ಆನ್ ಲೈನ್ ಮೂಲಕ ಮನೆಯಲ್ಲಿ ಕುಳಿತು ಅಯೋಧ್ಯೆ ಬಾಲರಾಮನ ಬೆಳ್ಳಿ ನಾಣ್ಯ ಖರೀದಿಸಿ….!

Follow Us :

ಇಡೀ ವಿಶ್ವದಾದ್ಯಂತ ಇರುವ ರಾಮಭಕ್ತರು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದ್ದರು. ಅನೇಕ ವರ್ಷಗಳ ರಾಮಭಕ್ತರ ಕನಸು ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಅಂದಿನಿಂದ ಲಕ್ಷಾಂತರ ಮಂದಿ ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ರಾಮಲಲ್ಲಾನ ನೆನಪಿಗಾಗಿ ಕೆಲವೊಂದು ವಸ್ತುಗಳನ್ನು ಖರೀದಿಸುತ್ತಿರುತ್ತಾರೆ. ಇದೀಗ ರಾಮಮಂದಿರದ ಬೆಳ್ಳಿ ನಾಣ್ಯಗಳನ್ನು ಸಾರ್ವಜನಿಕ ಮಾರಾಟಕ್ಕಾಗಿ ಬಿಡುಗಡೆ ಮಾಡಲಾಗಿದ್ದು, ರಾಮಭಕ್ತರು ಆನ್ ಲೈನ್ ಮೂಲಕ ಖರೀದಿಸಬಹುದಾಗಿದೆ.

ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಾಮಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಅಯೋಧ್ಯೆಗೆ ಹೋದ ಭಕ್ತರು ರಾಮನ ನೆನಪಿಗಾಗಿ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಜೊತೆಗೆ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆಯಲು ಸಾಧ್ಯವಾಗದವರು ಆನ್ ಲೈನ್ ಮೂಲಕ ಪ್ರಸಾದವನ್ನು ಸಹ ಆರ್ಡರ್‍ ಮಾಡುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಕೇಂದ್ರ ಸರ್ಕಾರ ಅಯೋಧ್ಯೆ ರಾಮಮಂದಿರದ 50 ಗ್ರಾಂ ಬೆಳ್ಳಿ ನಾಣ್ಯಗಳನ್ನು ಸಾರ್ವಜನಿಕ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. 50 ಗ್ರಾಂ ತೂಕವಿರುವ ಈ ನಾಣ್ಯದ ಬೆಲೆ 5860 ರೂಪಾಯಿಯಾಗಿದೆ. ಈ ನಾಣ್ಯಗಳನ್ನು SPMCIL ಹಾಗೂ https://www.indiagovtmint.in ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಈ ನಾಣ್ಯದ ಒಂದು ಬದಿಯಲ್ಲಿ ರಾಮ್ ಲಲ್ಲಾ ಪ್ರತಿಮೆ, ಮತ್ತೊಂದು ಕಡೆ ರಾಮದೇವಾಲಯದ ಪೊಟೊ ಇದೆ. ಈ ನಾಣ್ಯ ಬುಕ್ ಮಾಡಿದ 15-18 ದಿನಗಳಲ್ಲಿ ನಿಮ್ಮ ಮನೆಗೆ ತಲುಪಿದೆ. ಇನ್ನೂ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಟಾನ ನಂತರ, ರಾಮಲ್ಲಲಾಗೆ ಸಂಬಂಧಿಸಿದ ಮೂರು ಸ್ಮರಣಿಕೆಯ ನಾಣ್ಯಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಫೆಬ್ರವರಿ ಮಾಹೆಯಲ್ಲಿ SPMCIL (ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ) ದ 19ನೇ ಸಂಸ್ಥಾಪನಾ ದಿನದಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರವರು ಬಿಡುಗಡೆ ಮಾಡಿದರು.