ಯುವ ರಾಜಕಾರಣಿಯನ್ನು ಮದುವೆಯಾಗಿ ಸಪ್ರೈಸ್ ಕೊಟ್ಟ ಬಾಲಿವುಡ್ ಬೋಲ್ಡ್ ಬ್ಯೂಟಿ ಸ್ವರಾ ಭಾಸ್ಕರ್, ವೈರಲ್ ಆದ ಪೊಟೋಸ್…!

Follow Us :

ಸಿನಿರಂಗದಲ್ಲಿ ಸದಾ ವಿವಾದಗಳ ಮೂಲಕ ಸುದ್ದಿಯಾಗುವುದರಲ್ಲಿ ಬಾಲಿವುಡ್ ನಟಿಯರು ಸದಾ ಮುಂದೆ ಇರುತ್ತಾರೆ ಎಂದು ಹೇಳಬಹುದಾಗಿದೆ. ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿಸಿ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಬಾಲಿವುಡ್ ನಟಿ ಸ್ವರಾ ಭಾಸ್ಕರ್‍ ಸಹ ಆಗಾಗ ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಆಕೆ ಯಂಗ್ ರಾಜಕಾರಣಿಯೊಬ್ಬರನ್ನು ಮದುವೆಯಾಗಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಆಕೆ ಮತಾಂತರ ವಿವಾಹವಾಗಿ ಎಲ್ಲರಿಗೂ ಷಾಕ್ ನೀಡಿದ್ದಾರೆ.

ಬಾಲಿವುಡ್ ಬೋಲ್ಡ್ ಬ್ಯೂಟಿಗಳಲ್ಲಿ ಸ್ವರಾ ಭಾಸ್ಕರ್‍ ಸಹ ಒಬ್ಬರಾಗಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಆಕೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾಡುವಂತಹ ಕಾಮೆಂಟ್ಸ್ ಗಳ ಕಾರಣದಿಂದ ಸದಾ ಆಕೆ ಟ್ರೋಲಗಳಿಗೆ ಗುರಿಯಾಗುತ್ತಿರುತ್ತಾರೆ. ಜೊತೆಗೆ ಪ್ರಧಾನಿ ಮೋದಿ ಬಗ್ಗೆ ವಿಮರ್ಶೆಗಳನ್ನು ಸಹ ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಅಷ್ಟೇಅಲ್ಲದೇ ಹಿಂದೂ ಸಂಘಟನೆಗಳ ಬಗ್ಗೆ ಸಹ ಆಗ್ರಹ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಆಕೆ ಮತಾಂತರ ವಿವಾಹ ಆಗಿದ್ದಾರೆ. ಸಮಾಜವಾದಿ ಪಕ್ಷದ ಯೂತ್ ಪ್ರೆಸಿಡೆಂಟ್ ಫಹಾದ್ ಅಹ್ಮದ್ ಎಂಬಾತನನ್ನು ಮದುವೆಯಾದಗಿದ್ದಾರೆ. ಕೋರ್ಟ್ ಪದ್ದತಿಯಲ್ಲಿ ಈ ಜೋಡಿಯ ಮದುವೆ ನೆರವೇರಿದೆ. ಇನ್ನೂ ಈ ಜೋಡಿಯ ಮದುವೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸ್ವರಾ ಭಾಸ್ಕರ್‍ ಹಾಗೂ ಫಹಾದ್ ಸುಮಾರು ದಿನಗಳಿಂದ ರಿಲೇಷನ್ ಶಿಪ್ ನಲ್ಲಿದ್ದರಂತೆ. ಫಹಾದ್ ಸಹ ಮೋದಿ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿರುತ್ತಾರೆ. ಈ ಕಾರಣದಿಂದ ಅವರಿಬ್ಬರ ನಡುವೆ ಪರಿಚಯ ಏರ್ಪಟ್ಟು ಪರಿಚಯ ಪ್ರೀತಿಯಾಗಿ ಇದೀಗ ಮದುವೆಯಾಗಿದ್ದಾರೆ. ಇನ್ನೂ ತಾವು ಮದುವೆಯಾದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿಕೊಟ್ಟಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಅವರಿಬ್ಬರು ಭಾಗಿಯಾದ ದೃಶ್ಯಗಳು, ಕೊರ್ಟ್‌ನಲ್ಲಿ ಮದುವೆಯಾದ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ನಾವು ಪ್ರೀತಿಗಾಗಿ ಹುಡುಕಿದರೇ, ಮೊದಲು ಸ್ನೇಹ ದೊರೆಯುತ್ತದೆ. ಬಳಿಕ ಅದು ಪ್ರೀತಿಯಾಗಿ ಬದಲಾಗುತ್ತದೆ, ವೆಲ್ಕಂ ಫಹಾದ್ ಅಹ್ಮದ್ ಎಂದು ಸ್ವರಾ ಭಾಸ್ಕರ್‍ ಪೋಸ್ಟ್ ಮಾಡಿದ್ದಾರೆ.

ಇನ್ನೂ ಸ್ವರಾ ಭಾಸ್ಕರ್‍ ಕೆಂಪು ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಫಹಾದ್ ಸಹ ರೆಡ್ ಶೇರ್ವಾನಿಯಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆಯ ಬಳಿಕ ಒಬ್ಬರ ಕೈ ಒಬ್ಬರು ಇಟ್ಟುಕೊಂಡು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೆ ಕೆಲವು ಪೊಟೋಗಳಲ್ಲಿ ಸ್ವರಾ ಭಾಸ್ಕರ್‍ ಹಾಗೂ ಫಹಾದ್ ಇಬ್ಬರೂ ಪ್ರೀತಿಯ ನಗು ಪ್ರದರ್ಶನ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಹೊರಬರುತ್ತಿದ್ದಂತೆ ಟ್ರೋಲ್ ಗಳೂ ಸಹ ಶುರುವಾಗಿದೆ. ವಿಭಿನ್ನವಾದ ಕಾಮೆಂಟ್ ಗಳ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.