Film News

ಪ್ರಿನ್ಸ್ ಮಹೇಶ್ ಬಾಬು ಗೆ ಲೀಕ್ ಗಳ ಕಾಟ ತಪ್ಪುತ್ತಿಲ್ಲ, SSMB28 ಸಿನೆಮಾದಲ್ಲಿನ ಮಹೇಶ್ ಬಾಬು ಲುಕ್ ಲೀಕ್…!

ತೆಲುಗಿನಲ್ಲಿ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಮಹೇಶ್ ಬಾಬು ರವರ SSMB28 ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾವನ್ನು ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ಸರ್ಕಾರುವಾರಿ ಪಾಠ ಸಿನೆಮಾದ ಬಳಿಕ ಮಹೇಶ್ ಬಾಬು ರವರ SSMB28 ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆ ಹುಟ್ಟಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದೀಗ ಸಿನೆಮಾದ ಶೂಟಿಂಗ್ ನಿಂದ ಮಹೇಶ್ ಬಾಬು ಪೊಟೋ ಒಂದು ಲೀಕ್ ಆಗಿದ್ದು, ಪೊಟೋ ವೈರಲ್ ಆಗುತ್ತಿದೆ.

ನಟ ಮಹೇಶ್ ಬಾಬು ರವರ ಸಿನೆಮಾಗಳಿಗೆ ಈ ಲೀಕ್ ಕಾಟ ಪ್ರತಿಯೊಂದು ಸಿನೆಮಾಗಳಲ್ಲೂ ನಡೆಯುತ್ತಲೇ ಇದೆ. ಕೇವಲ ಮಹೇಶ್ ಬಾಬು ರವರ ಸಿನೆಮಾಗಳು ಮಾತ್ರವಲ್ಲ ಅನೇಕ ಸಿನೆಮಾಗಳಿಂದ ಈ ರೀತಿಯ ಲೀಕ್ ಗಳು ನಡೆಯುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆಯಷ್ಟೆ ಪುಷ್ಪಾ-2 ಸಿನೆಮಾದ ಶೂಟೀಂಗ್ ಸೆಟ್ ನಿಂದ ಅಲ್ಲು ಅರ್ಜುನ್ ಪೊಟೋ ಒಂದು ಲೀಕ್ ಆಗಿತ್ತು. ಇದೀಗ ಮಹೇಶ್ ಬಾಬು ರವರ SSMB28 ಸಿನೆಮಾ ಶೂಟಿಂಗ್ ನಿಂದ ಪೊಟೋ ಒಂದು ಲೀಕ್ ಆಗಿದೆ. ತಲೆಗೆ ಕರವಸ್ತ್ರ ಕಟ್ಟಿಕೊಂಡು ಮಾಸ್ ಗೆಟಪ್ ನಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಗೆಟಪ್ ನೋಡಿದರೇ ಮಹೇಶ್ ಬಾಬು ಅಭಿನಯದ ಪೋಕಿರಿ, ಶ್ರೀಮಂತುಡು ಸಿನೆಮಾದಲ್ಲಿನ ಗೆಟಪ್ ಗಳು ನೆನಪಿಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ.

ಮಹೇಶ್ ಬಾಬು ರವರ SSMB28 ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಈ ಸಿನೆಮಾದ ಶೂಟಿಂಗ್ ಬಹುತೇಕ ಮುಗಿಯಬೇಕಿತ್ತು. ಆದರೆ ಮಹೇಶ್ ಬಾಬು ರವರ ಮನೆಯಲ್ಲಿ ಸಾಲು ಸಾಲು ಮರಣಗಳು ಸಂಭವಿಸಿದ ಕಾರಣದಿಂದ ಸಿನೆಮಾ ಶೂಟಿಂಗ್ ಮುಂದೂಡಲಾಗಿತ್ತು. ಇದೀಗ ಸಿನೆಮಾ ಶೂಟಿಂಗ್ ತುಂಬಾ ವೇಗವಾಗಿ ನಡೆಯುತ್ತಿದೆ. ಇನ್ನೂ ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದು, ಈ ಹಿಂದೆ ಅವರಿಬ್ಬರ ಕಾಂಬಿನೇಷನ್ ನಲ್ಲಿ ಅತಡು, ಖಲೇಜಾ ಸಿನೆಮಾಗಳು ತೆರೆಗೆ ಬಂದಿತ್ತು. ದಶಕಗಳ ಬಳಿಕ ಇದೀಗ ಅವರಿಬ್ಬರ ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ ಸಿನೆಮಾ ಇದಾಗಿದೆ. ಇನ್ನೂ ಈ ಹಿಂದೆ ಅಂದುಕೊಂಡಂತೆ ಎಲ್ಲಾ ನಡೆದಿದ್ದರೇ 2023 ರ ಸಮ್ಮರ್‍ ನಲ್ಲೇ ಸಿನೆಮಾ ಬಿಡುಗಡೆಯಾಗಬಹುದಿತ್ತು. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೇ ವರ್ಷದ ಅಂತ್ಯಕ್ಕೆ ಈ ಸಿನೆಮಾ ತೆರೆಕಾಣಬಹುದು ಎಂದು ಸಹ ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರಾಯ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಸಿನೆಮಾದ ಜೊತೆಗೆ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ನಲ್ಲೂ ಸಹ ಸಿನೆಮಾ ಒಂದು ಘೋಷಣೆಯಾಗಿದ್ದು, ಈ ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಸಹ ಪೂರ್ಣಗೊಂಡಿದೆ ಎನ್ನಲಾಗುತ್ತಿದ್ದು. ಎರಡೂ ಸಿನೆಮಾಗಳ ಶೂಟಿಂಗ್ ನಲ್ಲಿ ಮಹೇಶ್ ಬಾಬು ಭಾಗಿಯಾಗುತ್ತಾರೆ ಎನ್ನಲಾಗುತ್ತಿದೆ.

Most Popular

To Top