Film News

ಶಾರುಕ್ ಪುತ್ರ ಆರ್ಯನ್ ಖಾನ್ ಜೊತೆಗೆ ಪಾಕಿಸ್ತಾನಿ ನಟಿ ಡೇಟಿಂಗ್, ಈ ಬಗ್ಗೆ ಪಾಕಿಸ್ತಾನಿ ನಟಿ ಸ್ಪಷ್ಟನೆ..!

ಕಳೆದ ಕೆಲವು ದಿನಗಳಿಂದ ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಡೇಟಿಂಗ್ ರೂಮರ್‍ ಗಳು ಜೋರಾಗಿಯೇ ಹರಿದಾಡಿತ್ತು. ಮೊದಲಿಗೆ ನೋರಾ ಫತೇಹಿ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಸುದ್ದಿ ಕೇಳಿಬಂತು. ಬಳಿಕ ಪಾಕಿಸ್ತಾನಿ ಮೂಲದ ನಟಿ ಸಾದಿಯಾ ಖಾನ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅವರಿಬ್ಬರ ಪೊಟೋ ಸಹ ವೈರಲ್ ಆಗುತ್ತಿತ್ತು. ಇದೀಗ ಈ ಬಗ್ಗೆ ನಟಿ ಸಾದಿಯಾ ಖಾನ್ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ನಟ ಶಾರುಖ್ ಖಾನ್ ಪು‌ತ್ರ ಆರ್ಯನ್ ಕುಮಾರ್‍ ಪಾಕಿಸ್ತಾನಿ ಮೂಲದ ನಟಿ ಸಾಧಿಯಾ ಖಾನ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡಿತ್ತು. ಇದಕ್ಕೆ ಅವರಿಬ್ಬರ ಪೊಟೋ ಒಂದು ಸಹ ಸಖತ್ ವೈರಲ್ ಆಗಿತ್ತು. ಇನ್ನೂ ಈ ಸುದ್ದಿ ಜೋರಾಗಿಯೇ ಹರಿದಾಡುತ್ತಿದ್ದಂತೆ ಈ ಬಗ್ಗೆ ನಟಿ ಸಾದಿಯಾ ಸಹ ರಿಯಾಕ್ಟ್ ಆಗಿದ್ದಾರೆ. ಇತ್ತೀಚಿಗಷ್ಟೆ ಪಾಕಿಸ್ತಾನಿ ನಟಿ ಸಾಧಿಯಾ ಹಾಗೂ ಆರ್ಯನ್ ಖಾನ್ ದುಬೈನಲ್ಲಿ ಹೊಸ ವರ್ಷವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಇಬ್ಬರೂ ಪೊಟೋಗಳಿಗೆ ಪೋಸ್ ಕೊಟ್ಟಿದ್ದರು. ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಸಹ ಆಗಿತ್ತು. ಈ ಪೊಟೋದಲ್ಲಿ ಅವರಿಬ್ಬರೂ ತುಂಬಾ ಕ್ಲೋಜ್ ಆಗಿ ಕಾಣಿಸಿಕೊಂಡ ಕಾರಣದಿಂದ ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹರಿದಾಡಲು ಶುರುವಾಗಿತ್ತು.

ಇನ್ನೂ ಈ ಪೊಟೋ ಹೊರಬರುತ್ತಿದ್ದಂತೆ ಆರ್ಯನ್ ಪಾಕಿಸ್ತಾನ್ ಮಾಡಲ್ ಕಂ ನಟಿ ಸಾದಿಯಾ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲಾ ಕಥನಗಳು ಹರಿದಾಡಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾದಿಯಾ ಖಾನ್ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಏನು ತಿಳಿಯದೇ ಈ ರೀತಿಯಾಗಿ ನನ್ನ ಬಗ್ಗೆ ಹಾಗೂ ಆರ್ಯನ್ ಬಗ್ಗೆ ಈ ರೀತಿ ಏಕೆ ಸುದ್ದಿ ಹಬ್ಬಿಸುತ್ತೀರಾ, ಏನಕ್ಕಾದರೂ ಒಂದು ಲಿಮಿಟ್ ಇರುತ್ತದೆ. ಅದನ್ನು ಬಿಟ್ಟು ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ವಿಚಿತ್ರವಾಗಿದೆ. ಪೊಟೋ ತೆಗೆಸಿಕೊಂಡರೇ ಡೆಟಿಂಗ್ ಮಾಡುತ್ತಿದ್ದೇವೆ ಎಂದು ಫಿಕ್ಸ್ ಆಗುತ್ತೀರಾ, ಪೊಟೋ ತೆಗೆಸಿಕೊಂಡ ಮಾತ್ರಕ್ಕೆ ನಾವು ಡೇಟಿಂಗ್ ಮಾಡುತ್ತಿದ್ದೇವೆ ಎಂದು ಅಲ್ಲ. ನಾನೊಬ್ಬಳೇ ಆರ್ಯನ್ ಜೊತೆಗೆ ಪೊಟೋ ತೆಗೆಸಿಕೊಂಡಿಲ್ಲ. ಇನ್ನೂ ಕೆಲವರು ಇದ್ದಾರೆ. ಅವರೂ ಸಹ ಆ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ನನ್ನ ಮೇಲೆ ಇಂತಹ ರೂಮರ್‍ ಸೃಷ್ಟಿಸಿದ್ದಾರೆ ಎಂದು ಆಗ್ರಹಿಸಿದ್ದಾರೆ.

ಇನ್ನೂ ಆರ್ಯನ್ ಖಾನ್ ಬಗ್ಗೆ ಅನೇಕ ಬಾರಿ ಇಂತಹ ರೂಮರ್‍ ಗಳು ಬರುತ್ತಲೇ ಇರುತ್ತದೆ. ಬಾಲಿವುಡ್ ನಟಿ ನೋರಾ ಫತೇಹಿ ಜೊತೆಗೂ ಸಹ ಆರ್ಯನ್ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಈ ಹಿಂದೆ ಡ್ರಗ್ಸ್ ಕೇಸ್ ನಲ್ಲೂ ಸಹ ಆರ್ಯನ್ ಹೆಸರು ಕೇಳಿಬಂದಿತ್ತು. ಇನ್ನೂ ಸದಾ ವಿವಾದಗಳು ಆರ್ಯನ್ ಸುತ್ತಾ ಇರುತ್ತದೆ ಎಂದರೇ ತಪ್ಪಾಗಲಾರದು. ಇದೀಗ ಪಾಕಿಸ್ತಾನಿ ನಟಿ ಸಾದಿಯಾ ಖಾನ್ ತಮ್ಮ ಬಗೆಗಿನ ಡೇಟಿಂಗ್ ರೂಮರ್‍ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ.

Most Popular

To Top