Film News

ಎರಡನೇ ಮದುವೆಯ ಬಗ್ಗೆ ಕ್ಲಾರಿಟಿ ಕೊಟ್ರಾ ಜ್ಯೋತಿ ರಾಯ್, ವೈರಲ್ ಆದ ಲೇಟೆಸ್ಟ್ ಪೋಸ್ಟ್…..!

ತೆಲುಗಿನ ಗುಪ್ಪಡೆಂತ ಮನಸ್ಸು ಎಂಬ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ನಟಿ ಜ್ಯೋತಿ ರಾಯ್ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಸೀರಿಯಲ್ ನಲ್ಲಿ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದ ಜ್ಯೋತಿ ರಾಯ್ ಸದ್ಯ ಸಿನೆಮಾಗಳು, ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದ್ದು, ತನ್ನ ಎರಡನೇ ಮದುವೆಯ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಜ್ಯೋತಿರಾಯ್ ಗೆ 20 ವರ್ಷ ವಯಸ್ಸಾಗಿದ್ದಾಗಲೇ ಪದ್ಮನಾಭ ಎಂಬಾತನೊಂದಿಗೆ ಮದುವೆಯಾಗಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ವಿಚ್ಚೇದನ ಪಡೆದುಕೊಂಡರಂತೆ. ಆಕೆಗೆ ಒಬ್ಬ ಮಗ ಸಹ ಇದ್ದಾನೆ. ಆದರೆ ಕೆಲವು ತಿಂಗಳುಗಳಿಂದ ಸ್ಯಾಂಡಲ್ ವುಡ್ ನಿರ್ದೇಶಕ ಸುಕು ಪೂರ್ವಾಜ್ ಎಂಬಾತನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಆಕೆ ಸಹ ತನ್ನ ಹೆಸರಿನ ಪಕ್ಕ ಸುಕು ಪೂರ್ವಜ್ ಹೆಸರನ್ನು ಸೇರಿಸಿಕೊಂಡಿದ್ದರು. ಜೊತೆಗೆ ಅವರಿಬ್ಬರು ಸೀಕ್ರೇಟ್ ಆಗಿ ಮದುವೆ ಮಾಡಿಕೊಂಡರು ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಇದೀಗ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಮೂಲಕ ತಮ್ಮ ರಿಲೇಷನ್ ಶಿಪ್ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಎನ್ನಬಹುದಾಗಿದೆ.

ಇನ್ನೂ ಜ್ಯೋತಿ ರಾಯ್ ತನ್ನ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಸುಕು ಪೂರ್ವಜ್ ಹುಟ್ಟುಹಬ್ಬದ ನಿಮಿತ್ತ ಸ್ಪೇಷಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಾವು ಭೇಟಿಯಾಗಿ ಒಂದು ವರ್ಷವಾಗಿದೆ. ಅಲ್ಲಿಂದ ನನ್ನು ಜೀವನ ಬದಲಾಯ್ತು. ನನ್ನ ಭಾವನೆಗಳನ್ನು ಹೇಳೋಕೆ ಮಾತುಗಳು ಸಾಲದು. ನಿನ್ನ ಪ್ರೀತಿ, ಹಗ್ಸ್, ಸಪೋರ್ಟ್, ಪಾಸಿಟೀವ್ ಥಾಟ್ಸ್, ಸಾಹಸಂ, ವಿಧೆಯತ, ಕೇರಿಂಗ್ ಎಲ್ಲದಕ್ಕೂ ಥ್ಯಾಂಕ್ಸ್. ನೀನು ನನ್ನ ಪತಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ. ವಿಷ್ ಯೂ ಏ ವೆರಿ ವೆರಿ ಹ್ಯಾಪಿ ಬರ್ತ್ ಡೇ ಡಾರ್ಲಿಂಗ್, ಲವ್ ಯೂ ಎಂದು ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಜ್ಯೋತಿ ರಾಯ್ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಪೋಸ್ಟ್ ಮೂಲಕ ತಮ್ಮ ರಿಲೇಷನ್ ಶಿಪ್ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆ ಎಂದು ಹೇಳಬಹುದಾಗಿದೆ.

ಇನ್ನೂ ಜ್ಯೋತಿ ರಾಯ್ ಇತ್ತೀಚಿಗೆ ಸೊಷಿಯಲ್ ಮಿಡಿಯಾದಲ್ಲಿ ತುಂಬಾ ಸದ್ದು ಮಾಡುತ್ತಿದ್ದಾರೆ. ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಜ್ಯೋತಿ ರಾಯ್ ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು.

Most Popular

To Top