Film News

ಶೀಘ್ರದಲ್ಲೇ ನಡೆಯಲಿದೆಯಂತೆ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಮದುವೆ, ವರ ಯಾರು ಗೊತ್ತಾ?

ಇತ್ತೀಚಿಗೆ ಕಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿಯಾದ ವಿಚಾರ ಅದು ಸ್ಟಾರ್‍ ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ವಿಚ್ಚೇದನದ ಸುದ್ದಿ. ಈ ಜೋಡಿ ತಮ್ಮ 18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ. ಅಂದರೇ ಇಬ್ಬರೂ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ. ಈ ಸುದ್ದಿ ಕಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಆ ರೂಮರ್‍ ನಂತೆ ಐಶ್ವರ್ಯ ರಜನಿಕಾಂತ್ ರವರು ಶೀಘ್ರದಲ್ಲೇ ಎರಡನೇ ಮದುವೆಯಾಗಲಿದ್ದಾರಂತೆ. ಈ ರೂಮರ್‍ ಇದೀ ಸಖತ್ ವೈರಲ್ ಆಗುತ್ತಿದೆ.

ತಮಿಳಿನ ಸ್ಟಾರ್‍ ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಜೋಡಿ ವಿಚ್ಚೇದನ ಪಡೆದುಕೊಳ್ಳುವದಕ್ಕೂ ಮುಂಚೆಯಿಂದಲೇ ಬೇರೆಯಾಗಿ ಬದುಕುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲು ಅರ್ಜಿ ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅನೇಕರು ವಿಚ್ಚೇದನದ ನಿರ್ಣಯ ತೆಗೆದುಕೊಂಡಿದ್ದು, ಐಶ್ವರ್ಯ, ಆದರೆ ಧನುಷ್ ಗೆ ಇನ್ನೂ ಹೆಂಡತಿಯ ಮೇಲೆ ಪ್ರೀತಿಯಿದೆ. ಧನುಷ್ ಈ ಬಗ್ಗೆ ಸಿಗ್ನಲ್ ಕೊಡುತ್ತಿದ್ದರೂ ಐಶ್ವರ್ಯ ಮಾತ್ರ ವಿಚ್ಚೇದನ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ಒಂಟಿಯಾಗಿಯೇ ಆಕೆ ಜೀವನ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಸದ್ಯ ಸಂತೋಷದಿಂದ ಬದುಕುತ್ತಿದ್ದೇನೆ ಎಂದು ಐಶ್ವರ್ಯ ಅನೇಕ ಭಾರಿ ಹೇಳಿದ್ದು ಇದೆ.

ಇದೀಗ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಸುದ್ದಿಯಂತೆ ಐಶ್ವರ್ಯ ರಜನಿಕಾಂತ್ ಶೀಘ್ರದಲ್ಲೇ ಎರಡನೇ ಮದುವೆಯಾಗಲಿದ್ದಾರಂತೆ. ಎರಡನೇ ಮದುವೆಯಾಗುವ ನಿಟ್ಟಿನಲ್ಲಿ ಆಕೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರಂತೆ. ಇತ್ತೀಚಿಗೆ ಐಶ್ವರ್ಯ ಓರ್ವ ಅಸಿಸ್ಟಂಟ್ ಡೈರೆಕ್ಟರ್‍ ಜೊತೆಗೆ ಡೇಟಿಂಗ್ ನಲ್ಲಿದ್ದಾರಂತೆ. ಆತನೊಂದಿಗೆ ಐಶ್ವರ್ಯ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರೂಮರ್‍ ಗೆ ಯಾವುದೇ ಸಾಕ್ಷಿಯಿಲ್ಲದೇ ಇದ್ದರೂ ಸೋಷಿಯಲ್ ಮಿಡಿಯಾ ಹಾಗೂ ಕಾಲಿವುಡ್ ವಲಯದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಜೊತೆಗೆ ಅನೇಕರು ಈ ಕುರಿತು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈಗಾಗಲೇ ಐಶ್ವರ್ಯ ಒಂಟಿ ಜೀವನ ಬಯಸುತ್ತಿದ್ದಾರೆ ಅಂತಹುದರಲ್ಲಿ ಮತ್ತೆ ಮದುವೆಯಾಗುವ ಚಾನ್ಸ್ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಇತ್ತೀಚಿಗಷ್ಟೆ ಐಶ್ವರ್ಯ ವಿಚ್ಚೇದನದ ಬಳಿಕ ತಮ್ಮ ಇಬ್ಬರೂ ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ತನಗೇ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾಗಿ, ಅದಕ್ಕೆ ಧನುಷ್ ಸಹ ಒಪ್ಪಿಗೆ ನೀಡಿದ್ದಾರೆ ಎಂದೂ ಸಹ ಸುದ್ದಿ ಕೇಳಿಬಂತು. ಇನ್ನೂ ರಜನಿಕಾಂತ್ ಹಾಗೂ ಧನುಷ್ ಕುಟುಂಬಸ್ಥರು ಸಹ ಇಬ್ಬರನ್ನೂ ಒಂದು ಮಾಡಲು ತುಂಬಾನೆ ಪ್ರಯತ್ನಗಳನ್ನು ಸಹ ಮಾಡಿದ್ದರು. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಹೇಳಬಹುದಾಗಿದೆ.

Most Popular

To Top