Uncategorized

ಭಾರತದ ತ್ರಿರಂಗ ಧ್ವಜಕ್ಕಿಂತ ಪಾಕ್ ನ ದೊಡ್ಡ ಧ್ವಜ, ಲುಲೂ ಮಾಲ್ ನಲ್ಲಿನ ಈ ಕೃತ್ಯಕ್ಕೆ ಭಾರಿ ಆಕ್ರೋಷ…..!

ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಶಾಪಿಂಗ್ ಮಾಲ್ ಗಳಲ್ಲಿ ಲುಲೂ ಮಾಲ್ ಸಹ ಒಂದಾಗಿದೆ. ಈಗಾಗಲೇ ದೇಶದ ಅನೇಕ ನಗರದಲ್ಲಿ ಲುಲೂ  ಮಾಲ್ ಶಾಖೆಗಳು ಶುರುವಾಗಿದೆ. ಕೇರಳದ ಕೊಚ್ಚಿಯಲ್ಲಿರುವಂತಹ ಲುಲೂ ಮಾಲ್ ಇದೀಗ ವಿವಾದಕ್ಕೆ ಗುರಿಯಾಗಿದೆ. ವಿಶ್ವಕಪ್ ಟೂರ್ನಿಯ ನಿಮಿತ್ತ ಲೂಲೂ ಮಾಲ್ ನಲ್ಲಿ ಕ್ರಿಕೆಟ್ ದೇಶಗಳ ಧ್ವಜಗಳನ್ನು ಹಾಕಿದ್ದಾರೆ ಎನ್ನಲಾದ ಪೊಟೋ ಒಂದು ವೈರಲ್ ಆಗಿದ್ದು, ಅದರಲ್ಲಿ ಭಾರತದ ಧ್ವಜಕ್ಕಿಂತ ದೊಡ್ಡದಾದ ಪಾಕಿಸ್ಥಾನದ ಧ್ವಜ  ಹಾಕಲಾಗಿದೆ ಎಂಬ ವಿವಾದ ಶುರುವಾಗಿದೆ.

ಕೇರಳದ ಕೊಚ್ಚಿಯಲ್ಲಿರುವ ಲುಲೂ ಮಾಲ್ ನಲ್ಲಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿಮಿತ್ತ ವಿವಿಧ ದೇಶಗಳ ಧ್ವಜಗಳನ್ನು ಹಾಕಲಾಗಿತ್ತು ಎನ್ನಲಾಗಿದೆ. ಈ ಧ್ವಜಗಳಲ್ಲಿ ಭಾರತದ ಧ್ವಜಕ್ಕಿಂತ ಪಾಕಿಸ್ತಾನದ ಧ್ವಜವನ್ನು ದೊಡ್ಡದಾಗಿ ಹಾಕಲಾಗಿದೆ. ಅಷ್ಟೇಅಲ್ಲದೇ ಭಾರತ ಹಾಗೂ ಇತರ ದೇಶಗಳ ಧ್ವಜಗಳಿಗಿಂತ ಮೇಲೆ ಪಾಕ್ ಧ್ವಜವನ್ನು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಈ ಬಗ್ಗೆ ದೊಡ್ಡ ಮಟ್ಟದಲ್ಲೇ ಆಕ್ರೋಷ ಹೊರಹಾಕುತ್ತಿದ್ದಾರೆ. ಲೂಲೂ ಮಾಲ್ ಧ್ವಜ ನಿಯಮ ಉಲ್ಲಂಘನೆ ಮಾಡಿದೆ. ಭಾರತದ ಧ್ವಜವನ್ನು ಚಿಕ್ಕದಾಗಿ ಹಾಕಿ, ಪಾಕ್ ಧ್ವಜವನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶನ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಅದರಲ್ಲಿ ಕೆಲವರು ಕೇರಳ ಸ್ಟೋರಿಯ ಮುಂದಿನ ಭಾಗ ಎಂದು ಕೆಲವರು ಹೇಳಿದರೇ ಮತ್ತೆ ಕೆಲವರು ಶತ್ರು ದೇಶದ ಧ್ವಜವನ್ನು ವಿಜೃಂಭಣೆಯಿಂದ ಪ್ರದರ್ಶನ ಮಾಡುತ್ತಿರುವುದು ಯಾರನ್ನು ಒಲೈಕೆ ಮಾಡಲು ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ. ಇನ್ನೂ ಪೊಲೀಸರಾಗಲೀ ಅಥವಾ ಅಧಿಕಾರಿಗಳಾಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನೆಗಳನ್ನು ಸಹ ಕೇಳುತ್ತಿದ್ದಾರೆ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಲುಲೂ ಮಾಲ್ ಅಧಿಕಾರಿಗಳು ಧ್ವಜ ತೆರೆವುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

Most Popular

To Top