Film News

ನಟ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಮದುವೆ ಮೈಸೂರಿನಲ್ಲಿ, ರಿಸೆಪ್ಷನ್ ಬೆಂಗಳೂರಿನಲ್ಲಿ, ಅಧಿಕೃತ ಮಾಹಿತಿ ಕೊಟ್ಟ ಜೋಡಿ…!

ಚಂದನವನದಲ್ಲಿ ಸಖತ್ ಸದ್ದು ಮಾಡಿದ್ದು ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ಮದುವೆ ವಿಚಾರ. ಕ್ಷಣ ಮಾತ್ರದಲ್ಲೇ ಅವರ ಸುದ್ದಿ ಸಿಡಿಲು ಬಡಿದಂಗೆ ಕೇಳಿಬಂತು. ಕನ್ನಡ ಸಿನಿರಂಗದ ಸ್ಟಾರ್‍ ಕಲಾವಿದರಾದ ಹರಿಪ್ರಿಯಾ ಹಾಗೂ ವಸಿಷ್ಟ ಸುಮಾರು ದಿನಗಳಿಂದ ಪ್ರೀತಿ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿಯ ಎಂಗೇಜ್ ಮೆಂಟ್ ಸಹ ನಡೆದಿದ್ದು ಇದೀಗ ಈ ಜೋಡಿ ಜ.26 ರಂದು ಸಪ್ತಪದಿ ತುಳಿಯಲಿದೆ. ಈ ಬಗ್ಗೆ ಮದುವೆ ವಿಚಾರವನ್ನು ಸುದ್ದಿಗೋಷ್ಟಿ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಚಂದನವನದ ಖ್ಯಾತ ನಟರಾದ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಹೊಸ ವರ್ಷದ ಆರಂಭದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಜನವರಿ 26 ರಂದು ಈ ಜೋಡಿ ಅದ್ದೂರಿಯಾಗಿ ನಡೆಯಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿಯ ಮದುವೆ ನಡೆಯಲಿದೆ. ಇನ್ನೂ ಮದುವೆಗೆ ಸಂಬಂಧಿಸಿದ ವಿಚಾರವನ್ನು ಹಂಚಿಕೊಳ್ಳಲು ಈ ಜೋಡಿ ಬೆಂಗಳೂರಿನ ಕೆ.ಸಿ. ಪ್ಯಾಲೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನು ನಡೆಸಿ, ಸುದ್ದಿಗೋಷ್ಟಿಯಲ್ಲಿ ತಮ್ಮ ಮದುವೆಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ವಸಿಷ್ಟ ಸಿಂಹ ನಾವು ಲವ್ ಮಾಡಿದ್ದೇವೆ. ಆದರೆ ಇದೀಗ ಆರೆಂಜ್ ಮ್ಯಾರೆಜ್ ಆಗುತ್ತಿದೆ. ನಮ್ಮ ಕುಟುಂಬಸ್ಥರು ಎಲ್ಲರೂ ಸೇರಿ ಈ ಮದುವೆ ಮಾಡುತ್ತಿದ್ದಾರೆ. ನಾವು ತುಂಭಾ ಅದ್ದೂರಿಯಾಗಿ ಮದುವೆ ಆಗುತ್ತಿದ್ದೇವೆ. ಮೈಸೂರಿನಲ್ಲಿ ಮದುವೆಯಾಗಲಿದ್ದು, ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ ಎಂದಿದ್ದಾರೆ.

ಇನ್ನೂ ವಿಮಾನ ನಿಲ್ದಾಣದಲ್ಲಿನ ಪೊಟೋ, ನಿಶ್ಚಿತಾರ್ಥ ಪೊಟೋ ಬಂದಿದ್ದು ನೋಡಿದೆ. ನಾನು ನಾಯಿ ಮರಿಯೊಂದನ್ನು ಕೊಟ್ಟು ಹರಿಪ್ರಿಯಾರನ್ನು ಪಟಾಯಿಸಿದೆ ಎಂಬ ಸುದ್ದಿ ಸಹ ಬಂತು. ಆದರೆ ನಾನು ಪ್ರೀತಿಸಿದ ಬಳಿಕ ಆ ನಾಯಿಮರಿಯನ್ನು ಕೊಟ್ಟಿದ್ದು, ಕಳೆದ 2016 ರಲ್ಲಿ ನಮ್ಮ ಸ್ನೇಹ ಆರಂಭವಾಯಿತು. ನನ್ನ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನೆಮಾ ನೋಡಿದ ಬಳಿಕ ಹರಿಪ್ರಿಯಾ ನನಗೆ ಶುಭಾಷಯ ಕೋರಿದ್ದರು. ಬಳಿಕ ನಮ್ಮಿಬ್ಬರ ನಡುವೆ ಪ್ರೀತಿ ಆರಂಭ ಆಗಿತ್ತು. ನಾನು ಮೈಸೂರಿನ ಹುಡುಗನಾದ ಕಾರಣದಿಂದ ನಾನು ಅಲ್ಲೇ ಮದುವೆಯಾಗಲು ಇಷ್ಟಪಟ್ಟಿದ್ದು ಅದರಂತೆ ಅಲ್ಲೇ ಮದುವೆಯಾಗುತ್ತಿದ್ದೇನೆ. ನನ್ನ ಜೀವನದಲ್ಲಿ ಎದುರಾದ ಕಷ್ಟದ ದಿನಗಳಲ್ಲಿ ಹರಿಪ್ರಿಯಾ ನನಗೆ ತುಂಬಾ ಸಪೋರ್ಟ್ ಮಾಡಿದ್ದರು ಎಂದಿದ್ದಾರೆ.

ಇನ್ನೂ ವಸಿಷ್ಟ ಹರಿಪ್ರಿಯಾ ಪ್ರೀತಿಗೆ ಕೋವಿಡ್ ಲಾಕ್ ಡೌನ್ ತುಂಬಾ ಕಾರಣವಂತೆ. ಸಮಯ ಸಿಗುತ್ತಿದ್ದ ಕಾರಣದಿಂದ ತುಂಬಾ ಮಾತನಾಡಲು ಅವಕಾಶ ಸಿಕ್ಕಿತಂತೆ. ಇನ್ನೂ ಹರಿಪ್ರಿಯಾ ಮಾತು ಆಕೆಯ ನಡವಳಿಕೆ ವಸಿಷ್ಟರನ್ನು ತುಂಬಾ ಇಂಪ್ರೆಸ್ ಮಾಡಿತ್ತಂತೆ. ಜೊತೆಗೆ ನಾನು ಮಾನಸಿಕವಾಗಿ ಕಷ್ಟದಲ್ಲಿದ್ದಾಗ ಅದರಿಂದ ಹೊರತಂದಿದ್ದು ಹರಿಪ್ರಿಯಾ ಎಂದು ವಸಿಷ್ಟ ತಿಳಿಸಿದ್ದಾರೆ. ಇದೇ ರೀತಿ ಅನೇಕ ವಿಚಾರಗಳನ್ನು ಮಾದ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ.

Most Popular

To Top