ನಿಮಗೆ ನಿದ್ದೆಯಾದರೂ ಹೇಗೆ ಬರುತ್ತದೆ ಎಂದ ಹಾಟ್ ಆಂಕರ್ ರಶ್ಮಿ…!

Follow Us :

ತೆಲುಗಿನಲ್ಲಿ ಕಿರುತೆರೆ ಹಾಗೂ ಸಿನೆಮಾಗಳು ಎರಡಲ್ಲೂ ಮುನ್ನುಗ್ಗುತ್ತಿರುವ ನಟಿಯರಲ್ಲಿ ಜಬರ್ದಸ್ತ್ ಖ್ಯಾತಿಯ ರಶ್ಮಿ ಸಹ ಒಬ್ಬರಾಗಿದ್ದಾರೆ. ರಶ್ಮಿ ಕಿರುತೆರೆಯ ಮೂಲಕ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಂಡರು. ಅದರಲ್ಲೂ ಆಕೆಗೆ ತುಂಬಾ ಕ್ರೇಜ್ ತಂದುಕೊಟ್ಟಿದ್ದು ಜಬರ್ದಸ್ತ್ ಕಾಮಿಡಿ ಶೋ ಎನ್ನಬಹುದಾಗಿದೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು, ಹಾಟ್ ಪೊಟೋಶೂಟ್ಸ್ ಗಳು ಹಾಗೂ ವಿಡಿಯೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ನಟಿ ರಶ್ಮಿ ಶಾಕಿಂಗ್ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ನಿಮಗೆ ನಿದ್ದೆಯಾದರೂ ಹೇಗೆ ಬರುತ್ತದೆ ಎಂದು ಆಕ್ರೋಷಗೊಂಡಿದ್ದಾರೆ.

ಹಾಟ್ ಆಂಕರ್‍ ಕಂ  ನಟಿ ರಶ್ಮಿ ಗೌತಮ್ ಪ್ರಾಣಿ ಪ್ರೇಮಿಯಾಗಿದ್ದಾರೆ. ಮೂಕ ಜೀವಿಗಳನ್ನು ಯಾರಾದರೂ ಹಿಂಸೆ ಮಾಡಿದರೇ ಕೂಡಲೇ ರಿಯಾಕ್ಟ್ ಆಗುತ್ತಾರೆ. ಮೂಕ ಜೀವಗಳನ್ನು ಯಾವುದೇ ರೂಪದಲ್ಲಾದರೂ ಸಹ ಹಿಂಸೆ ಮಾಡಬಾರದು ಎಂದು ಆಕೆ ಬಯಸುತ್ತಾರೆ. ಈ ಕಾರಣದಿಂದಲೇ ಆಕೆ ಹಾಲು ಕುಡಿಯುವುದಿಲ್ಲ, ಜೊತೆಗೆ ಹಾಲಿನಿಂದ ತಯಾರಾದ ಯಾವುದೇ ಆಹಾರವನ್ನು ಸಹ ಆಕೆ ಸೇವಿಸುವುದಿಲ್ಲ. ಆಕೆ ಸಂಪೂರ್ಣವಾಗಿ ಸಸ್ಯಹಾರವನ್ನೇ ಸೇವಿಸುತ್ತಾರೆ. ಇನ್ನೂ ಮೂಕ ಜೀವಿಗಳಿಗೆ ಏನಾದರೂ ಹಿಂಸೆಯಾಗಿದ್ದು ಆಕೆಯ ಗಮನಕ್ಕೆ ಬಂದರೇ ಕೂಡಲೇ ರಿಯಾಕ್ಟ್ ಆಗುತ್ತಾರೆ. ಸೋಷಿಯಲ್ ಮಿಡಿಯಾ ವೇದಿಕೆಯಾಗಿಸಿಕೊಂಡು ಪ್ರಾಣಿ ಹಿಂಸೆ ವಿರುದ್ದ ಹೋರಾಡುತ್ತಾರೆ. ಜೊತೆಗೆ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಸಹ ಮಾಡುತ್ತಿರುತ್ತಾರೆ. ಕಳೆದ ಸಂಕ್ರಾಂತಿ ಹಬ್ಬದಂದು ಆಂಧ್ರಪ್ರದೇಶದಲ್ಲಿ ನಡೆದ ಕೋಳಿ ಪಂದ್ಯಗಳ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಆಕೆ ಗುಡುಗಿದ್ದಾರೆ.

ಇತ್ತೀಚಿಗೆ ರಶ್ಮಿ ಬುಲ್ ಫೈಟ್ ಗೇಮ್ ಗೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಯೂರೋಪ್ ನಲ್ಲಿ ಬುಲ್ ಫೈಟ್ ಸಂಪ್ರದಾಯಿಕ ಕ್ರೀಡೆಯಾಗಿದೆ. ಆದರೆ ಈ ಕ್ರೀಡೆಯ ಕಾರಣದಿಂದ ಪ್ರಾಣಿಗಳು ಹಿಂಸೆಗೆ ಗುರಿಯಾಗುತ್ತದೆ ಎಂಬ ವಾದ ಸಹ ಸುಮಾರು ದಿನಗಳಿಂದ ನಡೆಯುತ್ತಲೇ ಇದೆ. ಇನ್ನೂ ಅಲ್ಲಿನ ಪೆಟಾ ಎಂಬ ಸಂಸ್ಥೆಯೊಂದು ಸಹ ಈ ಕ್ರೀಡೆಯನ್ನು ನಿಷೇಧ ಮಾಡಬೇಕೆಂದು ಡಿಮ್ಯಾಂಡ್ ಸಹ ಮಾಡುತ್ತಿದೆ. ಇನ್ನೂ ರಶ್ಮಿ ಪೆಟಾ ಸಂಸ್ಥೆ ಶೇರ್‍ ಮಾಡಿದ ವಿಡಿಯೋ ವನ್ನು ರಿಪೋಸ್ಟ್ ಮಾಡಿ ಕಾಮೆಂಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇಂತಹ ಆಟಗಳ ಮೂಲಕ ಸಂತೋಷ ಪಡುವಂತಹವರಿಗೆ ರಾತ್ರಿ ಸಮಯದಲ್ಲಿ ನಿದ್ದೇಯಾದರೂ ಹೇಗೆ ಬರುತ್ತದೆ. ಮೂಕ ಜೀವಿಗಳ ಪ್ರಾಣಗಳನ್ನು ಬಲಿತೆಗೆದುಕೊಳ್ಳುವ ಈ ಆಟ ನಿಮಗೇ ವಿನೋದವೇ, ನೀವು ಅದು ಹೇಗೆ ಪ್ರಶಾಂತವಾಗಿರುತ್ತೀರಿ ಎಂದು ಪ್ರಶ್ನೆ ಮಾಡುವ ಟ್ವೀಟ್ ಮಾಡಿದ್ದಾರೆ.

ಇನ್ನೂ ರಶ್ಮಿ ತಮ್ಮ ಸಿನೆಮಾಗಳು, ಕಿರುತೆರೆ ಶೋಗಳ ನಡುವೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗುತ್ತಿರುತ್ತಾರೆ. ಇನ್ನೂ ಆಕೆಯ ಈ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿರುತ್ತದೆ. ಜೊತೆಗೆ ಕೆಲವರು ಆಕೆಯನ್ನು ವಿಮರ್ಶೆ ಸಹ ಮಾಡುತ್ತಿರುತ್ತಾರೆ. ಆದರೆ ರಶ್ಮಿ ಮಾತ್ರ ಇದ್ಯಾವುದನ್ನು ತಲೆಕೆಡಿಸಿಕೊಳ್ಳದೇ ತಾನು ಮಾತ್ರ ಪ್ರಾಣಿಹಿಂಸೆ ವಿರುದ್ದ ಧ್ವನಿ ಎತ್ತುತ್ತಲೇ ಇರುತ್ತಾರೆ.