ಕೊನೆಗೂ ನಟಿ ತ್ರಿಷಾಗೆ ಕ್ಷಮೆ ಕೇಳಿದ ನಟ ಮನ್ಸೂರ್, ಅವರ ವಿವಾಹ ದಿನದಂದು ಆರ್ಶಿವಾದ ಮಾಡುವ ಅವಕಾಶ ಬರಲಿ ಎಂದ ನಟ…..!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ತ್ರಿಷಾ ರವರ ಬಗ್ಗೆ ಖಳನಾಯಕ ಮನ್ಸೂರ್‍ ಅಲಿ ಖಾನ್ ರವರ ವಿರುದ್ದ ಭಾರಿ ಆಕ್ರೋಷ ವ್ಯಕ್ತವಾಗಿತ್ತು. ಅಭಿಮಾನಿಗಳು, ಸಾಮಾನ್ಯರಿಂದ ಹಿಡಿದು ಅನೇಕ ಸ್ಟಾರ್‍ ನಟ-ನಟಿಯರು ಸಹ ಮನ್ಸೂರ್‍ ಅಲಿ ಖಾನ್ ವಿರುದ್ದ ಆಕ್ರೋಷ ಹೊರಹಾಕಿದರು. ಜೊತೆಗೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಹ ದೂರು ಹಾಗೂ ಕೋರ್ಟ್ ಮೆಟ್ಟಿಲು ಏರುತ್ತಿದ್ದಂತೆ ಮನ್ಸೂರ್‍ ಇದೀಗ ತನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾರೆ. ನಿಮ್ಮ ಮದುವೆ ದಿನದಂದು ಮಾಂಗಲ್ಯವನ್ನು ಮುಟ್ಟಿ ಆರ್ಶಿವಾದ ಮಾಡುವಂತಹ ಅವಕಾಶ ನನಗೆ ಬರಲಿ ಎಂದು ಹೇಳುವ ಮೂಲಕ ಕ್ಷಮೆ ಕೇಳಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ಮನ್ಸೂರ್‍ ಆಲಿಖಾನ್ ತ್ರಿಷಾ ರವರ ಬಗ್ಗೆ ಕೀಳಾಗಿ ಮಾತನಾಡಿದ್ದರು. ನಾನು ಲಿಯೋ ಸಿನೆಮಾದಲ್ಲಿ ನಟಿಸುತ್ತಿದ್ದೇನೆ ಎಂದು ನನಗೆ ತಿಳಿದಾಗ ತ್ರಿಷಾ ಜೊತೆ ಅತ್ಯಚಾರದಂತಹ ದೃಶ್ಯಗಳು ಇರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಷಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೂ ಸಹ ಬರಬಹುದೆಂದು ಊಹೆ ಮಾಡಿದ್ದೆ. ಆಕೆಯ ಜೊತೆಗೆ ಬೆಡ್ ರೂಂ ದೃಶ್ಯಗಳಲ್ಲಿ ನಟಿಸುಬಹುದೆಂದು ಅಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇರ್ಶ ಕನಕರಾಜ್  ಕನಿಷ್ಟ ಪಕ್ಷ ತ್ರಿಷಾ ರವರನ್ನೂ ಸಹ ತೋರಿಸಲಿಲ್ಲ. ಈಗಾಗಲೇ ನಾನು ಅನೇಕ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಆದರೆ ತ್ರಿಷಾ ಜೊತೆಗೆ ಇದು ನನಗೆ ಹೊಸದು ಎಂದು ಭಾವಿಸಿದ್ದೇ ಎಂದು ಮನ್ಸೂರ್‍ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಕಾರಣದಿಂದ ಮನ್ಸೂರ್‍ ವಿರುದ್ದ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನೈನ ಥೌಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೊಟೀಸ್ ಸಹ ನೀಡಲಾಗಿತ್ತು.

ಈ ವೇಳೆ ಆತ ಅನಾರೋಗ್ಯದ ನೆಪವೊಡ್ಡಿ  ಪೊಲೀಸ್ ಠಾಣೆಗೂ ಹಾಜರಾಗಿಲ್ಲ. ಆದರೆ ಜಾಮೀನು ಅರ್ಜಿಯನ್ನು ಸಹ ಸಲ್ಲಿಸಿ, ಬಳಿಕ ಮನಸ್ಸು ಬದಲಿಸಿದ ಆತ ಪೊಲೀಸ್ ಠಾಣೆಗೆ ಹಾಜರಾಗಿದ್ದ. ಇನ್ನೂ ಜಾಮೀನು ಅರ್ಜಿಯಲ್ಲಿ ದೊಷವಿದ್ದು ನಿರೀಕ್ಷಿತ ಜಾಮೀನು ಸಹ ಸ್ವೀಕೃತವಾಗಿಲ್ಲ. ಈ ಕಾರಣದಿಂದ ನ್ಯಾಯಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಆತನಿಗೆ ಛೀಮಾರಿ ಸಹ ಹಾಕಿದ್ದಾರೆ ಎಂದು ಸಹ ಹೇಳಲಾಗಿತ್ತು. ಇದೀಗ ಆತ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದು, ತ್ರಿಷಾ ರವರಲ್ಲಿ ಕ್ಷಮೆ ಕೇಳಿದ್ದಾರೆ. ನನ್ನ ಸಹನಟಿ ತ್ರಿಷಾ ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ವಿವಾಹಕ್ಕೆ ಬಂದು ಆರ್ಶಿವಾದಿಸುವ ಸೌಭಾಗ್ಯ ಆ ದೇವರು ನನಗೆ ಕೊಡಲಿ ಎಂದು ಮನ್ಸೂರ್‍ ಆಲಿ ಖಾನ್ ಪೋಸ್ಟ್ ಮೂಲಕ ಕ್ಷಮೆ ಕೇಳಿದ್ದಾರೆ.