News

ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನ ಪಡೆದ ಗಣ್ಯರು, ರಸ್ತೆಯುದ್ದಕ್ಕೂ ಹರಿದ ಕಣ್ಣೀರು….!

ಕಳೆದೆರಡು ದಿನಗಳ ಹಿಂದೆಯಷ್ಟೆ ಕಾಶ್ಮೀರದ ರಜೌರಿಯಲ್ಲಿ ನಡೆದ ಉಗ್ರರ ನಡುವಣ ಕಾಳಗದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ರವರ ಅಂತಿಮ ಸಂಸ್ಕಾರ ಕೂಡ್ಲು ಗೇಟ್ ನ ಸೋಮಸುಂದರ ಪಾಳ್ಯ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದ್ದು, ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಜನ ಭಾಗಿಯಾಗಿದ್ದರು. ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಅಂತಿಮ ಯಾತ್ರೆಯ ರಸ್ತೆಯುದ್ದಕ್ಕೂ ಕಣ್ಣಿರು ಹರಿದಿದೆ.

ಹುತಾತ್ಮ ಯೋಧ ಪ್ರಾಂಜಲ್ ರವರ ಪ್ರಾರ್ಥೀವ ಶರೀರ ಅವರ ಸ್ವಗೃಹ ನಂದನವನ ಬಡಾವಣೆಯಿಂದ ಸುಮಾರು 30 ಕಿ.ಮೀ ಯಾತ್ರೆಯ ಮೂಲಕ ಮೆರವಣಿಗೆ ಮಾಡಲಾಯಿತು. ಯಾತ್ರೆಗೂ ಮುನ್ನಾ ವೀರ ಯೋಧನಿಗೆ ಶಾಲಾ ಮಕ್ಕಳಿಂದ ಅಂತಿಮ ನಮನ ಸಲ್ಲಿಸಲಾಯಿತು. ತ್ರಿವರ್ಣ ಧ್ವಜ ಹಿಡಿದು ವಂದನೆ ಮಾಡುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ರಸ್ತೆಯುದ್ದಕ್ಕೂ ಜನರು ಅಂತಿಮ ವಿದಾಯ ಸಲ್ಲಿಸಿದರು. ಇನ್ನೂ ಯಾತ್ರೆಯ ವೇಳೆ ರಸ್ತೆಯುದ್ದಕ್ಖೂ ಸಾವಿರಾರು ಸಂಖ್ಯೆಯ ಜನರು ಜಮಾಯಿಸಿದ್ದರು. ರಸ್ತೆ ಬದಿ ನಿಂತ ಜನರು ಅವರ ಪಾರ್ಥೀವ ಶರೀರಕ್ಕೆ ಪುಷ್ಪಾರ್ಚನೆ ಮಾಡುತ್ತಾ, ಜೈಹಿಂದ್, ಭಾರತ್ ಮಾತಾಕಿ ಜೈ, ಪ್ರಾಂಜಲ್ ಅಮರ್‍ ರಹೇ ಎಂಬ ಘೋಷಣೆಗಳನ್ನು ಕೂಗೂತ್ತಾ ಕಣ್ಣೀರಾಕಿದರು.

ಇನ್ನೂ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ 9.30 ರವರೆಗೂ ಅವಕಾಶ ಕಲ್ಪಿಸಲಾಗಿತ್ತು. 9.45 ರಿಂದ 10.15 ರವರೆಗೆ ಗಣ್ಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಯೋಧನ ಅಂತಿಮ ದರ್ಶನ ಪಡೆದು ಎಲ್ಲರೂ ಕಣ್ಣೀರಾಕಿದರು. ರಾಜ್ಯಪಾಲ ಥಾವರ್‍ ಚಂದ್ ಗೆಹ್ಲೋಟ್ ರವರು, ಪ್ರಾಂಜಲ್ ಅಂತಿಮ ಗೌರವ ನಮನ ಸಲ್ಲಿಸಿ ನಂತ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದರು. ಇನ್ನೂ ತಾತ್ಮ ಯೋಧ ಪ್ರಾಂಜಲ್ ಅವರ ದೇಶಸೇವೆ, ಸಮರ್ಪಣೆ ಚಿರಸ್ಮರಣೀಯ. ಮನೆಗೆ ಆಧಾರವಾಗಿದ್ದ ಪ್ರಾಂಜಲ್‌ರನ್ನು ಕಳೆದುಕೊಂಡು ಕುಟುಂಬಸ್ಥರು ಸಂಕಷ್ಟದಲ್ಲಿದ್ದಾರೆ, ಅವರ ಕಷ್ಟಕ್ಕೆ ಹೆಗಲಾಗುವ ಉದ್ದೇಶದಿಂದ ರಾಜ್ಯ ಸರ್ಕಾರದ ವತಿಯಿಂದ ರೂ. 50 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Most Popular

To Top