ಲೇಡಿ ಓರಿಯೆಂಟೆಡ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರಂತೆ ಬನ್ನಿ ವೈಫ್ ಸ್ನೇಹಾ?

Follow Us :

ಪ್ಯಾನ್ ಇಂಡಿಯಾ ಸ್ಟಾರ್‍ ಅಲ್ಲು ಅರ್ಜುನ್ ರವರ ಪತ್ನಿ ಸ್ನೇಹಾರೆಡ್ಡಿ ಸಹ ಭಾರಿ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಸಿನಿರಂಗದ ಸ್ಟಾರ್‍ ನಟಿಯರಂತೆ ಆಕೆ ಸಹ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಕೆಲವು ದಿನಗಳಿಂದ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರಿಗೂ ಶಾಕ್ ನೀಡುತ್ತಿದ್ದಾರೆ. ಸುಮಾರು ದಿನಗಳಿಂದ ಈಕೆ ಸಿನೆಮಾಗಳಲ್ಲಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದು, ಇದೀಗ ಆಕೆ ಲೇಡಿ ಓರಿಯೆಂಟೆಡ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಅಲ್ಲು ಕುಟುಂಬದ ಸೊಸೆ ಸ್ನೇಹಾ ರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ತಾನು ಕಡಿಮೆಯಿಲ್ಲ ಎಂಬಂತೆ ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ಸ್ನೇಹಾರೆಡ್ಡಿ ಕುಟುಂಬದ ನಿರ್ವಹಣೆಯನ್ನು ಮಾಡುತ್ತಾ, ಅಲ್ಲು ಅರ್ಜುನ್ ರವರ ಕೆಲವೊಂದು ಬ್ಯುಸಿನೆಸ್ ಗಳನ್ನು ಸಹ ನೋಡಿಕೊಳ್ಳುತ್ತಿರುತ್ತಾರೆ. ಆದರೆ ಇತ್ತಿಚಿಗೆ ಅಲ್ಲು ಅರ್ಜುನ್ ರವರಿಗಿಂತ ಸ್ನೇಹಾರೆಡ್ಡಿಯವರೇ ತುಂಬಾ ಸುದ್ದಿಯಾಗುತ್ತಿರುತ್ತಾರೆ. ದಿನೇ ದಿನೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದೂ ಸಹ ಹೇಳಬಹುದಾಗಿದೆ.  ತನ್ನ ಕುಟುಂಬ ಹಾಗೂ ಮಕ್ಕಳ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ತನ್ನ ಫಾಲೋವರ್ಸ್‌ ಗಳನ್ನು ರಂಜಿಸುತ್ತಿರುತ್ತಾರೆ.

ಇನ್ನೂ ಅಲ್ಲು ಸ್ನೇಹಾ ಸ್ಟಾರ್‍ ನಟಿಯರಿಗಿಂತ ಕಡಿಮೆ ಇಲ್ಲ ಎಂಬಂತೆ ಗ್ಲಾಮರಸ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಆಕೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಗಳೂ ಸಹ ಹರಿದಾಡಲು ಶುರುವಾಯ್ತು. ಈ ಬಗ್ಗೆ ಈ ಹಿಂದೆ ಅಲ್ಲು ಕುಟುಂಬದಿಂದಲೂ ಸ್ನೇಹಾ ರೆಡ್ಡಿ ಯಾವುದೇ ಸಿನೆಮಾಗಳಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಇದೀಗ ಮತ್ತೊಂದು ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲು ಸ್ನೇಹಾ ಲೇಡಿ ಓರಿಯೆಂಟೆಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟನೆ ಸಹ ಹೊರಬರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಇದು ನಿಜವೇ ಇರಬಹುದು  ಎಂಬ ಅನುಮಾನಗಳನ್ನೂ ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಸ್ನೇಹಾ ಹಂಚಿಕೊಳ್ಳುತ್ತಿರುವ ಗ್ಲಾಮರಸ್ ಪೊಟೋಗಳ ಕಾರಣದಿಂದಲೂ ಆಕೆ ಸಿನೆಮಾಗಳಲ್ಲಿ ಎಂಟ್ರಿ ಕೊಡಲಿದ್ದಾರೆ ಎಂಬ ಅನುಮಾನಗಳೂ ಸಹ ಆಕೆಯ ಫಾಲೋವರ್ಸ್‌ಗಳಲ್ಲಿ ಮೂಡಿದೆ. ಇದೀಗ ಹರಿದಾಡುತ್ತಿರುವ ಸುದ್ದಿ ನಿಜವಾಗಲಿ ಎಂದು ಅನೇಕರು ಆಶಯ ವ್ಯಕ್ತಪಡಿಸುತ್ತಿದ್ದಾರೆ.