Film News

ನನಗೆ ಆ ಎರಡೂ ಧರ್ಮಗಳಲ್ಲಿ ನಂಬಿಕೆಯಿದೆ ಎಂದ ಕನ್ನಡ ನಟಿ ಮೇಘನಾ ರಾಜ್ ಸರ್ಜಾ….!

ಕನ್ನಡದ ಸ್ಟಾರ್‍ ನಟರಾಗಿದ್ದ ಚಿರಂಜೀವಿ ಸರ್ಜಾ ಮರಣದ ನಂತರ ನೋವನ್ನು ಆತನ ಪತ್ನಿ ಮೇಘನಾ ರಾಜ್ ತನ್ನ ಮಗನ ಮೂಲಕ ಮರೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಸಿನೆಮಾಗಳಲ್ಲಿ ಸಹ ಬ್ಯುಸಿಯಾಗಿದ್ದಾರೆ. ಜೊತೆಗೆ ತನ್ನ ಮಗ ರಾಯನ್ ಜೊತೆಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಸಿನೆಮಾಗಳ ಜೊತೆ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಧರ್ಮ ಹಾಗೂ ಸಂಪ್ರದಾಯಗಳ ಬಗ್ಗೆ ಮಾತನಾಡಿದ್ದು, ಆಕೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನಟಿ ಮೇಘನಾ ರಾಜ್ ಧರ್ಮ ಹಾಗೂ ಸಂಪ್ರದಾಯಗಳ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಆಕೆ ಸಂಪ್ರದಾಯಗಳಿಗೆ ಅದರದ್ದೇ ಆದ ವೈಜ್ಞಾನಿಕ ಕಾರಣ ಸಹ ಇದೆ. ಅಂತಹುದನ್ನು ನಾನು ಒಪ್ಪಿಕೊಂಡು ಅನುಸರಿಸುತ್ತೇನೆ. ಮದುವೆಯಾದಾಗ ಟೋ ರಿಂಗ್ ಹಾಕಿಕೊಳ್ಳಬೇಕು ಎಂದು ಹೇಳ್ತಾರೆ. ಅದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಅನೇಕ ಪದ್ದತಿಗಳಿಗೆ ಸೈಂಟಿಫಿಕ್ ರೀಸನ್ ಇರುತ್ತದೆ ಅದನ್ನು ನಾನು ಅನುಸರಿಸುತ್ತೇನೆ. ಯಾರೋ ಒತ್ತಾಯ ಮಾಡಿದ್ರು ಅಂತಾ ಪ್ರಾಕ್ಟೀಸ್ ಗೆ ತಂದಿದ್ದು ಅಲ್ಲ. ಅದೊಂದು ಮೆಟಲ್ ಪೀಸ್ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವಿದೆ. ಯಾರೋ ಬಂದು ಏನೋ ಒಂದು ಹಾಕೋ ಅಂದ್ರೆ ನಾನು ಹಾಕೋಲ್ಲ. ಏಕೆಂದರೇ ಯಾವುದನ್ನೂ ದೇವರು ಬಂದು ಹೇಳೋದಿಲ್ಲ. ಸರಿಯಾದ ವೈಜ್ಞಾನಿಕ ಕಾರಣ ಹೇಳಿದ್ರೆ ನಾನು ಯಾವುದೇ ಸಂಪ್ರದಾಯವಾದರು ಸರಿ ಒಪ್ಪುಕೋತಿನಿ. ನಾನು ಬೆಳೆದ ಎರಡೂ ಧರ್ಮಗಳಲ್ಲಿ ನಾನು ಶ್ರದ್ದೆ ಹಾಗೂ ನಂಬಿಕೆಯನ್ನು ಹೊಂದಿದ್ದೇನೆ ಎಂದು ಆಕೆ ಹೇಳಿದ್ದಾರೆ. ಆಕೆಯ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಇನ್ನೂ ನಟಿ ಮೇಘನಾ ರಾಜ್ ತೆಲುಗಿನ ಬೆಂಡು ಅಪ್ಪಾರಾವ್ ಆರ್‍.ಎಂ.ಪಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಮೂಲದ ನಟಿಯಾದರೂ ಸಹ ಆಕೆ ಹೆಚ್ಚಾಗಿ ಮಲಯಾಳಂ ಸಿನೆಮಾಗಳಲ್ಲಿ ನಟಿಸಿದ್ದರು. ಜೊತೆಗೆ ತೆಲುಗು, ತಮಿಳು ಸಿನೆಮಾಗಳಲ್ಲೂ ಸಹ ನಟಿಸಿ ಬಹುಬೇಡಿಕೆ ನಟಿಯಾಗಿದ್ದರು. ಕಳೆದೆರಡು ವರ್ಷಗಳ ಹಿಂದೆಯಷ್ಟೆ ಆಕೆ ತನ್ನ ಪತಿಯನ್ನು ಕಳೆದುಕೊಂಡರು. ಪತಿಯನ್ನು ಕಳೆದುಕೊಂಡು ಕೆಲವು ವರ್ಷಗಳಾದ ಬಳಿಕ ಆಕೆ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಕಿರುತೆರೆ ಹಾಗೂ ಸಿನೆಮಾಗಳಲ್ಲಿ ನಟಿಸುತ್ತಾ ಕುಟುಂಬ ನಿರ್ವಹಣೆಯನ್ನು ಸಹ ನಡೆಸುತ್ತಿದ್ದಾರೆ. ಕೊನೆಯದಾಗಿ ಆಕೆ ತತ್ಸಮ ತದ್ಬವ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ರಿಯಲ್ ಸ್ಟಾರ್‍ ಉಪೇಂದ್ರ ಅಭಿನಯದ ಬುದ್ದಿವಂತ-2 ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ ಎನ್ನಲಾಗಿದೆ.

Most Popular

To Top