Film News

ಬಡವರ ಮನೆಯಲ್ಲಿ ಬೆಳಕಾದ ರಾಣಾ ಪತ್ನಿ ಮಿಹಿಕಾ, ಬಡವರಿಗಾಗಿ ಒಳ್ಳೆಯ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾದ ಮಿಹಿಕಾ…..!

ತೆಲುಗು ಸ್ಟಾರ್‍ ನಟ ರಾಣಾ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ವಿಲಕ್ಷಣ ನಟನಾಗಿ ಫೇಂ ಪಡೆದುಕೊಂಡ ರಾಣಾ ಒಂದೇ ಮಾದರಿಯ ಸಿನೆಮಾಗಳನ್ನು ಮಾಡದೇ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಅವರು ಅಂದುಕೊಂಡಷ್ಟು ಸಕ್ಸಸ್ ಸಿಗುತ್ತಿಲ್ಲ ಎಂದೇ ಹೇಳಬಹುದು. ಇನ್ನೂ ಅವರ ವೈಯುಕ್ತಿಕ ವಿಚಾರಕ್ಕೆ ಬಂದರೇ ರಾಣಾ ಕಳೆದ 2020 ರಲ್ಲಿ ಮಿಹಿಕಾ ಬಜಾಜ್ ಎಂಬಾಕೆಯನ್ನು ಪ್ರೀತಿಸಿ ವಿವಾಹವಾದರು. ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಮಾಡಿದ ಒಳ್ಳೆಯ ಕೆಲಸದ ಕಾರಣದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುಮಾರು ದಿನಗಳ ಕಾಲ ಪ್ರೀತಿಸಿದ ರಾಣಾ ಹಾಗೂ ಮಿಹಿಕಾ 2020 ರಲ್ಲಿ ಅದ್ದೂರಿಯಾಗಿ ಮದುವೆಯಾದರು. ಸದ್ಯ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆಯ ಪೋಸ್ಟ್ ಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆಕೆ ಬೀಚ್ ನಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ವಿಹರಿಸುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಲಾಂಗ್ ಡ್ರೆಸ್ ಧರಿಸಿ ಬೀಚ್ ಬಳಿಕ ತಣ್ಣನೆಯ ವಾತವಾರಣದಲ್ಲಿ ವಾಕಿಂಗ್ ಮಾಡುತ್ತಿದ್ದಾರೆ. ಈ ಪೊಟೋಗಳಿಗೆ ಮಹಿಕಾ ಹ್ಯಾಪಿ ಪ್ಲೇಸ್, ಬೀಚ್ ಡೇಸ್, ಲೈಫ್ ಈಸ್ ಬ್ಯೂಟಿಪುಲ್ ಎಂಬ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ಆಕೆಯ ಹೊಟ್ಟೆ ಕೊಂಚ ಮುಂದೆ ಬಂದ ಹಿನ್ನೆಲೆಯಲ್ಲಿ ಅನೇಕರು ಆಕೆ ಗರ್ಭಿಣಿಯಾಗಿದ್ದಾರೆಯೇ ಎಂಬ ಅನುಮಾನಗಳನ್ನೂ ಸಹ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಮಿಹಿಕಾ ಮಾಡಿದ ಸಾಮಾಜಿಕ ಕಾರ್ಯಕ್ಕೆ ಎಲ್ಲರೂ ಮೆಚ್ಚಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಮಿಹಿಕಾ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಬಡವರಿಗಾಗಿ ಮಿಹಿಕಾ ಅರ್ಥ್ ಆಂಗಲ್ಸ್ ಎಂಬ ಎನ್.ಜಿ.ಒ ಸಂಸ್ಥೆಯೊಂದಿಗೆ ಜೊತೆಗೂಡಿ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಸಂಸ್ಥೆಯ ಸಹಯೋಗದೊಂದಿಗೆ ಮಿಹಿಕಾ ವಿದ್ಯುತ್ ಸೌಲಭ್ಯ ಇಲ್ಲದಂತಹ ಕೆಲವೊಂದು ಗ್ರಾಮಗಳಲ್ಲಿ ಬಡವರಿಗಾಗಿ ಸೋಲಾರ್‍ ಲೈಟ್ಸ್ ಗಳನ್ನು ವಿತರಣೆ ಮಾಡಿದ್ದಾರೆ. ಇದೇ ವಿಚಾರವನ್ನು ಮಿಹಿಕಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಲಾರ್‍ ಲೈಟ್ ಗಳ ಮೂಲಕ ಬಡವರ ಮನೆಯಲ್ಲಿ ಬೆಳಕಾಗಿದ್ದಾರೆ.

ಇನ್ನೂ ಇಂದಿಗೂ ಸಹ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಅಂತಹ ಗ್ರಾಮಗಳನ್ನು ಹುಡುಕಿ ಮಿಹಿಕಾ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇನ್ನೂ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದ್ದು, ರಾಣಾ ಮಿಹಿಕಾ ನೀಡುತ್ತಿರುವ ಈ ಸಹಾಯಾಸ್ತಕ್ಕೆ ಧನ್ಯವಾದಗಳನ್ನು ಸಹ ಅರ್ಥ್ ಆಂಗಲ್ಸ್ ಎನ್.ಜಿ.ಒ. ತಿಳಿಸಿದೆ. ಇನ್ನೂ ಆಕೆಯ ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top