಾನು ಮಾಂಸ, ಮದ್ಯ ಮುಟ್ಟಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಣಬೀರ್‍ ಕಪೂರ್‍ ರಾಮಾಯಣ ಸಿನೆಮಾಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ರಾಮನ ಪಾತ್ರ ಮಾಡಲು ರಣಬೀರ್‍ ಕಪೂರ್‍ ತುಂಬಾನೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ರಾಮನ ಪಾತ್ರಕ್ಕೆ ರಣಬೀರ್‍ ಸೂಕ್ತ ಎಂದು ನಿರ್ದೇಶಕ ನಿತೀಶ್ ತಿವಾರಿ ರಣಬೀರ್‍ ರವರನ್ನೇ ರಾಮನ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಇನ್ನೂ ರಾಮಾಯಣ ಸಿನೆಮಾದ ಶೂಟಿಂಗ್ ಶುರುವಾದ ಬಳಿಕ ರಣಬೀರ್‍ ಸಂಪೂರ್ಣವಾಗಿ ಮಾಂಸ, ಮದ್ಯ, ತಡರಾತ್ರಿ ನಡೆಯುವಂತಹ ಪಾರ್ಟಿಗಳಲ್ಲೂ ಸಹ ಭಾಗವಹಿಸಬಾರದೆಂಬ ದೊಡ್ಡ ನಿರ್ಧಾರಕ್ಕೆ ಬಂದಿದ್ದಾರಂತೆ. ಫೆಬ್ರವರಿ ಮಾಹೆಯಿಂದ ಶೂಟಿಂಗ್ ಸಹ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಇದೆಲ್ಲಾ ಪಬ್ಲಿಸಿಟಿಗಾಗಿ ಅಲ್ಲ, ತಮ್ಮನ್ನು ತಾವು ಶುದ್ದವಾಗಿಟ್ಟುಕೊಳ್ಳುವ ಕಾರಣಕ್ಕಾಗಿ ಈ ರೀತಿಯಲ್ಲಿ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ.

ಇನ್ನೂ ರಾಮಾಯಣ ಸಿನೆಮಾದ ಶೂಟಿಂಗ್ ಇದೇ ಫೆಬ್ರವರಿ 2024 ರಿಂದ ಆರಂಭವಾಗಲಿದೆ ಎನ್ನಲಾಗಿದೆ. ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಮಧು ಮಂಟೆನಾ ಈ ಸಿನೆಮಾ ನಿರ್ಮಾಣ ಮಾಡಲಿದ್ದಾರೆ. ಇನ್ನೂ ಈ ಸಿನೆಮಾದ ಮತ್ತೊಂದು ಕ್ರೇಜಿ ಅಪ್ಡೇಟ್ ಸಹ ಸಖತ್ ಸುದ್ದಿಯಾಗುತ್ತಿದೆ. ಈ ಸಿನೆಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್‍ ನಟ ರಾಕಿಂಗ್ ಸ್ಟಾರ್‍ ಯಶ್ ರಾವಣನ ಪಾತ್ರ ಪೋಷಣೆ ಮಾಡುತ್ತಿದ್ದಾರಂತೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಇನ್ನೂ ಸಿಕ್ಕಿಲ್ಲ. ಜೊತೆಗೆ ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಆ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಹ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.