News

ವಿಶ್ವದಲ್ಲಿ ಶಾಂತಿ ನೆಲಸಲು ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ಸಾಧ್ಯ ಎಂದ ಥಾಯ್ಲೆಂಡ್ ಪ್ರಧಾನಿ ಥಾವಿಸನ್…..!

ಹಿಂದೂ ಧರ್ಮ ಹಾಗೂ ಹಿಂದೂ ಧರ್ಮದ ಮೌಲ್ಯಗಳ ಬಗ್ಗೆ ಥಾಯ್ಲೆಂಡ್ ಪ್ರಧಾನಿ ಸ್ರೇತ್ಥಾ ಧಾವಿಸನ್ ಮಾತನಾಡಿದ್ದಾರೆ. ವಿಶ್ವ ಹಿಂದೂ ಕಾಂಗ್ರೇಸ್ ಸಮ್ಮೇಳನದಲ್ಲಿ ಜಗತ್ತಿಗೆ ಮಹತ್ವದ ಸಂದೇಶ ಸಾರಿದ್ದು, ಅವರ ಸಂದೇಶ ಭಾರಿ ಸಂಚಲನ ಸೃಷ್ಟಿಸಿದೆ ಜೊತೆಗೆ ಅನೇಕರಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಇನ್ನೂ ಈ ಸಮ್ಮೇಳನದಲ್ಲಿ 61 ದೇಶದ 2200ಕ್ಕೂ ಹೆಚ್ಚು ವಿದ್ವಾಂಸರು ಭಾಗಿಯಾಗಿದ್ದರು. ಶಿಕ್ಷಣ, ಆರ್ಥಿಕತೆ, ಸಾಮಾಜಿಕ, ವಿಜ್ಞಾನ, ಅಭಿವೃದ್ದಿ, ಮಾದ್ಯಮ, ಸಂಸ್ಕೃತಿ, ಪರಂಪರೆ ಸೇರಿದಂತೆ ಹಲವು ಹಿಂದೂ ಜೀವನ ಪದ್ದತಿಗಳ ಕುರಿತು ಸಂವಾದ ನಡೆಸಲಾಯಿತು.

ವಿಶ್ವದಲ್ಲಿ ಅನೇಕ ಕಡೆ ಧಾರ್ಮಿಕ ಕಾರಣಗಳಿಂದ ಯುದ್ದಗಳು, ಭಯೋತ್ಪಾದಕ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಥಾಯ್ಲೆಂಡ್ ಪ್ರಧಾನಿ ಸ್ರೇತ್ಥಾ ಧಾವಿಸನ್ ನೀಡಿದ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ವಿಶ್ವ ಎದುರಿಸುತ್ತಿರುವಂತಹ ಅಶಾಂತಿಯ ವಾತವರಣವನ್ನು ನಿಮೂರ್ಲಣೆ ಮಾಡಲು ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಲು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಹಿಂದೂ ಧರ್ಮದ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಸಂದೇಶ ಸಾರಿದ್ದಾರೆ. ವಿಶ್ವ ಹಿಂದೂ ಕಾಂಗ್ರೇಸ್ ಸಮ್ಮೇಳನದಲ್ಲಿ ಅವರು ಈ ಸಂದೇಶ ಸಾರಿದ್ದಾರೆ. ಹಿಂದೂ ಜೀವನ ಮೌಲ್ಯಗಳಾದ ನ್ಯಾಯ, ಸತ್ಯ, ಸಹಬಾಳ್ವೆ, ಸಹಿಷ್ಣುತೆ, ಅಹಿಂಸೆಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲಿದೆ. ಹಿಂದೂ ಸಮಾಜ ಅಭಿವೃದ್ದಿಪರ ಹಾಗೂ ಪ್ರತಿಭಾನ್ವಿತರ ಒಕ್ಕೂಟವಾಗಿದೆ ಎಂದಿದ್ದಾರೆ.

ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ ಥಾಯ್ಲೆಂಡ್ ಪ್ರಧಾನಿ ಭಾಗಿಯಾಗಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. ಆದರೆ ಅವರ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗಿತ್ತು. ಅವರ ಸಂದೇಶದಲ್ಲಿರುವಂತೆ ಥಾಯ್ಲೆಂಡ್ ನಲ್ಲಿ ಹಿಂದೂ ಸಮ್ಮೇಳವಾಗುತ್ತಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಹಿಂದೂ ಜೀವನ ಪದ್ದತಿ, ಆದರ್ಶ, ಜೀವನ ಮೌಲ್ಯಗಳ ಕುರಿತು ಚರ್ಚಿಸುವುದೇ ಅತ್ಯಂತ ಆನಂದದ ಕಾರ್ಯಕ್ರಮ. ವೇದ-ಉಪನಿಷತ್ತುಗಳ ಮೌಲ್ಯಗಳನ್ನು ಇಂದಿನ ಪೀಳಿಗೆ ತಿಳಿಯುವ ಅವಶ್ಯಕತೆ ತುಂಬಾನೆ ಇದೆ. ಸುಮಾರು ಸಾವಿರಾರು ವರ್ಷಗಳ ಹಿಂದೆ ಹಿಂದೂ ಸಮಾಜ ಎಲ್ಲರನ್ನೂ ಬೆಳೆಸಿ, ಎಲ್ಲರ ಜೊತೆ ಸಹಬಾಳ್ವವೆ ನಡೆಸಿದೆ ಎಂದು ಅವರು ಹೇಳಿದ್ದಾರೆ.

Most Popular

To Top