ಶೋಭಿತಾ-ನಾಗಚೈತನ್ಯ ಡೇಟಿಂಗ್ ಬಗ್ಗೆ ಅಕ್ಕಿನೇನಿ ಅಖಿಲ್ ರಿಯಾಕ್ಷನ್ ಏನು ಗೊತ್ತಾ?

Follow Us :

ಅಕ್ಕಿನೇನಿ ಫ್ಯಾಮಿಲಿಯ ಯಂಗ್ ಹಿರೋ ಅಕ್ಕಿನೇನಿ ನಿಖಿಲ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ಏಜೆಂಟ್ ಶೀಘ್ರದಲ್ಲೇ ತೆರೆಗೆ ಬರಲಿದೆ. ಸ್ಪೈ ಆಕ್ಷನ್ ಥ್ರಿಲ್ಲರ್‍ ಕಥೆಯುಳ್ಳ ಈ ಸಿನೆಮಾದ ಬಿಡುಗಡೆಯ ನಿಮಿತ್ತ ಸಿನೆಮಾ ಪ್ರಮೋಷನ್ ಗಳೂ ಸಹ ಜೋರಾಗಿಯೇ ನಡೆಯುತ್ತಿವೆ. ನಿರ್ದೇಶಕ ಸುರೇಂದರ್‍ ರೆಡ್ಡಿ ಸಾರಥ್ಯದಲ್ಲಿ ಈ ಸಿನೆಮಾ ಮೂಡಿಬಂದಿದ್ದು, ಈ ಸಿನೆಮಾ ಇದೇ ಏ.28 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಹಾದಿಯಲ್ಲೇ ನಿಖಿಲ್ ಕೆಲವೊಂದು ಸಂದರ್ಶನದಲ್ಲಿ ಭಾಗಿಯಾಗುತ್ತಿತ್ತು. ಈ ವೇಳೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ವೇಳೆ ನಾಗಚೈತನ್ಯ ಹಾಗೂ ಶೋಭಿತಾ ಡೇಟಿಂಗ್ ಬಗ್ಗೆ ಸಹ ಪ್ರಶ್ನೆ ಎದುರಾಗಿದೆ.

ಸುಮಾರು ದಿನಗಳಿಂದ ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಲವ್ ಟ್ರಾಕ್ ನಡೆಯುತ್ತಿದೆ. ಅವರಿಬ್ಬರ ಬಗ್ಗೆ ಸದಾ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಗಳು ಕೇಳಿಬರುತ್ತಲೇ ಇದೆ. ಅನೇಕ ಬಾರಿ ಅವರಿಬ್ಬರು ಜೊತೆಗಿರುವ ಪೊಟೋಗಳೂ ಸಹ ವೈರಲ್ ಆಗಿದೆ. ಇತ್ತೀಚಿಗಷ್ಟೆ ಶೋಭಿತಾ ಹಾಗೂ ಚೈತನ್ಯ ಲಂಡನ್ ನ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದರು ಈ ಪೊಟೋ ಸಹ ಸಖತ್ ವೈರಲ್ ಆಗಿತ್ತು. ಇನ್ನೂ ಈ ಬಗ್ಗೆ ಶೋಭಿತಾ ಸಹ ರಿಯಾಕ್ಟ್ ಆಗಿದ್ದು, ಅದು ನಾನಲ್ಲ ಎಂದು ಕಾಮೆಂಟ್ ಸಹ ಮಾಡಿದ್ದರು. ಇದೀಗ ಏಜೆಂಟ್ ಸಿನೆಮಾದ ಪ್ರಮೋಷನ್ ನಿಮಿತ್ತ ಅಕ್ಕಿನೇನಿ ಅಖಿಲ್ ಗೆ ಈ ಡೇಟಿಂಗ್ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅಖಿಲ್ ಇಂಟ್ರಸ್ಟಿಂಗ್ ಉತ್ತರ ನೀಡಿದ್ದಾರೆ.

ಸಂದರ್ಶನದಲ್ಲಿ ನಿಮ್ಮ ಅಣ್ಣ ನಾಗಚೈತನ್ಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಯಾರೋ ಹುಡುಗಿಯೊಂದಿಗೆ ಕಾಣಿಸಿಕೊಂಡು ಹಾಟ್ ಟಾಪಿಕ್ ಆಗಿದ್ದಾರೆ. ಇನ್ನೂ ನಿಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನೆಯೊಂದು ಎದುರಾಗಿದೆ. ಇನ್ನೂ ಈ ಬಗ್ಗೆ ಅಖಿಲ್ ಉತ್ತರ ನೀಡಿದ್ದಾರೆ. ಆದರೆ ಅಖಿಲ್ ತನ್ನ ಬಗ್ಗೆ ಮಾತ್ರ ರಿಯಾಕ್ಟ್ ಆಗಿದ್ದಾರೆ. ನಾಗಚೈತನ್ಯ ರೂಮರ್‍ ಬಗ್ಗೆ ಏನು ಮಾತಾಡಿಲ್ಲ. ನನ್ನ ಪರಿಸ್ಥಿತಿ ಏಜೆಂಟ್ ಮೂವಿ, ಎರಡು ವರ್ಷಗಳಿಂದ ಕೂದಲು ಹಾಗೂ ಬಾಡಿ ಮೈಂಟೈನ್ ಮಾಡುವುದರಲ್ಲೇ ನನ್ನ ಸಮಯ ಕಳೆದಿದೆ. ಸದ್ಯ ನನ್ನ ಪೋಕಸ್ ಸಂಪೂರ್ಣವಾಗಿ ಸಿನೆಮಾಗಳ ಮೇಲಿದೆ ಎಂದು ಉತ್ತರಿಸಿದ್ದಾರೆ. ಸದ್ಯ ಅಖಿಲ್ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಏಜೆಂಟ್ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಅಖಿಲ್ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಹಿಂದೆ ಅಖಿಲ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‍ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನೂ ಏಪ್ರಿಲ್ 18 ರಂದು ಏಜೆಂಟ್ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಲಿದ್ದು, ಏ.28 ರಂದು ಈ ಸಿನೆಮಾದ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.