News

500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯ ಬಾಲ ರಾಮನ ಹಣೆಯ ಮೇಲೆ ಮೂಡಿದ ಸೂರ್ಯ ತಿಲಕ…!

500 ವರ್ಷದ ಬಳಿಕ ಶ್ರೀರಾಮನ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಬಾಲರಾಮನಿಗೆ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ರಾಮನ ಹಣೆಯ ಮೇಳೆ ಸೂರ್ಯ ತಿಲಕ ಇಡಲಾಗಿದೆ. ಬಾಲರಾಮನಿಗೆ ಸೂರ್ಯ ಅಭಿಷೇಕ ನಡೆಯಿತು. ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ  ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು. ಈ ದೃಶ್ಯ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ.

ಕೋಟ್ಯಾಂತರ ರಾನ ಭಕ್ತರ ಮಹದಾಸೆಯಂತೆ, 500 ವರ್ಷಗಳ ಹೋರಾಟದ ಫಲವಾಗಿ ಜನವರಿ 22ರಂದು ಮಂದಿರ ನಿರ್ಮಾಣವಾಗಿ ಬಾಲ ರಾಮನ ಪ್ರತಿಷ್ಠೆ ಕೂಡ ನಡೆದಿತ್ತು. ರಾಮ ಮಂದಿರ ನಿರ್ಮಾಣವಾದ ನಂತರ ಮೊದಲ ರಾಮ ನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಮಯದಲ್ಲಿ ಬಾಲ ರಾಮನ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಸೂರ್ಯರಶ್ಮಿ ನೇರವಾಗಿ ರಾಮ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ಕೂಡ ನಡೆಸಿದರು. ಇದೀಗ ಈ ವಿಧಾನ ಯಶಸ್ವಿಯಾಗಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹವನ್ನು ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು. ಪ್ರತೀ ವರ್ಷ ರಾಮನವಮಿಯಂದು ಬಾಲ ರಾಮನಿಗೆ ಸೂರ್ಯ ತಿಲಕ ಇಡಲಾಗುತ್ತದೆ. ಸೂರ್ಯ ವಂಶಸ್ಥನಾದ ಶ್ರೀರಾಮ ಜನ್ಮ ತಾಳಿದಾಗ ಸೂರ್ಯ ಒಂದು ತಿಂಗಳು ಅಯೋಧ್ಯೆಯನ್ನು ಬಿಟ್ಟು ಹೋಗಿರಲಿಲ್ಲ ಎಂಬ ಇತಿಹಾಸವೂ ಇದೆ.

ಅಯೋಧ್ಯೆಯ ರಾಮಮಂದಿರದಲ್ಲಿ ಮೊದಲ ರಾಮನವಮಿ ಇದಾಗಿದೆ. ದೇವಾಲಯವನ್ನು ಅದ್ದೂರಿಯಾಗಿ ಸಿಂಗರಿಸಲಾಗಿತ್ತು. ಬೆಳಗಿನ ಜಾವ 3.30 ಕ್ಕೆ ಮಂಗಳಾರತಿ ಮಾಡಿ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಇಂದು ರಾತ್ರಿ 11 ರವರೆಗೂ ರಾಮನನ್ನು ದರ್ಶನ ಮಾಡಬಹುದಾಗಿದೆ. 19 ಗಂಠೆಗಳ ಕಾಲ ರಾಮ ಮಂದಿರ ತೆರೆದಿರುತ್ತದೆ. ಹಬ್ಬದಂದು ರಾಮನಿಗೆ ಉಣಬಡಿಸಲು 56 ರೀತಿಯ ಪ್ರಸಾದಗಳನ್ನು ಸಿದ್ದಪಡಿಸಲಾಗಿದೆ. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ವತಿಯಿಂದ 1,11,111 ಕೆಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇವಾಲಯಕ್ಕೆ ಬರುವಂತಹ ರಾಮಭಕ್ತರಿಗೆ ಈ ಲಡ್ಡು ಪ್ರಸಾದವನ್ನು ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನೂ ಬಾಲರಾಮನ ಪೂಜಾ ಕೈಂಕರ್ಯಗಳು ಅಯೋಧ್ಯೆಯಾದ್ಯಂತ 100 ಎಲ್.ಇ.ಡಿ ಸ್ಕ್ರೀನ್ ಗಳಲ್ಲಿ ಸ್ಟ್ರೀಮಿಂಗ್ ಸಹ ಆಗುತ್ತಿದೆ.

Most Popular

To Top