Film News

ಪುಷ್ಪಾ-2 ಟೀಸರ್ ಔಟ್, ಸೀರೆಯನ್ನುಟ್ಟ ಪುಷ್ಪರಾಜ್ ಮಾಸ್ ಅವತಾರಕ್ಕೆ ಯೂಟ್ಯೂಬ್ ಶೇಕ್….!

ಇಂದು (ಏ.8) ಟಾಲಿವುಡ್ ಸ್ಟಾರ್‍ ನಟ ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದ್ದು, ಅವರ ಹುಟ್ಟುಹಬ್ಬದ ಅಂಗವಾಗಿ ಬಹುನಿರೀಕ್ಷಿತ ಪುಷ್ಪಾ-2 ಸಿನೆಮಾದ ಟೀಸರ್‍ ಬಿಡುಗಡೆ ಮಾಡಲಾಗಿದೆ. ಪುಷ್ಪಾ-2 ಮೇಕರ್ಸ್ ಬನ್ನಿ ಅಭಿಮಾನಿಗಳಿಗೆ ಟೀಸರ್‍ ಬಿಡುಗಡೆ ಮಾಡಿ ಭಾರಿ ಟ್ರೀಟ್ ನೀಡಿದ್ದಾರೆ. ಈ ಟೀಸರ್‍ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭಾರಿ ವ್ಯೂವ್ಸ್ ಕಂಡಿದೆ. ಅಲ್ಲು ಅರ್ಜುನ್ ಗೆಟಪ್ ನೋಡಿದ ಅಭಿಮಾನಿಗಳು ಪುಲ್ ಥ್ರಿಲ್ ಆಗಿದ್ದಾರೆ. ಸೀರೆಯನ್ನುಟ್ಟು ಮಾಸ್ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ಅವತಾರಕ್ಕೆ ಯೂಟ್ಯೂಬ್ ಸಹ ಶೇಕ್ ಆಗುತ್ತಿದೆ ಎನ್ನಲಾಗಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಹಾಗೂ ಸುಕುಮಾರ್‍ ಕಾಂಬಿನೇಷನ್ ನಲ್ಲಿ ಮೂಡಿಬಂದ ಪುಷ್ಪಾ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ಪುಷ್ಪಾ-2 ಸಿನೆಮಾದ ಮೇಲೂ ಭಾರಿ ನಿರೀಕ್ಷೆ ಹುಟ್ಟಿದೆ. ಸಿನೆಮಾದ ಅಪ್ಡೇಟ್ಸ್ ಗಾಗಿ ಬನ್ನಿ ಫ್ಯಾನ್ಸ್ ಸೇರಿದಂತೆ ಪುಷ್ಪಾ ಸಿನೆಮಾದ ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದರು. ಈ ಹಿಂದೆ ಸಿನೆಮಾದ ಅಪ್ಡೇಟ್ ಗಾಗಿ ಪ್ರತಿಭಟನೆ ಮಾಡಿದ ನಿರ್ದಶನಗಳೂ ಸಹ ಇದೆ. ಇದೀಗ ಅಲ್ಲು ಅರ್ಜುನ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಪುಷ್ಪಾ-2 ಟೀಸರ್‍ ಬಿಡುಗಡೆ ಮಾಡಿದ್ದಾರೆ. ಟೀಸರ್‍ ಬಿಡುಗಡೆ ಮಾಡಿದ ಕಡಿಮೆ ಕ್ಷಣದಲ್ಲೇ ಭಾರಿ ವ್ಯೂಸ್ ಲೈಕ್ಸ್ ಕಂಡುಕೊಂಡಿದೆ. ಜೊತೆಗೆ ಅಲ್ಲು ಅರ್ಜುನ್ ಮಾಸ್ ಎಂಟ್ರಿಗೆ ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮಿಡಿಯಾ ಶೇಕ್ ಆಗುತ್ತಿದೆ.

ಇದೀಗ ಬಿಡುಗಡೆಯಾದ ಟೀಸರ್‍ ನಲ್ಲಿ ಅಲ್ಲು ಅರ್ಜುನ್ ಗೆಟಪ್ ಕಂಡ ಫ್ಯಾನ್ಸ್ ದಂಗಾಗಿದ್ದಾರೆ. ಸಂಪೂರ್ಣವಾಗಿ ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ದೇವಿಶ್ರೀ ಪ್ರಸಾದ್ ರವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗೂಸ್‌ ಬಂಪ್ಸ್ ತರಿಸುತ್ತಿದೆ. ಅದರಲ್ಲೂ ಸೀರೆಯನ್ನು ಧರಿಸಿ ಕತ್ತಿನಲ್ಲಿ ನಿಂಬೆ ಹಣ್ಣಿನ ಮಾಲೆ, ಮೈ ತುಂಬಾ ಬಂಗಾರದ ಆಭರಣಗಳನ್ನು ಹಾಕಿಕೊಂಡು ಗ್ರಾಮ ದೇವತೆಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗಮ್ಮ ಜಾತ್ರೆಯಲ್ಲಿ ಉಗ್ರರೂಪ ತಾಳಿ ನಡೆಯುತ್ತಾ, ಸೀರೆಯ ಸೆರಗನ್ನು ಸೊಂಟಕ್ಕೆ ಸುತ್ತಿಕೊಂಡು ಬರುತ್ತಿದ್ದಂತೆ ಕಾಣಿಸಿಕೊಂಡಿದ್ದಾರೆ.  ಟೀಸರ್‍ ನಲ್ಲಿ ಒಂದು ಡೈಲಾಗ್ ಸಹ ಇಲ್ಲದೇ ಬಿಜಿಎಂ ಮೂಲಕವೇ ಗೂಸ್ ಬಂಪ್ಸ್ ತರಿಸಿದ್ದಾರೆ. ಈ ಟೀಸರ್‍ ನೋಡಿದ ಬಳಿಕ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ ಎನ್ನಬಹುದಾಗಿದೆ. ‌ಇನ್ನೂ ಈ ಟೀಸರ್‍ ಬಿಡುಗಡೆಯಾದ ಕಡಿಮೆ ಸಮಯದಲ್ಲೇ ಭಾರಿ ವ್ಯೂವ್ಸ್ ಕಂಡಿದೆ. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಸೋಷಿಯಲ್ ಮಿಡಿಯಾ ಶೇಕ್ ಆಗುತ್ತಿದೆ ಎನ್ನಲಾಗುತ್ತಿದೆ.

ಇನ್ನೂ ಈ ಸಿನೆಮಾ ಇದೇ ಆ.15 ರಂದು ತೆರೆಕಾಣಲಿದೆ. ಈಗಾಗಲೇ ಚಿತ್ರತಂಡ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ಯಾನ್ ಇಂಡಿಯಾ ಸಿನೆಮಾ ಆಗಿ ಪುಷ್ಪಾ-2 ತೆಲುಗು ಸೇರಿದಂತೆ, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ. ಇನ್ನೂ ಅಲ್ಲು ಅರ್ಜುನ್ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರೆಟಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಜೊತೆಗೆ ಅನೇಕರು ಅಲ್ಲು ಅರ್ಜುನ್ ರವರ ರೇರ್‍ ಪೊಟೋಗಳನ್ನು ಹಂಚಿಕೊಂಡು ತಮ್ಮ ವಿಷಸ್ ತಿಳಿಸುತ್ತಿದ್ದಾರೆ.

Most Popular

To Top