Film News

ಎಮರ್ಜೆನ್ಸಿ ಸಿನೆಮಾಗಾಗಿ ತನ್ನ ಆಸ್ತಿಯನ್ನು ಸಹ ಅಡ ಇಟ್ಟಿದ್ದಾರಂತೆ ನಟಿ ಕಂಗನಾ ರಾಣಾವತ್….!

ಬಾಲಿವುಡ್ ನ ವಿವಾದಾತ್ಮಕ ನಟಿ ಎಂದಾಕ್ಷಣ ನೆನೆಪಿಗೆ ಬರುವುದು ಕಂಗನಾ ರಾಣವತ್. ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಆಕೆ ದೊಡ್ಡ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾಡುವಂತಹ ಕಾಮೆಂಟ್ ಗಳು, ದೊಡ್ಡ ದೊಡ್ಡ ಸ್ಟಾರ್‍ ನಟರ ಬಗ್ಗೆ ಓಪೆನ್ ಆಗಿಯೇ ಸ್ಟೇಟ್ ಮೆಂಟ್ ಕೊಡುತ್ತಾರೆ. ಇದರ ಜೊತೆಗೆ ನಟಿ ಕಂಗನಾ ಸಿನೆಮಾಗಳಲ್ಲೂ ಸಹ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಎಮರ್ಜೆನ್ಸಿ ಸಿನೆಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನೆಮಾಗಾಗಿ ಆಕೆ ತನ್ನ ಆಸ್ತಿಯನ್ನು ಸಹ ಅಡ ಇಟ್ಟಿದ್ದಾರಂತೆ.

ನಟಿ ಕಂಗನಾ ಎಮರ್ಜೆನ್ಸಿ ಸಿನೆಮಾ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಸಿನೆಮಾದಲ್ಲಿ ಕಂಗನಾ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆಕೆ ಸೇಮ್ ಇಂದಿರಾ ಗಾಂಧಿಯಂತೆ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಆಕೆ ಸಿನೆಮಾದ ನಿರ್ದೇಶನ ಹಾಗೂ ನಿರ್ಮಾಣದ ಹೊಣೆಯನ್ನು ಸಹ ಹೊತ್ತಿಕೊಂಡಿದ್ದಾರೆ. ಇನ್ನೂ ಸಿನೆಮಾ ಶೂಟಿಂಗ್ ಸಹ ಮುಗಿದಿದ್ದು, ಈ ಬಗ್ಗೆ ಆಕೆ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಂಡಿದ್ದರು. ಇನ್ನೂ ಈ ಸಿನೆಮಾಗಾಗಿ ಆಕೆ ಪಟ್ಟಂತಹ ಕಷ್ಟಗಳ ಬಗ್ಗೆ ಸಹ ಹೇಳಿಕೊಂಡಿದ್ದಾರೆ. ಸಿನೆಮಾ ಶೂಟಿಂಗ್ ಗಾಗಿ ತನ್ನ ಆಸ್ತಿಯನ್ನು ಅಡ ಇಟ್ಟಿದ್ದಾರೆ. ಡೆಂಗ್ಯೂ ಸಹ ಬಂದಿತ್ತು. ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸಿನೆಮಾ ಶೂಟಿಂಗ್ ಮುಗಿಸಿದ್ದಾಗಿ ಆಕೆ ಹೇಳಿದ್ದಾರೆ.

ಈ ಬಗ್ಗೆ ಆಕೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ನಟಿಯಾಗಿ ಎಮರ್ಜೆನ್ಸಿ ಪೂರ್ಣಗೊಳಿಸುತ್ತಿದ್ದೇನೆ. ನನ್ನ ಜೀವನದ ಅದ್ಬುತವಾದ ಹಂತವೊಂದು ಕೊನೆಯಾಗುತ್ತಾ ಬಂದಿದೆ. ನನ್ನ ಆಸ್ತಿಯನ್ನು ಸಹ ಈ ಸಿನೆಮಾಗಾಗಿ ಅಡವಿಟ್ಟಿದ್ದೇನೆ. ಜೊತೆಗೆ ಡೆಂಗ್ಯೂ ಜ್ವರಕ್ಕೂ ಸಹ ತುತ್ತಾಗಿದ್ದೆ. ಡೆಂಗ್ಯೂ ನಡುವೆಯೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನಾನು ಮುಕ್ತವಾಗಿ ನನ್ನ ಭಾವನೆಗಳನ್ನು ಹೊರಹಾಕಿದ್ದೇನೆ. ನನ್ನ ಆರೋಗ್ಯ ಸಮಸ್ಯೆಗಳ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ನನ್ನ ಪ್ರೀತಿಸುವವರು ಯಾರೂ ಸಹ ಆಂದೋಲನಕ್ಕೆ ಗುರಿಯಾಗಬಾರದೆಂದು ಕೋರುತ್ತೇನೆ. ಇದೀಗ ಇದನ್ನು ಹೇಳಲು ಸಹ ಕಾರಣವೊಂದಿದೆ. ನಮ್ಮ ಮೇಲೆ ನಮಗೆ ನಂಬಿಕೆ ಇದ್ದು, ನಾವು ಕಷ್ಟಪಟ್ಟು ಕೆಲಸ ಮಾಡಿದರೇ, ನೀನು ಸಮರ್ಥಳು, ಆದರೆ ನಿನ್ನನ್ನು ಆ ದೇವರು ಮತಷ್ಟು ಹೆಚ್ಚು ಪರೀಕ್ಷೆ ಮಾಡುತ್ತಾರೆ. ಆ ಪರೀಕ್ಷೆಯಲ್ಲಿ ನಾವು ಗೆಲ್ಲಲೇಬೇಕು. ಅದಕ್ಕಾಗಿ ನಾವು ತುಂಬಾ ಕಷ್ಟಪಡಬೇಕು. ಸಾಧಿಸುವವರೆಗೂ ಬಿಡಬಾರದು. ಏಕೆಂದರೆ ಇದು ನಮಗೆ ಪುರ್ನಜನ್ಮ. ಯಾರೂ ನನ್ನ ಬಗ್ಗೆ ಆಂದೋಲನಕ್ಕೆ ಗುರಿಯಾಗಬೇಡಿ ನಾನು ಆರೋಗ್ಯದಿಂದ ಇದ್ದೀನಿ, ಈಗ ನಿಮ್ಮ ಪ್ರೀತಿ ಆರ್ಶಿವಾದ ಬೇಕಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಕಂಗನಾ ಅಭಿನಯದ ಕೊನೆಯ ಸಿನೆಮಾ ಧಾಕಡ್ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ಕಂಗನಾ ಎಮರ್ಜೆನ್ಸಿ ಸಿನೆಮಾದ ಮೇಲೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದೀಗ ಈ ಸಿನೆಮಾಗಾಗಿ ಆಕೆ ತನ್ನ ಆಸ್ತಿಯನ್ನೂ ಸಹ ಅಡವಿಟ್ಟಿದ್ದಾಗಿ ತಿಳಿಸಿದ್ದಾರೆ. ಇನ್ನೂ ಈ ಸಿನೆಮಾ ಆದರೂ ಆಕೆಗೆ ಸಕ್ಸಸ್ ನೀಡುತ್ತಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top