Film News

ಮದುವೆ ರೂಮರ್ ಗಳ ಬಗ್ಗೆ ರಿಯಾಕ್ಟ್ ಆದ ಮಹಾನಟಿ ಕೀರ್ತಿ ಸುರೇಶ್, ಪ್ರೀತಿ ವಿವಾಹದ ಬಗ್ಗೆ ಕೀರ್ತಿ ಪ್ರತಿಕ್ರಿಯೆ…!

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯುಳ್ಳ ನಟಿಯರ ಸಾಲಿಗೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಸಹ ಒಬ್ಬರಾಗಿದ್ದಾರೆ. ಮಹಾನಟಿ ಸಿನೆಮಾದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನಟಿಯಾಗಿ ಅವಾರ್ಡ್ ಪಡೆದುಕೊಂಡರು. ಕಳೆದ ವರ್ಷದಲ್ಲಿ ಸರ್ಕಾರುವಾರಿ ಪಾಠ, ಚಿನ್ನಿ ಮೊದಲಾದ ಹಿಟ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇತ್ತಿಚಿಗೆ ನಟಿ ಕೀರ್ತಿ ಸುರೇಶ್ ರವರ ವೈಯುಕ್ತಿಕ ವಿಚಾರಗಳ ಕಾರಣದಿಂದ ಸಖತ್ ಸುದ್ದಿಯಲ್ಲಿದ್ದಾರೆ. ಮದುವೆ ಬಗ್ಗೆ ಆಕೆಯ ವಿರುದ್ದ ಹರಿದಾಡಿದ ರೂಮರ್‍ ಗಳ ಬಗ್ಗೆ ಇದೀಗ ಕೀರ್ತಿ ರಿಯಾಕ್ಟ್ ಆಗಿದ್ದಾರೆ.

ನಟಿ ಕೀರ್ತಿ ಸುರೇಶ್ ರವರ ಬಗ್ಗೆ ಇತ್ತೀಚಿಗೆ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಈ ಮಲಯಾಳಂ ಕುಟ್ಟಿ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ಕೀರ್ತಿ ಸುರೇಶ್ ತನ್ನ ಬಾಲ್ಯದ ಸ್ನೇಹಿತನ್ನು ಮದುವೆಯಾಗಲಿದ್ದಾರೆ.  ಅವರೊಂದಿಗೆ ಪ್ರೀತಿಯಲ್ಲಿದ್ದಾರೆ. ಕಳೆದ ಹದಿಮೂರು ವರ್ಷಗಳಿಂದ ಈಕೆ ಆತನೊಂದಿಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಆತ ಕೇರಳದಲ್ಲಿ ರೆಸಾರ್ಟ್ ಒಂದನ್ನು ನಡೆಸುತ್ತಿದ್ದಾರೆ. ಆತನನ್ನೆ ಕೀರ್ತಿ ಮದುವೆಯಾಗಲಿದ್ದಾರೆ ಎಂದು ರೂಮರ್‍ ಗಲು ಕೇಳಿಬಂದವು. ಇನ್ನೂ ಈ ಸುದ್ದಿ ಎಲ್ಲಾ ಕಡೆ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ಇದೀಗ ಈ ಬಗ್ಗೆ ನಟಿ ಕೀರ್ತಿ ಸುರೇಶ್ ರಿಯಾಕ್ಟ್ ಆಗಿದ್ದು, ತನ್ನ ಮೇಲಿನ ರೂಮರ್‍ ಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಕೀರ್ತಿ ಸುರೇಶ್ ತನ್ನ ವಿರುದ್ದ ಹರಿದಾಡುತ್ತಿರುವ ಮದುವೆ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ತನ್ನ ವಿರುದ್ದ ಕೇಳಿಬರುತ್ತಿರುವ ರೂಮರ್‍ ಗಳಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ. ತಾನು ಯಾರೊಂದಿಗೂ ಪ್ರೀತಿಯಲ್ಲಿಲ್ಲ.  ಪ್ರೀತಿಸಿ ಮದುವೆಯಾಗುತ್ತೇನೆ ಎಂಬ ಬಗ್ಗೆ ಹರಿದಾಡುತ್ತಿರುವ ರೂಮರ್‍ ಗಳು ಕೇವಲ ಕಟ್ಟುಕಥೆಗಳು ಎಂದಿದ್ದಾರೆ. ಇನ್ನೂ ಈಗಾಗಲೇ ತನಗೆ ಮದುವೆಯಾಗುವ ಆಲೋಚನೆ ಇಲ್ಲ. ಈ ಸಮಯದಲ್ಲಿ ಇಂತಹ ಸುದ್ದಿಗಳ ಹರಿದಾಡುತ್ತಿರುವ ಬಗ್ಗೆ ಆಕೆ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ತಾನು ಮದುವೆಯಾಗುವ ಆಲೋಚನೆಯಲ್ಲಿಲ್ಲ ಎಂದು ಹೇಳುವ ಮೂಲಕ ಆಕೆ ತನ್ನ ವಿರುದ್ದದ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ.

ಸದ್ಯ ಕೀರ್ತಿ ಸುರೇಶ್ ತೆಲುಗಿನಲ್ಲಿ ನಾನಿ ಜೊತೆಗೆ ದಸರಾ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾ ಇದೇ ಮಾರ್ಚ್ 30 ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾದ ಟ್ರೈಲರ್‍ ಸಹ ಇತ್ತಿಚಿಗಷ್ಟೆ ಬಿಡುಗಡೆಯಾಗಿದೆ. ಈ ಸಿನೆಮಾದಲ್ಲಿ ನಾನಿ ಹಾಗೂ ಕೀರ್ತಿ ಸುರೇಶ್ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳು ಇವೆ ಎನ್ನಲಾಗಿದೆ.

Most Popular

To Top