ಪ್ಯಾನ್ ಇಂಡಿಯಾ ಸ್ಟಾರ್ ಜೂನಿಯರ್ ಎನ್.ಟಿ.ಆರ್ ಸ್ಟೈಲಿಷ್ ಲುಕ್, ವೈರಲ್ ಆದ ಪೊಟೋ…..!

Follow Us :

ಟಾಲಿವುಡ್ ಸ್ಟಾರ್‍ ನಟ ಯಂಗ್ ಟೈಗರ್‍ ಎನ್.ಟಿ.ಆರ್‍ ಭಾರಿ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ವಿಶ್ವವಿಖ್ಯಾತ, ನಟ ಸಾರ್ವಭೌಮ ನಂದಮೂರಿ ತಾರಕರಾಮಾರಾವ್ ರವರ ಮೊಮ್ಮಗನಾಗಿ ಅವರ ವಾರಸತ್ವವನ್ನು ಮುಂದುವರೆಸುತ್ತಿದ್ದಾರೆ. RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆದ ಎನ್.ಟಿ.ಆರ್‍ ಅಭಿಮಾನಿಗಳ ಮೇಲೆ ತುಂಬಾ ಪ್ರೀತಿಯನ್ನು ಸಾರುತ್ತಾರೆ. ಸದ್ಯ ಜೂನಿಯರ್‍ ಎನ್.ಟಿ.ಆರ್‍  ದೇವರ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಜಾಹಿರಾತಿಗಾಗಿ ನ್ಯೂ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಈ ಪೊಟೋ ಸಖತ್ ವೈರಲ್ ಆಗುತ್ತಿದೆ.

ಯಂಗ್ ಟೈಗರ್‍ ಎನ್.ಟಿ.ಆರ್‍ ಸುಮಾರು ಎರಡು ದಶಕಗಳಿಂದ ಸೌತ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸುಮಾರು ಕೋಟ್ಯಂತರ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಅವರ ಮೇಲೆ ಅಭಿಮಾನಿಗಳು ಭಾರಿ ಪ್ರೀತಿಯನ್ನು ಸಹ ಇಟ್ಟುಕೊಂಡಿದ್ದಾರೆ. ಅದೇ ರೀತಿ ಎನ್.ಟಿ.ಆರ್‍ ಸಹ ತಮ್ಮ ಅಭಿಮಾನಿಗಳು ಎಂದರೇ ತುಂಬಾ ಪ್ರೀತಿ ತೋರುತ್ತಾರೆ. RRR ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಫೇಂ ಪಡೆದುಕೊಂಡ ಜೂನಿಯರ್‍ ಎನ್.ಟಿ.ಆರ್‍ ಸಿನೆಮಾಗಳ ಜೊತೆಗೆ ಆಗಾಗ ಕೆಲವೊಂದು ಪ್ರಾಡಕ್ಟ್ ಗಳನ್ನು ಪ್ರಮೋಟ್ ಮಾಡುತ್ತಿರುತ್ತಾರೆ. ಕೆಲವೊಂದು ಫೇಮಸ್ ಬ್ರಾಂಡ್ ಗಳಿಗೆ ಅಂಬಾಸಿಡರ್‍ ಆಗಿರುವ ಎನ್.ಟಿ.ಆರ್‍ ಇದೀಗ ಪ್ರಾಡಕ್ಟ್ ಒಂದರ ಪ್ರಚಾರಕ್ಕಾಗಿ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ನಟ ಜೂನಿಯರ್‍ ಎನ್.ಟಿ.ಆರ್‍ ಯಾಪಿ ಫೀಜ್, ಲೇಷಿಯಸ್, ಮೆಕ್ ಡೊನಾಲ್ಟ್ಸ್ ಮೊದಲಾದ ಖ್ಯಾತ ಬ್ರಾಂಡ್ ಗಳಿಗೆ ಅಂಬಾಸಿಡರ್‍ ಆಗಿದ್ದಾರೆ. ಈ ಜಾಹಿರಾತುಗಳಿಗಾಗಿ ಎನ್.ಟಿ.ಆರ್‍ ನ್ಯೂ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಂದು ಪ್ರಾಡಕ್ಟ್ ಗಾಗಿ ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಹೇರ್‍ ಸ್ಟೈಲಿಸ್ಟ್ ಅಲೀಮ್ ಹಕೀಂ ಎನ್.ಟಿ.ಆರ್‍ ರವರನ್ನು ಮೈಂಡ್ ಬ್ಲಾಕ್ ಆಗುವಂತಹ ಲುಕ್ಸ್ ನಲ್ಲಿ ರೆಡಿ ಮಾಡಿದ್ದಾರೆ. ಗಡ್ಡ, ಕನ್ನಡಕ, ವಾವ್ ಅನ್ನಿಸುವಂತಹ ಹೇರ್‍ ಸ್ಟೈಲ್ ನಲ್ಲಿ ಎನ್.ಟಿ.ಆರ್‍ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಎನ್.ಟಿ.ಆರ್‍ ರವರ ಈ ಲುಕ್ ಸಖತ್ ವೈರಲ್ ಆಗುತ್ತಿದೆ. ಇದರ ಜೊತೆಗೆ ಎನ್.ಟಿ.ಆರ್‍ ಒಂದು ಜಾಹಿರಾತಿಗಾಗಿ ಬರೊಬ್ಬರಿ ಎಂಟು ಕೋಟಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಜೂನಿಯರ್‍ ಎನ್.ಟಿ.ಆರ್‍ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡುತ್ತಿರುವ ದೇವರ ಎಂಬ ಸಿನೆಮಾದಲ್ಲಿ ಬ್ಯುಟಿಯಾಗಿದ್ದಾರೆ. ಈ ಸಿನೆಮಾದಲ್ಲಿ ಎನ್.ಟಿ.ಆರ್‍ ರವರಿಗೆ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್‍ ರೊಮ್ಯಾನ್ಸ್ ಮಾಡಲಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ವಿಲನ್ ಆಗಿ ಬಾಲಿವುಡ್ ಸ್ಟಾರ್‍ ಸೈಫ್ ಅಲಿ ಖಾನ್ ಸಹ ನಟಿಸುತ್ತಿದ್ದಾರೆ. ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾದ ಬಳಿಕ ವಾರ್‍-2 ಎಂಬ ಬಾಲಿವುಡ್ ಸಿನೆಮಾದಲ್ಲೂ ಸಹ ಎನ್.ಟಿ.ಆರ್‍ ನಟಿಸಲಿದ್ದಾರೆ.