ಕೊನೆಗೂ ಮದುವೆಯಾದ ರಾಖಿ ಸಾವಂತ್ ಹಾಗೂ ಆದಿಲ್, ಎರಡನೇ ಬಾರಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ರಾಖಿ….!

Follow Us :

ಬಾಲಿವುಡ್ ನಟಿಯರಲ್ಲಿ ಭಿನ್ನವಾದ ನಟಿ ಎಂದರೇ ಅದರು ರಾಖಿ ಸಾವಂತ್ ಎಂದರೇ ತಪ್ಪಾಗಲಾರದು. ಐಟಂ ಸಾಂಗ್ ಗಳಿಗೆ ಹಾಗೂ ಸ್ವಯವರಂ ಎಂಬ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದುಕೊಂಡ ಈಕೆ ರಿತೇಶ್ ಸಿಂಗ್ ಜೊತೆ ಮದುವೆಯಾದರು. ಬಳಿಕ ಬ್ರೇಕ್ ಅಪ್ ಆದರು. ಇದೀಗ ಮೈಸೂರು ಮೂಲದ ಆದಿಲ್ ಎಂಬಾತನೊಂದಿಗೆ ಪ್ರೇಮ ಪಯಣ ಸಾಗಿಸುತ್ತಿದ್ದರು. ಇದೀಗ ಅವರು ರಿಜಿಸ್ಟರ್‍ ಮದುವೆಯಾಗಿದ್ದು, ಕೆಲವೊಂದು ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ಸುದ್ದಿಯಿಂದ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಮೈಸೂರು ಮೂಲಕ ಉದ್ಯಮಿ ಆದಿಲ್ ಎಂಬಾತನೊಂದಿಗೆ ರಾಖಿ ಸುಮಾರು ತಿಂಗಳುಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದರು. ಇದೀಗ ಇಬ್ಬರೂ ರಿಜಿಸ್ಟರ್‍ ಮದುವೆಯಾಗಿದ್ದಾರೆ. ಆದರೆ ರಾಖಿಯಾಗಲಿ ಅಥವಾ ಆದಿಲ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಇಬ್ಬರ ಮದುವೆ ಪೊಟೋಗಳಂತೂ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಆದರೆ ಈ ಸುದ್ದಿಯ ವೈರಲ್ ಆಗುತ್ತಿದ್ದಂತೆ ಆದಿಲ್ ಅದನ್ನು ನಿರಾಕರಿಸಿದ್ದು, ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಬಾಲಿವುಡ್ ಹಾಟ್ ಬಾಂಬ್ ರಾಖಿ ಸಾವಂತ್ ಹಾಗೂ ಉದ್ಯಮಿ ಆದಿಲ್ ದುರಾನಿ ಸುಮಾರು ತಿಂಗಳುಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದರು. ಈಗಾಗಲೇ ಅನೇಕ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಈ ಹಿಂದೆ ಆದಿಲ್ ರಾಖಿ ಸಾವಂತ್ ಗೆ ದುಬಾರಿ BMW ಕಾರನ್ನು ನೀಡುವ ಮೂಲಕ ರಾಖಿಗೆ ಆದಿಲ್ ಪ್ರಪೋಸ್ ಮಾಡಿದ್ದರು. ಜೊತೆಗೆ ಮನೆಯೊಂದನ್ನು ಸಹ ಖರೀದಿಸಿ ಕೊಟ್ಟಿದ್ದ. ಅನೇಕ ಬಾರಿ ಅವರಿಬ್ಬರೂ ಬೇರೆಯಾಗಿದ್ದಾರೆ ಎಂಬ ರೂಮರ್‍ ಗಳೂ ಸಹ ಕೇಳಿಬಂದವು. ಬಳಿಕ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಕಳೆದ ಜನವರಿ 11 ರಂದು ನ್ಯಾಯಾಲಯದಲ್ಲಿ ನಿಗೂಡವಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪೊಟೋಗಳೂ ಸಹ ವೈರಲ್ ಆಗುತ್ತಿವೆ.

ಇನ್ನೂ ರಾಖಿ ಸಾವಂತ್ ಈಗಾಗಲೇ ರಿತೇಶ್ ಎಂಬಾತನೊಂದಿಗೆ ಮದುವೆಯಾಗಿದ್ದರು. ರಾಖಿ ಆತ ನನಗೆ ಹಿಂಸೆ ಕೊಡುತ್ತಿದ್ದಾನೆ ಎಂದು ಆರೋಪಿಸಿ ಆತನಿಂದ ಬೇರೆಯಾದರು. ಅತ್ತ ರಿತೇಶ್ ಸಹ ರಾಖಿ ಬಗ್ಗೆ ಅನೇಕ ಹೇಳಿಕೆಗಳನ್ನು ಸಹ ನೀಡಿದ್ದರು. ಇದೀಗ ಆದಿಲ್ ಹಾಗೂ ರಾಖಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿದ್ದು, ಪೊಟೋಗಳು ಸಹ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಅವರು ಅಧಿಕೃತವಾಗಿ ಪ್ರಕಟಿಸಬೇಕಿದೆ.