ನನ್ನ ತಂದೆ ಉಪಾಸನಾ ಮುಂದೆ ಬೈದಿದ್ದರು, ಅದನ್ನು ಉಪಾಸನಾ ಅವಮಾನವಾಗಿ ಫೀಲ್ ಆಗಿದ್ರು ಎಂದ ರಾಮ್ ಚರಣ್..!

Follow Us :

ತೆಲುಗು ಸಿನಿರಂಗ ಮೆಗಾಸ್ಟಾರ್‍ ಚಿರಂಜೀವಿ ಯವರ ರಾಮ್ ಚರಣ್ RRR ಸಿನೆಮಾದ ಬಳಿಕ ಇಂಟರ್‍ ನ್ಯಾಷನಲ್ ಸ್ಟಾರ್‍ ಆಗಿದ್ದಾರೆ. ಆತನನ್ನು ಸಂದರ್ಶಿಸಲು ಅನೇಕ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳೂ ಸಹ ಕಾಯುತ್ತಿರುತ್ತವೆ. ಇದೀಗ ರಾಮ್ ಚರಣ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಮ್ ಚರಣ್ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

RRR ಸಿನೆಮಾದ ನಾಟು ನಾಡು ಹಾಡು ಅಂತರಾಷ್ಟ್ರೀಯ ಗೋಲ್ಡ್ನ್ ಗ್ಲೋಬ್ ಅವಾರ್ಡ್ ಪಡೆದುಕೊಂಡಿದೆ. ಈ ಅವಾರ್ಡ್ ಬಳಿಕ ಇಡೀ ವಿಶ್ವವನ್ನೇ ಆರ್‍.ಆರ್‍.ಆರ್‍ ಸಿನೆಮಾ ಇಡೀ ವಿಶ್ವದ ದೃಷ್ಟಿಯನ್ನು ಸೆಳೆಯಿತು. ಇನ್ನೂ ನಿರ್ದೇಶಕ ರಾಜಮೌಳಿ, ನಟರಾದ ಎನ್.ಟಿ.ಆರ್‍ ಹಾಗೂ ರಾಮ್ ಚರಣ್ ರವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮತಷ್ಟು ಹೆಸರು ಸಹ ಬಂತು.  ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ರಾಮ್ ಚರಣ್ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಮ್ ಚರಣ್ ತಂದೆ ಮೆಗಾಸ್ಟಾರ್‍ ಚಿರಂಜೀವಿ ಕೆಲವೊಂದು ವಿಚಾರಗಳಲ್ಲಿ ತುಂಬಾನೆ ಫರ್ಪೆಕ್ಟ್ ಆಗಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನೂ ನಟಿರಿಗೆ ತನ್ನ ಶರೀರ ತುಂಬಾ ಫಿಟ್ ಆಗಿರಬೇಕು. ಇದು ಅತ್ಯಂತ ಮುಖ್ಯವಾದ ವಿಚಾರವಾಗಿದ್ದು, ಅದು ತಂದೆಗೆ ತಿಳಿದಿತ್ತು. ಇನ್ನೂಈ ವಿಚಾರದಲ್ಲಿ ಅವರು ತುಂಬಾ ಖಚಿತವಾಗಿರುತ್ತಿದ್ದರು. ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಬಂದರೂ ಆತ ಒಪ್ಪುತ್ತಿರಲಿಲ್ಲ. ಊಟಕ್ಕೆ ಕುಳಿತಾಗ ಯಾಕೇ ಚೆರಿ ತುಂಬಾ ಸಣ್ಣ ಆಗಿದ್ದೀಯಾ ಎಂದು ಹೇಳುತ್ತಿದ್ದರು. ಹೌದು ನಾನು ಸಣ್ಣ ಆಗಿದ್ದೇನೆ ಎಂದು ಹೇಳಿದ್ದೆ. ಬಳಿಕ ಆತ ಸಣ್ಣ ಆಗಿಲ್ಲ ದಪ್ಪ ಆಗುತ್ತೀದಿಯಾ ಇಡಿಯಟ್ , ಮೊದಲು ಜಿಮ್ ಗೆ ಹೋಗು ಎಂದು ಕೋಪಗೊಳ್ಳುತ್ತಿದ್ದರು. ಅದರಲ್ಲೂ ಉಪಾಸನಾ ಮುಂದೆಯೇ ಬೈದಿದ್ದು ನನ್ನನ್ನು ತುಂಬಾ ಆಶ್ಚರ್ಯಕ್ಕೆ ಗುರಿ ಮಾಡಿತ್ತು. ಏನು ಹಾಗೆ ಬೈಯುತ್ತಿದ್ದಾರೆ ಎಂದು ಕೇಳಿದ್ದರು. ಆಗ ನಾನು ಇಬ್ಬರು ನಟರ ಮಧ್ಯೆ ಸಂಭಾಷಣೆ ಇದೇ ಮಾದರಿಯಾಗಿರುತ್ತದೆ. ನೀನು ಈ ಬಗ್ಗೆ ಸೀರಿಯಸ್ ಆಗಬೇಡ ಎಂದಿದ್ದೆ ಎಂದು ಈ ವಿಚಾರವನ್ನು ಹೊರಹಾಕಿದ್ದಾರೆ.

ಇನ್ನೂ ಮತಷ್ಟು ವಿಚಾರಗಳನ್ನು ಸಹ ರಾಮ್ ಚರಣ್ ಹಂಚಿಕೊಂಡಿದ್ದಾರೆ. ನನಗೆ ಬಾಲ್ಯದಿಂದಲೂ ನಟನೆಯ ಮೇಲೆ ತುಂಬಾ ಆಸಕ್ತಿಯಿತ್ತು. ಆದರೆ ತಂದೆ ಮಾತ್ರ ಮೊದಲು ಓದು ಪೂರ್ಣಗೊಳಿಸು, ಬಳಿಕ ನಿನ್ನ ಆಸಕ್ತಿಯಂತೆ ಕೆರಿಯರ್‍ ಆಯ್ಕೆ ಮಾಡಿಕೊ ಎಂದು ಹೇಳು‌ತ್ತಿದ್ದರು. ಕಾಲೇಜಿಗೆ ಹೋದರೂ ಸಹ ನನಗೆ ನಟನೆ ಮೇಲೆ ಆಸಕ್ತಿ ಇತ್ತು. ಒಂದು ದಿನ ಕಾಲೇಜಿನ ಡೀನ್ ತಂದೆಗೆ ಕರೆ ಮಾಡಿ ನಿಮ್ಮ ಮಗನಿಗೆ ಆಸಕ್ತಿಯಿದ್ದ ವಲಯಕ್ಕೆ ಕಳುಹಿಸಿ ಎಂದು ಹೇಳಿದ್ದರು. ಬಳಿಕ ನನ್ನನ್ನು ನಟನೆಯ ಶಾಲೆಯಲ್ಲಿ ದಾಖಲು ಮಾಡಿದರು ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡರು. RRR ಸಿನೆಮಾದ ಬಳಿಕ ರಾಮ್ ಚರಣ್ RC15 ಸಿನೆಮಾದಲ್ಲಿ ನಟಿಸುತ್ತಿದ್ದು ಈ ಸಿನೆಮಾ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.