ಮದುವೆಯಲ್ಲಿ ಪತಿಯೊಂದಿಗೆ ಡ್ಯಾನ್ಸ್ ಮಾಡಿದ ಗಂಟೆಗಳಲ್ಲೆ ಮೃತಪಟ್ಟ ನವ ವಧು….!

Follow Us :

ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ಸಮಯದಲ್ಲಿ ಸಾಯಬೇಕಾಗುತ್ತದೆ. ಯಾವ ಸಮಯದಲ್ಲಿ ಏನು ಆಗುತ್ತದೆ, ಯಾವಾಗ ಪ್ರಾಣ ಹೋಗುತ್ತದೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ ಎನ್ನಬಹುದು. ಇದೀಗ ಆಂಧ್ರಪ್ರದೇಶದ ಪಾರ್ವತಿಪುರಂ ಎಂಬ ಪ್ರದೇಶದಲ್ಲಿ ನವ ವಧು ಮದುವೆಯಾದ ಗಂಟೆಗಳಲ್ಲೇ ಇಹಲೋಕ ತ್ಯೆಜಿಸಿದ್ದಾಳೆ. ಈ ಘಟನೆ ಎರಡೂ ಕುಟುಂಬಗಳಲ್ಲೂ ವಿಷಾದ ತುಂಬಿದೆ ಎನ್ನಲಾಗುತ್ತಿದೆ.

ಪಾರ್ವತಿಪುರಂ ವ್ಯಾಪ್ತಿಯ ದಬ್ಬಗಡ್ಡ ಎಂಬ ಗ್ರಾಮದಲ್ಲಿ ಭಾಸ್ಕರ್‍ ರಾವ್ ಹಾಗೂ ಅಖಿಲ ಎಂಬ ಜೋಡಿ ಮದುವೆ ಮಾ.29 ರಂದು ಮದುವೆ ನಡೆದಿತ್ತು. ಬಳಿಕ ಮಾ.30 ರಂದು ಬೆಳಗಿನ ಜಾವ ಮದುವೆ ಮೆರವಣಿಗೆ ನಿರ್ವಹಿಸಿದ್ದರು. ಈ ವೇಳೆ ಡಿಜೆ ಹಾಡುಗಳಿಗೆ ಅನುಗುಣವಾಗಿ  ದಂಪತಿ ಕುಣಿದಿದ್ದಾರೆ. ಡ್ಯಾನ್ಸ್ ಆಡುತ್ತಾ ಅಖಿಲಾ ಸುಸ್ತಾಗಿದ್ದಾಳೆ. ಬಳಿಕೆ ಹೋಗಿ ನಿದ್ದ ಮಾಡಿದ್ದಾಳೆ. ನಂತರ ಅಖಿಲ ಕುಟುಂಬಸ್ಥರು ಹೋಗಿ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆ ಏಳಲೇ ಇಲ್ಲ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕಡೆದುಕೊಂಡು ಹೋಗಿದ್ದು, ಆಕೆಗೆ ಪ್ರಾಥಮಿಕ ಚಿಕಿತ್ಸೆ ಮಾಡಿದ್ದಾರೆ. ಬಳಿಕ ಆಕೆಯನ್ನು ಸಾಲೂರು ಎಂಬಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯರು ಆಕೆಯನ್ನು ಪರೀಕ್ಷೆ ಮಾಡಿದ್ದಾರೆ. ಅದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದ್ದಾರೆ.

ಮದುವೆ ನಡೆದ ಮುಂದಿನ ದಿನ ಅಖಿಲ ಉಪವಾಸ ಇದ್ದಾಳಂತೆ. ಮದುವೆ ದಿನ ಮೆರವಣಿಗೆಯ ವೇಳೆ ಆಕೆ ಡ್ಯಾನ್ಸ್ ಮಾಡಿದ್ದಾಳೆ. ಇದರಿಂದ ಡಿ ಹೈಡರೇಷನ್ ಕಾರಣದಿಂದ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಮದುವೆಯಾದ ಗಂಟೆಗಳಲ್ಲೇ ಅಖಿಲ ಮೃತಪಟ್ಟ ಹಿನ್ನೆಲೆಯಲ್ಲಿ ಇಬ್ಬರೂ ಕುಟುಂಬಗಳಲ್ಲೂ ಶೋಕ ಸಾಗರ ತುಂಬಿದೆ. ಕುಟುಂಬಸ್ಥರು ಮಾತ್ರವಲ್ಲದೇ ಸ್ಥಳೀಯರು ಸಹ ಈ ಘಟನೆಯ ಕಾರಣದಿಂದ ಕಣ್ಣೀರು ಹಾಕುತ್ತಿದ್ದಾರೆ.