ಚಂದ್ರಯಾನ-3 ಯಶಸ್ಸಿಗೆ ರಾಜ್ಯದ ವಿವಿಧ ಕಡೆ ವಿಶೇಷ ಪ್ರಾರ್ಥನೆ, ಹೋಮ ಹವನಗಳ ಮೂಲಕ ಪ್ರಾರ್ಥನೆ….!

Follow Us :

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವದ ಸಾಹಸಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಚಂದ್ರಯಾನ-3 ಯಶಸ್ವಿಯಾಗಲಿ ಎಂದು ರಾಜ್ಯದಾದ್ಯಂತೆ ವಿಶೇಷ ಪ್ರಾರ್ಥನೆ ಮಾಡಲಾಗುತ್ತಿದೆ. ಹೋಮ ಹವನಗಳ, ದರ್ಗಾದಲ್ಲಿ ಪೂಜೆ ಗಳನ್ನು ಮಾಡಲಾಗುತ್ತಿದೆ.

ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಬೆಂಗಳೂರಿನ ದೊಡ್ಡ ಗಣೇಶ ದೇಗುಲದಲ್ಲಿ ಚಂದ್ರಯಾನ-3 ರಾಕೆಟ್ ಪೋಸ್ಟರ್‍ ಇಟ್ಟು ಕನ್ನಡ ಅಭಿಮಾನಿ ರಾಮಚಂದ್ರ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಜಯಪುರದಲ್ಲೂ ಸಹ ಹೋಮ ಹವನ ನಡೆಸಲಾಗಿದೆ. ಕೋಲಾರದ ಶಕ್ತಿ ದೇವತೆ ಕೋಲರಮ್ಮನ ದೇವಾಲಯದಲ್ಲಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ವಿಕ್ರಂ ಲ್ಯಾಡರ್‍ ಯಶಸ್ವಿಯಾಗಿ ಲ್ಯಾಂಡ್ ಮಾಡಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ.

ಇನ್ನೂ ವಿಜಯಪುರ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಚಂದ್ರಯಾನ ಯಶಸ್ವಿಯಾಗಿ ನಡೆಯಲಿ ಎಂದು ಪೋಸ್ಟರ್‍ ಹಾಗೂ ತ್ರಿವರ್ಣ ಧ್ವಜ ಹಿಡಿದು ಜೈಕಾರ ಕೂಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಶಿವಪ್ಪ ನಾಯಕ ವೃತ್ತದ ಹಜರತ್ ಸೈಯದ್ ರಾಜ್ ಬಕ್ಷ್ ವಲಿ ಅಲ್ಲಾಹ್ ದರ್ಗಾದಲ್ಲಿ ಚಂದ್ರಯಾನದ ಯಶಸ್ವಿಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ನಮಾಜ್ ನಂತರ ಮುಸ್ಲೀಂ ಸಮುದಾಯದವರು ದರ್ಗಾ ಸಮಿತಿಯ ವತಿಯಿಂದ ಪ್ರಾರ್ಥನೆ ಸಲ್ಲಿಸಲಾಗಿದೆ. ಬಳಿಕ ದಾವಣಗೆರೆ ಶಾಮನೂರಿನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಶಾಮನೂರು ತಿಮ್ಮಾರೆಡ್ಡಿ ಇಂಟರ್‍ ನ್ಯಾಷನಲ್ ಶಾಲಾ ಆಡಳಿತ ಹಾಗೂ ಮಕ್ಕಳು ಕುಂಕುಮಾರ್ಚಾನೆ ಮತ್ತು ವಿಶೇಷ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಗಿದೆ. ಕಳೆದ ಭಾರಿಯಂತೆ ನೋವು ವಿಜ್ಞಾನಿಗಳು ಅನುಭವಿಸಬಾರದು ಎಂದು ಮಕ್ಕಳು ಪ್ರಾರ್ಥಿಸಿದರು.