ಸೂಪರ್ ಸ್ಟಾರ್ ಮಹೇಶ್ ಬಾಬು ರವರ ಲೇಟೆಸ್ಟ್ ಲುಕ್ಸ್, ಇಂಟರ್ ನೆಟ್ ನಲ್ಲಿ ವೈರಲ್ ಆದ ಪ್ರಿನ್ಸ್ ಮಹೇಶ್ ಬಾಬು ಸ್ಟಿಲ್ಸ್……!

ತೆಲುಗು ಸಿನಿರಂಗದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪ್ರಿನ್ಸ್ ಮಹೇಶ್ ಬಾಬು ಒಬ್ಬರಾಗಿದ್ದಾರೆ. ಸ್ಟಾರ್‍ ಕಿಡ್ ಆಗಿ ಎಂಟ್ರಿ ಕೊಟ್ಟರೂ ಸಹ ಆತ ತನ್ನದೇ ಆದ ಫೇಮ್ ದಕ್ಕಿಸಿಕೊಂಡು ಸ್ಟಾರ್‍ ನಟರಾದರು. ಸೂಪರ್‍ ಸ್ಟಾರ್‍ ಕೃಷ್ಣ ಪುತ್ರನಾಗಿ ಸಿನಿರಂಗಕ್ಕೆ ಎಂಟ್ರಿಕೊಟ್ಟ ಮಹೇಶ್ ಬಾಬು ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ದಕ್ಕಿಸಿಕೊಂಡಿದ್ದಾರೆ. ಇದೀಗ ಮಹೇಶ್ ಬಾಬು ರವರ ಕೂಲ್ ಸ್ಟಿಲ್ಸ್ ಇಂಟರ್‍ ನೆಟ್ ನಲ್ಲಿ ಶೇಕ್ ಮಾಡುತ್ತಿವೆ.

ಸದ್ಯ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ರವರ ಕಾಂಬಿನೇಷನ್ ನ SSMB28 ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸುಮಾರು 10 ವರ್ಷಗಳ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ. ಇನ್ನೂ ಕೆಲವೊಂದು ಜಾಹಿರಾತುಗಳಲ್ಲೂ ಸಹ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಜೊತೆಗೆ ಹೊಸ ಲುಕ್ಸ್ ನೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ನಂಬರ್‍ ವನ್ ಮೆನ್ಸ್ ವೇರ್ಸ್ ಗೆ ಸಂಬಂಧಿಸಿದ ಒಟ್ಟೊ ಸ್ಟೋರ್‍ ಜಾಹಿರಾತಿಗಾಗಿ ಪೊಟೋಶೂಟ್ಸ್ ಮಾಡಿಸಿದ್ದಾರೆ. ಸ್ಟೈಲಿಷ್ ಶರ್ಟ್ಸ್, ಟೀ ಶರ್ಟ್ಸ್ ಗಳಲ್ಲಿ ಸೂಪರ್‍ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮಹೇಶ್ ಬಾಬು ರವರ ನ್ಯೂ ಲುಕ್ಸ್ ಗೆ ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ.

ಇನ್ನೂ ಮಹೇಶ್ ಬಾಬು ರವರ ಜಾಹಿರಾತಿಗೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳೂ ಸಹ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಮಹೇಶ್ 47ರ ವಯಸ್ಸಿನಲ್ಲೂ ಸಹ ತುಂಬಾ ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನ ಹೆಲ್ತ್ ಅಂಡ್ ಫಿಟ್ ನೆಸ್ ಕಾಪಾಡಿಕೊಳ್ಳಲು ಹಾಗೂ ಹ್ಯಾಂಡಸಂ ಲುಕ್ಸ್ ಗಾಗಿ ಸದಾ ವರ್ಕೌಟ್ ಮಾಡುತ್ತಿರುತ್ತಾರೆ. ಸದ್ಯ ಮಹೇಶ್ ಬಾಬು ಸಹ SSMB28 ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾಗಾಗಿ ತುಂಬಾನೆ ವರ್ಕೌಟ್ಸ್ ಸಹ ಮಾಡುತ್ತಿದ್ದಾರೆ. ಈಗಾಗಲೇ ಫರ್ಪೆಕ್ಟ್ ಬಾಡಿ ಮೂಲಕ ಎಲ್ಲರನ್ನೂ ಆಶ್ಚರ್ಯ ಪಡಿಸುತ್ತಿದ್ದಾರೆ. ಇದೀಗ ಜಾಹಿರಾತಿನಲ್ಲಿ ಕಾಣಿಸಿಕೊಂಡ ಮಹೇಶ್ ಬಾಬು ರವರ ಲುಕ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಮಹೇಶ್ ಬಾಬು ಕೊನೆಯದಾಗಿ ಸರ್ಕಾರು ವಾರಿ ಪಾಠ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಬಳಿಕ ಮಹೇಶ್ ಬಾಬು SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಕೆಲವೊಂದು ಕಾರಣಗಳಿಂದ ಈ ಸಿನೆಮಾದ ಶೂಟಿಂಗ್ ಸಹ ತಡವಾಗಿತ್ತು. ಇದೀಗ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಜನವರಿ 13 ರಂದು ಸಿನೆಮಾ ಬಿಡುಗಡೆಯಾಗಲಿದೆ. ಇನ್ನೂ ಬಿಡುಗಡೆಯ ದಿನಾಂಕ ಘೋಷಣೆ ಮಾಡುತ್ತಾ ಚಿತ್ರತಂಡ ಮಾಡಿದ ಪೋಸ್ಟರ್‍ ಸಹ ಭಾರಿ ವೈರಲ್ ಆಗುತ್ತಿದೆ.