Film News

ಕಂಡೋಮ್ ಬಳಕೆ ಬಗ್ಗೆ ರಕುಲ್ ವಿವರಣೆ, ಎರಡು ಕಾಂಡೋಮ್ ಒಟ್ಟಿಗೆ ಧರಿಸಿದರೇ ಏನಾಗುತ್ತೆ ಎಂದು ಹೇಳಿದ ನಟಿ…..!

ಅತೀ ಕಡಿಮೆ ಸಮಯದಲ್ಲೇ ತನ್ನದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಸದ್ಯ ರಕುಲ್ ಸೌತ್ ಅಂಡ್ ನಾರ್ತ್ ಎರಡೂ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಕಾಂಡೋಮ್ ಬಳಕೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಡಬಲ್ ಕಾಂಡೋಮ್ ಹಾಕಿಕೊಂಡರೇ ಏನಾಗುತ್ತದೆ ಎಂದು ಹೇಳಿದ್ದು, ವೈರಲ್ ಆಗುತ್ತಿದೆ.

ನಟಿ ರಕುಲ್ ಪ್ರೀತ್ ಸಿಂಗ್ ಕಳೆದ ವರ್ಷ ಬರೊಬ್ಬರಿ ಆರು ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳು ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಛತ್ರಿವಾಲಿ ಎಂಬ ಸಿನೆಮಾದ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಕುರಿತಂತೆ ನಿರ್ಮಾಣವಾಗಿರುವ ಸಿನೆಮಾ ಆಗಿದೆ. ಈ ಸಿನೆಮಾದಲ್ಲಿ ರಕುಲ್ ಕಾಂಡೋಮ್ ಟೆಸ್ಟ್ ಮಾಡುವಂತಹ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಸೋಷಿಯಲ್ ಕಾಮಿಡಿ ಎಂಟರ್‍ ಟ್ರೈನರ್‍ ಸಿನೆಮಾ ಆಗಿದ್ದು, ತೇಜಸ್ ಡೋಸ್ಕರ್‍ ಎಂಬಾತ ಈ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾ ಜ.20 ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿದೆ. ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ರಸಾಯನಶಾಸ್ತ್ರದಲ್ಲಿ ಪೋಸ್ಟ್ ಗ್ರಾಜುಯೇಟ್ ಪದವಿ ಮುಗಿಸಿದ ಯುವತಿಗೆ ಎಲ್ಲೂ ಕೆಲಸ ಸಿಗುವುದಿಲ್ಲ. ಬಳಿಕ ಕಾಂಡೋಮ್ ಕಂಪನಿಯಲ್ಲಿ ಕ್ವಾಲಿಟಿ ಹೆಡ್ ಆಗಿ ಉದ್ಯೋಗ ಮಾಡುತ್ತಾರೆ. ಇದೇ ಈ ಸಿನೆಮಾದ ಕಥೆಯಾಗಿದೆ.

ಇನ್ನೂ ನಟಿ ರಕುಲ್ ಈ ಸಿನೆಮಾದಲ್ಲಿ ಕಾಂಡೋಮ್ ಟೆಸ್ಟ್ ಮಾಡುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ರಕುಲ್ ಕಾಂಡೋಮ್ ಬಗ್ಗೆ ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಯಾವುದೇ ಮುಜುಗರ ಇಲ್ಲದೇ ಉತ್ತರಗಳನ್ನು ನೀಡಿದ್ದಾರೆ. ಇನ್ನೂ ರಕುಲ್ ಗೆ ಈ ಬಗ್ಗೆ ಅನೇಕ ಪ್ರಶ್ನೆಗಳು ಎದುರಾಗಿದೆ. ಲೈಂಗಿಕ ಕ್ರಿಯೇಯಿಂದ ಹರಡುವಂತಹ ಕಾಯಿಲೆಗಳು ಹಾಗೂ ಗರ್ಭಧಾರಣೆ ತಡೆಯಲು ಸುರಕ್ಷತೆಗಾಗಿ ಎರಡು ಕಾಂಡೋಮ್ ಬಳಸಬಹುದೇ ಎಂಬ ಪ್ರಶ್ನೆಯೊಂದು ಎದುರಾಗಿದೆ. ಇದಕ್ಕೆ ಉತ್ತರಿಸಿದ ರಕುಲ್ ಎರಡು ಕಾಂಡೋಮ್ ಬಳಕೆ ಒಳ್ಳೆಯದಲ್ಲ. ಎರಡನ್ನು ಬಳಸಿದರೇ ಎರಡರ ನಡುವೆ ತಿಕ್ಕಾಟ ಶುರುವಾಗಿ ಹರಿದು ಹೋಗಬಹುದು. ನಿಮಗೆ ಸುರಕ್ಷತೆ ಅಗತ್ಯ ಎನ್ನಿಸಿದರೇ ಮಹಿಳೆಯರೂ ಸಹ ಫೀಮೇಲ್ ಕಾಂಡೋಮ್ ಬಳಸಬಹುದು. ಆದರೆ ಪುರುಷರು ಎರಡು ಕಾಂಡೋಮ್ ಬಳಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ ರಕುಲ್. ಆಕೆ ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.

ಇನ್ನೂ ರಕುಲ್ ಬಾಲಿವುಡ್ ನಲ್ಲಿ ಎಟಾಕ್, ರನ್ ವೇ34, ಕಟ್ ಪುಟ್ಲಿ, ಡಾಕ್ಟರ್‍ ಜಿ, ಥ್ಯಾಂಕ್ ಗಾಡ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ಅಯಲಾನ್, ಇಂಡಿಯನ್ 2 ಸೇರಿದಂತೆ ಮತ್ತೆರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇತ್ತಿಚಿಗೆ ಸಿನಿರಂಗದಲ್ಲಿ ಆಕೆ ಹೇಗೆ ಸಾಗಬೇಕು ಎಂಬುದನ್ನು ಸಹ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.

Most Popular

To Top